Modi: ಅಮ್ಮನೊಂದಿಗೆ ಅಪರೂಪದ ಕ್ಷಣ ಕಳೆದ ಮೋದಿ! ಮಗನಿಗೆ ಊಟ ಬಡಿಸಿ, ಆಶೀರ್ವದಿಸಿದ ತಾಯಿ

ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಊಟ ಮಾಡಿ, ಕೆಲ ಕಾಲ ಕಳೆದಿದ್ದಾರೆ. ಈ ಅಪರೂಪದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಫೋಟೋಗಳೆಲ್ಲ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.

ತಾಯಿ ಜೊತೆಗಿನ ಪ್ರಧಾನಿ ಅಪರೂಪದ ಕ್ಷಣಗಳು

ತಾಯಿ ಜೊತೆಗಿನ ಪ್ರಧಾನಿ ಅಪರೂಪದ ಕ್ಷಣಗಳು

  • Share this:
ಗುಜರಾತ್‌: “ಊರಿಗೆ ಅರಸನಾದರೂ ತಾಯಿಗೆ ಮಗ” ಅನ್ನೋ ಗಾದೆ ಮಾತಿದೆ (Proverb). ಈ ಮಾತು ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಹಾಗೂ ಅವರ ತಾಯಿ (Mother) ಹೀರಾಬೆನ್‌ (Heeraben) ಅವರನ್ನು ನೋಡಿದರೆ ಸತ್ಯ ಅಂತ ಅನಿಸುತ್ತದೆ. ಮಗ (Son) ಯಾವುದೇ ಸ್ಥಾನದಲ್ಲಿ ಇರಲಿ, ಅವನ ಹತ್ತಿರ ಯಾವುದೇ ಅಧಿಕಾರ ಇರಲಿ. ಆದರೆ ಆತ ಮಾತ್ರ ತಾಯಿಗೆ (Mother) ಗೌರವಿಸಲೇ ಬೇಕು ಎನ್ನುವುದು ಭಾರತೀಯ (Indian) ಸಂಸ್ಕೃತಿ (Culture). ಈ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಸತ್ಯವಾಗಿಸಿದ್ದಾರೆ. ಗುಜರಾತ್ (Gujrat) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ಊಟ ಮಾಡಿ, ಕೆಲ ಕಾಲ ಕಳೆದಿದ್ದಾರೆ. ಈ ಅಪರೂಪದ ಕ್ಷಣಗಳು ಕ್ಯಾಮೆರಾದಲ್ಲಿ (Camera) ಸೆರೆಯಾಗಿದ್ದು, ಈ ಫೋಟೋಗಳೆಲ್ಲ (Photos) ಸೋಶಿಯಲ್ ಮೀಡಿಯಾಗಳಲ್ಲಿ (Social Media) ವೈರಲ್ (Viral) ಆಗಿವೆ.

 ಗುಜರಾತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ

ಪಂಚ ರಾಜ್ಯಗಳ ಚುನಾವಣೆ ಗೆಲುವಿನ ಬಳಿಕ ಬಿಜೆಪಿ ಮುಂದಿನ ಟಾರ್ಗೆಟ್ ಗುಜರಾತ್ ವಿಧಾನಸಭಾ ಚುನಾವಣೆ ಗೆಲ್ಲುವುದಾಗಿದೆ. ಹೀಗಾಗಿ ಈಗಿನಿಂದಲೇ ಗುಜರಾತ್ ಗೆಲುವಿಗೆ ಬಿಜೆಪಿ ಪ್ಲಾನ್ ಮಾಡುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಗುಜರಾತ್ ಪ್ರವಾಸದಲ್ಲಿದ್ದು, ಚುನಾವಣೆ ಗೆಲುವಿಗೆ ತಂತ್ರ ರಚಿಸಲಿದ್ದಾರೆ.

ತಾಯಿಯನ್ನು ಭೇಟಿಯಾದ ನರೇಂದ್ರ ಮೋದಿ

ಗುಜರಾತ್ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಅಹ್ಮದಾಬಾದ್ ಏರ್‌ಪೋರ್ಟ್‌ನಿಂದ ಗಾಂಧಿನಗರದಲ್ಲಿರುವ ಕಮಲಂ ಬಿಜೆಪಿ ಪ್ರಧಾನ ಕಚೇರಿವರೆಗೆ ರೋಡ್ ಶೋ ನಡೆಸಿದ ಬಳಿಕ ಸಂಜೆ, ವೇಳೆ ತಮ್ಮ ತಾಯಿ ಹೀರಾಬೆನ್ ಇದ್ದ ಮನೆಗೆ ಹೋಗಿ, ಅವರ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: Gujarat: ಬಾಪೂ ಅವರ ಗ್ರಾಮ ವಿಕಾಸ ಕನಸು ನನಸು ಮಾಡಲು ಪ್ರಧಾನಿ ಕರೆ

 ತಾಯಿಯೊಂದಿಗೆ ಊಟ ಮಾಡಿ, ಆಶೀರ್ವಾದ ಪಡೆದ ಮೋದಿ

ಪ್ರಧಾನಿ ನರೇಂದ್ರ ಮೋದಿ ತಮ್ ತಾಯಿ ಹೀರಾಬೆನ್‌ ಜೊತೆ ಕೆಲ ಕಾಲ ಕಳೆದರು. ಬಳಿಕ ಅಮ್ಮನೊಂದಿಗೆ ಕುಳಿತು ಊಟ ಮಾಡಿದ್ರು. ಬಳಿಕ ಅವರ ಆರೋಗ್ಯ ವಿಚಾರಿಸಿ, ಸಮಾಧಾನದ ಮಾತನಾಡಿದ್ರು. ಕೆಲ ಕಾಲ ಮಾತನಾಡಿ, ಅಮ್ಮನ ಕಾಲಿಗೆ ಎರಗಿ ಆಶೀರ್ವಾದ ಪಡೆದ್ರು.

ಮಗನನ್ನು ಆಶೀರ್ವದಿಸಿ ಬೀಳ್ಕೊಟ್ಟ ಹೀರಾಬೆನ್

ತಮ್ಮ ಪುತ್ರ ನರೇಂದ್ರ ಮೋದಿ ಜೊತೆ ತಾಯಿ ಹೀರಾಬೆನ್ ನಗು ನಗುತ್ತಲೇ ಮಾತನಾಡಿದ್ರು. ತಮ್ಮ ಕಾಲಿಗೆ ಎರಗಿದ ಪುತ್ರನ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ರು. ಬಳಿಕ ನಗು ನಗುತ್ತಲೇ ತಮ್ಮ ಮನೆಯಿಂದ ಪುತ್ರನನ್ನು ಕಳಿಸಿಕೊಟ್ಟರು.  ಇತ್ತೀಚೆಗೆ ಸುಷ್ಮಾ ಸ್ವರಾಜ್ ಜನ್ಮ ದಿನದಂದು ಪ್ರಧಾನಿ ಮೋದಿ ತಮ್ಮ ತಾಯಿಯನ್ನು ನೆನಪಿಸಿಕೊಂಡು, ಹಳೇ ಘಟನೆಯೊಂದರ ಮೆಲುಕು ಹಾಕಿದ್ದನ್ನು ಅಲ್ಲಿ ಸ್ಮರಿಸಬಹುದು.

ಇದನ್ನೂ ಓದಿ: Modi: ನರೇಂದ್ರ ಮೋದಿಯವರ ತಾಯಿಯ ತೂಕದಷ್ಟು ಚಿನ್ನದಿಂದ ಕಾಶಿ ವಿಶ್ವನಾಥ ದೇಗುಲಕ್ಕೆ ಅಲಂಕಾರ!

 ಈ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ನಡೆಯಲಿದೆ ಚುವಾವಣೆ

ಈ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2001 ರಿಂದ 2014 ರ ನಡುವೆ ನಾಲ್ಕು ಅವಧಿಗೆ ಗುಜರಾತಿನ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ 1998 ರಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. ಹೀಗಾಗಿ ಈ ಬಾರಿಯೂ ಗುಜರಾತ್ ಗದ್ದುಗೆ ಏರಲೇ ಬೇಕು ಅಂತ ಬಿಜೆಪಿ ನಾಯಕರು ಈಗಿನಿಂದಲೇ ತಂತ್ರಗಾರಿಕೆ ರೂಪಿಸುತ್ತಾ ಇದ್ದಾರೆ.
Published by:Annappa Achari
First published: