60 ವರ್ಷದಲ್ಲಿ ಮಾಡದ್ದನ್ನು ಕಾಂಗ್ರೆಸ್​​ ಈಗ ಮಾಡಲು ಸಾಧ್ಯವೇ?: ‘ನ್ಯಾಯ್​​ ಯೋಜನೆ’ ಬಗ್ಗೆ ಮೋದಿ ವ್ಯಂಗ್ಯ!

1984ರ ಸಿಖ್​ ವಿರೋಧಿ ದಂಗೆ ಬಲಿಪಶುಗಳಿಗೆ, ಭೋಪಾಲ್​​ ಗ್ಯಾಸ್​​ ದುರಂತದಲ್ಲಿ ಸತ್ತ ಕುಟುಂಬಗಳಿಗೆ, ಸಾಲಮನ್ನಾ ನೆಪದಲ್ಲಿ ಮೋಸ ಮಾಡಿದ ಮಧ್ಯಪ್ರದೇಶ, ಚತ್ತೀಸ್​​ಗಡ, ರಾಜಸ್ಥಾನ ಜನತೆಗೆ, ಪಟೇಲ್​​ ಬೋಸ್​​ ಮತ್ತು ಪಿ.ವಿ ನರಸಿಂಹ ರಾವ್​​ ಅವರಿಗೆ ಕಾಂಗ್ರೆಸ್​​ ನ್ಯಾಯ ಒದಗಿಸಲು ಸಾಧ್ಯವೇ- ಪ್ರಧಾನಿ ಪ್ರಶ್ನೆ

Ganesh Nachikethu | news18
Updated:April 9, 2019, 3:18 PM IST
60 ವರ್ಷದಲ್ಲಿ ಮಾಡದ್ದನ್ನು ಕಾಂಗ್ರೆಸ್​​ ಈಗ ಮಾಡಲು ಸಾಧ್ಯವೇ?: ‘ನ್ಯಾಯ್​​ ಯೋಜನೆ’ ಬಗ್ಗೆ ಮೋದಿ ವ್ಯಂಗ್ಯ!
ಪ್ರಧಾನಿ ಮೋದಿ
  • News18
  • Last Updated: April 9, 2019, 3:18 PM IST
  • Share this:
ನವದೆಹಲಿ(ಏ.04): ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಕಾಂಗ್ರೆಸ್​​ ಬಿಡುಗಡೆ ಮಾಡಿರುವ "ಅಬ್ ಹೋಗಾ ನ್ಯಾಯ್" ಘೋಷವಾಕ್ಯವನ್ನು ಪ್ರಧಾನಿ ನರೇಂದ್ರ ಮೋದಿಯವರು ಲೇವಡಿ ಮಾಡಿದ್ಧಾರೆ. ನ್ಯೂಸ್​​-18 ಎಕ್ಸ್​​ಕ್ಲೂಸಿವ್​​ ಸಂದರ್ಶನದಲ್ಲಿ ಮಾತಾಡಿದ ಪ್ರಧಾನಿಗಳು, ಕಾಂಗ್ರೆಸ್​​ ತನ್ನ 60 ವರ್ಷ ಅಧಿಕಾರವಧಿಯಲ್ಲಿ ದೇಶದ ಬಡತನೆ ನಿವಾರಣೆ ಮಾಡುವಲ್ಲಿ ವಿಫಲವಾಗಿದೆ. ತಾನು ಅಧಿಕಾರದಲ್ಲಿದ್ದಾಗ ಮಾಡದನ್ನು, ಈಗ ‘ನ್ಯಾಯ್​​’ ಯೋಜನೆ ಮೂಲಕ ಮಾಡುತ್ತೇನೆ ಎನ್ನುತ್ತಿದೆ. ಇದನ್ನು ಜನ ನಂಬಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇಷ್ಟು ವರ್ಷದಲ್ಲಿ ಬಡತನ ನಿರ್ಮೂಲನೆ ಮಾಡದ ಕಾಂಗ್ರೆಸ್​​, ಈಗ ಮಾಡಲಿದೆ ಎಂದರೆ ನಂಬಲಿಕ್ಕೆ ಸಾಧ್ಯವೇ.  1984ರ ಸಿಖ್​ ವಿರೋಧಿ ದಂಗೆ ಬಲಿಪಶುಗಳಿಗೆ, ಭೋಪಾಲ್​​ ಗ್ಯಾಸ್​​ ದುರಂತದಲ್ಲಿ ಸತ್ತ ಕುಟುಂಬಗಳಿಗೆ, ಸಾಲಮನ್ನಾ ನೆಪದಲ್ಲಿ ಮೋಸ ಮಾಡಿದ ಮಧ್ಯಪ್ರದೇಶ, ಚತ್ತೀಸ್​​ಗಡ, ರಾಜಸ್ಥಾನ ಜನತೆಗೆ, ಪಟೇಲ್​​ ಬೋಸ್​​ ಮತ್ತು ಪಿ.ವಿ ನರಸಿಂಹ ರಾವ್​​ ಅವರಿಗೆ ಕಾಂಗ್ರೆಸ್​​ ನ್ಯಾಯ ಒದಗಿಸಲು ಸಾಧ್ಯವೇ. ಇಷ್ಟು ಜನಕ್ಕೂ ಮೋಸ ಮಾಡಿದ ಕಾಂಗ್ರೆಸ್​​ ಜನರಿಗೆ ನೀಡಿದ ‘ನ್ಯಾಯ್​​’ ಯೋಜನೆ ಭರವಸೆ ಗೆದ್ದ ಮೇಲೆ ಈಡೇರಿಸುತ್ತದೆಂದು ಹೇಗೆ ನಂಬುವುದು ಎಂದರು.

ಇತ್ತೀಚೆಗೆ ಕಾಂಗ್ರೆಸ್​​ ತನ್ನ ಚುನಾವಣೆ ಪ್ರಣಾಳಿಕೆ ರಿಲೀಸ್​​ ಮಾಡಿತ್ತು. ಚುನಾವಣಾ ಪ್ರಚಾರಕ್ಕಾಗಿಯೇ "ಅಬ್ ಹೋಗಾ ನ್ಯಾಯ್" ಘೋಷವಾಕ್ಯವನ್ನು ಬಿಡುಗಡೆ ಮಾಡಿದೆ. ದೇಶದ ಎಲ್ಲಾ ವರ್ಗಗಳಿಗೆ ನ್ಯಾಯ ಒದಗಿಸುವುದು ಈ ಘೋಷವಾಕ್ಯದ ಹೆಗ್ಗುರಿ ಎಂದು ಹೇಳಲಾಗಿತ್ತು. ಬಡವರಿಗೆ ಕನಿಷ್ಠ ಆದಾಯ ಜೊತೆಗೆ ದೇಶದ ಎಲ್ಲರಿಗೂ ಸಾಮಾಜಿಕ ನ್ಯಾಯ ಮತ್ತು ಸ್ಥಿರತೆ ಒದಗಿಸುವುದು ಪಕ್ಷದ ಧ್ಯೇಯ ಎಂದು ಕೂಡ ಕಾಂಗ್ರೆಸ್​​ ಹೇಳಿತ್ತು.

ಇದನ್ನೂ ಓದಿ: ಮಾಯಾವತಿ ಮುಳುಗುತ್ತಿರುವ ಹಡಗು; ಬಚಾವಾಗಲು ಮುಸ್ಲಿಮರತ್ತ ಕೈಚಾಚಿದ್ದಾರೆ: ಪ್ರಧಾನಿ ಮೋದಿ

ಈ ಹಿಂದೆಯೂ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಬಡತನ ನಿರ್ಮೂಲನೆ ಬಗ್ಗೆ ಮಾತಾಡುತ್ತದೆ. ಕಾಂಗ್ರೆಸ್ ಘೋಷಿಸಿರುವ​ ಕನಿಷ್ಠ ಆದಾಯ ಯೋಜನೆಯಿಂದ ದೇಶದಲ್ಲಿ ಹಣದುಬ್ಬರ ಉಂಟಾಗಲಿದೆ. ಚುನಾವಣೆ ಹೊತ್ತಲಿಯೇ ಮಾತ್ರ ಯಾಕೇ ಇವರು ಸುಳ್ಳು ಭರವಸೆಗಳನ್ನು ನೀಡುತ್ತಾರೆ. ಕಾಂಗ್ರೆಸ್ಸಿಗೆ ನಿಜವಾಗಿಯೂ ಬಡತನ ನಿರ್ಮೂಲನೆ ಮಾಡಬೇಕೆಂಬ ಕಾಳಜಿ ಇಲ್ಲ. ಕೇವಲ ವೋಟಿಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ಸೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ವ್ಯಂಗ್ಯವಾಡಿದ್ಧಾರೆ.

ಇದನ್ನೂ ಓದಿ: AFSPA ಹಿಂಪಡೆಯುವುದೂ ಒಂದೇ, ದೇಶ ಕಾಯುವ ಸೈನಿಕರನ್ನು ಗಲ್ಲಿಗೇರಿಸುವುದೂ ಒಂದೇ: ಪ್ರಧಾನಿ ಮೋದಿ

ಚುನಾವಣಾ ಪ್ರಚಾರದ ಭಾಗವಾಗಿ ಒರಿಸ್ಸಾದಲ್ಲಿ ಬಿಜೆಪಿ ಸಾರ್ವಜನಿಕ ಸಮಾವೇಶವನ್ನು ಹಮ್ಮಿಕೊಂಡಿತ್ತು. ಇಲ್ಲಿ ವೇದಿಕೆ ಮೇಲೆ ಸಾರ್ವಜನಿಕರನ್ನುದ್ಧೇಶಿಸಿ ಮಾತಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ದಶಕಗಳಿಂದ ಬಡತನ ನಿರ್ಮೂಲನೆ ಬಗ್ಗೆ ಹೇಳುತ್ತಲೇ ಬರುತ್ತಿದೆ. ಆದರೂ ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿದಿದ್ದಾರೆ. ಇದರಲ್ಲಿ ಹೆಚ್ಚು ಶ್ರೀಮಂತರು ಕಾಂಗ್ರೆಸ್​ ಪಕ್ಷದವರೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.--------------
First published: April 9, 2019, 11:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading