ಟ್ವಿಟ್ಟರ್​ ವಿಶ್ವ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಪಡೆದ ಮೇ ಭೀ ಚೌಕಿದಾರ್​ ಹ್ಯಾಶ್​ಟ್ಯಾಗ್​!

ಚೌಕಿದಾರ್ ಎಂದರೆ ಕಾವಲುಗಾರ ಎನ್ನುವ ಅರ್ಥ ನೀಡುತ್ತದೆ. ತಾವೊಬ್ಬ ಚೌಕಿದಾರ್​ ಎಂದು ಮೋದಿ ಹಲವು ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಇಂದು ಈ ವಿಚಾರವಾಗಿಯೇ ಟ್ವೀಟ್​ ಮಾಡಿದ್ದ ಮೋದಿ ದೇಶಕ್ಕೋಸ್ಕರ ಶ್ರಮಿಸುವ ಪ್ರತಿಯೊಬ್ಬರೂ ಚೌಕಿದಾರ್​ ಎಂದು ಹೇಳಿದ್ದರು.

Rajesh Duggumane | news18
Updated:March 16, 2019, 3:40 PM IST
ಟ್ವಿಟ್ಟರ್​ ವಿಶ್ವ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಪಡೆದ ಮೇ ಭೀ ಚೌಕಿದಾರ್​ ಹ್ಯಾಶ್​ಟ್ಯಾಗ್​!
ಪ್ರಧಾನಿ ಮೋದಿ
Rajesh Duggumane | news18
Updated: March 16, 2019, 3:40 PM IST
ನವದೆಹಲಿ (ಮಾ.16): ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ #MainBhiChowkidar (ಮೇ ಭೀ ಚೌಕಿದಾರ್) ಆಂದೋಲನ ಟ್ವಿಟ್ಟರ್​ನ​​ ವಿಶ್ವ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಚೌಕಿದಾರ್ ಎಂದರೆ ಕಾವಲುಗಾರ ಎಂದರ್ಥ. ತಾವೊಬ್ಬ ಚೌಕಿದಾರ್​ ಎಂದು ಮೋದಿ ಹಲವು ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಇಂದು ಈ ವಿಚಾರವಾಗಿಯೇ ಟ್ವೀಟ್​ ಮಾಡಿದ್ದ ಮೋದಿ ದೇಶಕ್ಕೋಸ್ಕರ ಶ್ರಮಿಸುವ ಪ್ರತಿಯೊಬ್ಬರೂ ಚೌಕಿದಾರ್​ ಎಂದು ಹೇಳಿದ್ದರು.

“ನಿಮ್ಮ ಚೌಕಿದಾರ ಗಟ್ಟಿಯಾಗಿ ನಿಂತು ದೇಶವನ್ನು ಕಾಯುತ್ತಿದ್ದಾನೆ. ಆದರೆ, ನಾನು ಏಕಾಂಗಿಯಲ್ಲ. ಭಾರತದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರತಿ ವ್ಯಕ್ತಿಯೂ ಚೌಕಿದಾರ. ಇಂದು ಭಾರತದ ಪ್ರತಿ ವ್ಯಕ್ತಿಯೂ #MainBhiChowkidar ಎನ್ನುತ್ತಿದ್ದಾರೆ,” ಎಂದು ಬರೆದುಕೊಂಡಿದ್ದರು.  ಇದರ ಜೊತೆಗೆ ವಿಡಿಯೋ ಒಂದನ್ನು ಅವರು ಪೋಸ್ಟ್​ ಮಾಡಿದ್ದರು. ಸಾಕಷ್ಟು ಜನರು ಈ ಹ್ಯಾಶ್​ಟ್ಯಾಗ್​ ಬಳಸಿ ಟ್ವೀಟ್​ ಮಾಡುತ್ತಿದ್ದಾರೆ.
ರಫೇಲ್​ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಆರೋಪಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಮೋದಿ ಅವರನ್ನು ರಾಹುಲ್​ ‘ಚೌಕಿದಾರ್​ ಚೋರ್​ ಹೈ’ (ಕಾವಲುಗಾರ ಕಳ್ಳ) ಎಂದಿದ್ದರು. ರಾಹುಲ್​ಗೆ ತಿರುಗೇಟು ನೀಡಲು ಮೋದಿ ಈ ಆಂದೋಲನೆ ಆರಂಭಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಿಲ್ಲೆಯಲ್ಲಿ ಶಾಸಕರು ಮಂತ್ರಿಗಳಿದ್ದಾರೆ, ನನ್ನ ಸ್ಪರ್ಧೆ ಬಗ್ಗೆ ನಿಮಗೆ ಭಯವೇಕೆ ; ಸುಮಲತಾ

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626