Fact Check: ನಿಕಾನ್ ಕ್ಯಾಮರಾಕ್ಕೆ ಕ್ಯಾನನ್ ಲೆನ್ಸ್ ಕವರ್ ಬಳಸಿದರೇ ಪ್ರಧಾನಿ ಮೋದಿ?

ಮಮತಾ ಬ್ಯಾನರ್ಜಿಯವರೇ, ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉತ್ತಮ ವ್ಯಕ್ತಿಯನ್ನು ನಿಮ್ಮ ಪಕ್ಷದಲ್ಲಿ ನೇಮಿಸಿಕೊಳ್ಳಿ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಮುಖಂಡ ಸುಕಾಂತ ಮಜುಂದಾರ್ ವಾಗ್ದಾಳಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾದ ಚಿತ್ರ

ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾದ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ (Madhya Pradesh Kuno National Park) ನಮೀಬಿಯಾದಿಂದ ತಂದ ಚೀತಾಗಳನ್ನು ಬಿಡುಗಡೆ ಮಾಡುವಾಗ ಸ್ವತಃ ಫೋಟೋಗಳನ್ನೂ ಕ್ಲಿಕ್ಕಿಸಿದ್ದರು. ಇದೇ ವಿಷಯವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮೋದಿಯವರನ್ನು (PM Narendra Modi) ಟೀಕಿಸಿವೆ. ಅಲ್ಲದೇ ಅವರು ಫೋಟೋ ಕ್ಲಿಕ್ಕಿಸುತ್ತಿರುವ ಚಿತ್ರಗಳು ಎಡಿಟ್ ಮಾಡಿರುವ ಇಮೇಜ್​ಗಳೆಂದು ವ್ಯಂಗ್ಯ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಕ್ಯಾಮರಾ ಲೆನ್ಸ್ ಮೇಲೆ ಕವರ್ ಮುಚ್ಚಿಕೊಂಡೇ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಹಲವರು ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ನಿಕಾನ್ ಕ್ಯಾಮರಾಕ್ಕೆ ಕ್ಯಾನನ್ ಕ್ಯಾಮರಾ ಲೆನ್ಸ್ ಕವರ್ (Nikon Camera With Canon Cover)ಬಳಸಿದ್ದಾರೆ ಎಂದು ಸಹ ವಿರೋಧ ಪಕ್ಷಗಳು ಸೇರಿದಂತೆ ಹಲವಟು ಟೀಕಿಸುತ್ತಿದ್ದಾರೆ. ಆದರೆ ಈ ಎಲ್ಲ ಟೀಕೆ, ಟ್ರೋಲ್​ಗಳಲ್ಲಿ (Fact Check) ಸತ್ಯ ಇದೆಯೇ?  ಈ ಕುರಿತು ಬಿಜೆಪಿ ಸ್ಪಷ್ಟನೆ ಏನು? ವಿವರ ಇಲ್ಲಿದೆ ನೋಡಿ.

ಹೀಗೆ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕರು ಸೇರಿದಂತೆ ವಿರೋಧಿ ಪಾಳಯ ಟೀಕಿಸುತ್ತಿದ್ದಂತೆ, ಟ್ರೋಲ್​ಗಳನ್ನು ಹರಿಬಿಡುತ್ತಿದ್ದಂತೆ ಬಿಜೆಪಿ ಸಹ ತಕ್ಷಣ ಎಚ್ಚೆತ್ತಿದೆ. ಈ ಟ್ರೋಲ್​ಗಳ ಬಗ್ಗೆ ಆಗಿದ್ದಾಗ್ಗೆ ಫ್ಯಾಕ್ಟ್ ಚೆಕ್ ವಿವರ ಪ್ರಕಟಿಸಿರುವ ಬಿಜೆಪಿ, ಇದೊಂದು ಮಾರ್ಫ್​ಡ್ ಇಮೇಜ್ ಎಂದು ಸ್ಪಷ್ಟೀಕರಣ ನೀಡಿದೆ.

ಟಿಎಂಸಿ ಸಂಸದ ಮಾಡಿದ ಟ್ರೋಲ್


ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಅವರು ಪ್ರಧಾನಿ ಮೋದಿ ಫೋಟೋ ತೆಗೆಯುತ್ತಿರುವ ಮಾರ್ಫ್ ಮಾಡಿದ ಚಿತ್ರವನ್ನು ಷೇರ್ ಮಾಡಿದ್ದಾರೆ. ಟಿಎಂಸಿ ರಾಜ್ಯಸಭಾ ಸಂಸದ ನಿಕಾನ್ ಕ್ಯಾಮೆರಾ- ಕ್ಯಾನನ್ ಕವರ್‌ ಇರುವ ಎಡಿಟ್ ಮಾಡಲಾದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ನಕಲಿ ಪ್ರಚಾರವನ್ನು ಹರಡಲು ಇಂತಹ ಕೆಟ್ಟ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿಯವರೇ, ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದಿರುವ ಉತ್ತಮ ವ್ಯಕ್ತಿಯನ್ನು ನಿಮ್ಮ ಪಕ್ಷದಲ್ಲಿ ನೇಮಿಸಿಕೊಳ್ಳಿ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಮುಖಂಡ ಸುಕಾಂತ ಮಜುಂದಾರ್ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Shocking News: 60 ಯುವತಿಯರು ಸ್ನಾನ ಮಾಡುವ ವಿಡಿಯೋ ಲೀಕ್



ಆದರೆ ಕೆಲವೇ ಕ್ಷಣಗಳ ನಂತರ ಟಿಎಂಸಿ ಸಂಸದ ಜವಾಹರ್ ಸಿರ್ಕಾರ್ ತಮ್ಮ ಟ್ರೋಲ್ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: Naxals Surrendered: 700 ಸಕ್ರಿಯ ನಕ್ಸಲರು, ಮಾವೋವಾದಿ ಬೆಂಬಲಿಗರಿಂದ ಶರಣಾಗತಿ

ನಮೀಬಿಯಾದಿಂದ ಚೀತಾ; ಕನ್ನಡಿಗರ ಪರಿಶ್ರಮವೂ ಇದೆ
ನಮೀಬಿಯಾದಿಂದ ಭಾರತಕ್ಕೆ ತಲುಪಿದ ಚಿರತೆಗಳು ಪ್ರಯಾಣ ತುಂಬಾನೇ ರೋಚಕವಾಗಿತ್ತು. ಯಾವುದೇ ಅಪಾಯವಾಗದಂತೆ ಚಿರತೆಗಳನ್ನು ಭಾರತಕ್ಕೆ ಕರೆತರುವಲ್ಲಿ ಕನ್ನಡಿಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಡಾ.ಸನತ್ ಕೃಷ್ಣ ಮುಳಿಯ ಅವರ ಶ್ರಮ ಇದೆ. ಸನತ್ ಕೃಷ್ಣ ಮೂಲತಃ ಪುತ್ತೂರು ಪರಿಸರದ ನಿವಾಸಿಗಳು. ಸದ್ಯ ದೆಹಲಿಯ ಪರಿಸರ ಸಚಿವಾಲಯದಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವೇಕಾನಂದ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಸನತ್, ನಂತರ ಬೆಂಗಳೂರಿನ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿದ್ದಾರೆ.
Published by:ಗುರುಗಣೇಶ ಡಬ್ಗುಳಿ
First published: