Jammu and Kashmir: ಕಣಿವೆ ರಾಜ್ಯದಲ್ಲಿ 20,000 ಕೋಟಿ ಯೋಜನೆಗೆ ಪ್ರಧಾನಿ ಚಾಲನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಗೆ ವೇಗ ನೀಡಲು, 20,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
    2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ (Jammu and Kashmir) ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು, ಅವರು 20,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಇದೇ ವೇಳೆ ಅವರು, ಜಮ್ಮು ಮತ್ತು ಕಾಶ್ಮೀರದ ಈ ಹಿಂದೆ ಜನರು ಎದುರಿಸಿದ ಸಮಸ್ಯೆಗಳನ್ನು ಅವರ ಮಕ್ಕಳು ಅನುಭವಿಸುವುದಿಲ್ಲ ಎಂಬ ಭರವಸೆ ನೀಡಿದರು.

    ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ
    ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಜಮ್ಮು ವಿಭಾಗದ ಸಾಂಬಾ ಜಿಲ್ಲೆಯ ಪಲ್ಲಿ ಪಂಚಾಯತ್‌ನಲ್ಲಿ ದೇಶದ ಗ್ರಾಮ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರಜಾಪ್ರಭುತ್ವದಲ್ಲಿ ಪಂಚಾಯತ್‌ಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಅಭಿವೃದ್ಧಿಯ ಸಂದೇಶದೊಂದಿಗೆ ಇಲ್ಲಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಗೆ ವೇಗ ನೀಡಲು, 20,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ.

    ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಹೊಸ ಶಕೆ

    ಈ ವರ್ಷ ಪಂಚಾಯತ್ ರಾಜ್ ದಿನವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಆಚರಿಸಲಾಗುತ್ತಿದೆ. ಇದು ಹೊಸ ಬೆಳವಣಿಗೆಯನ್ನು ಸೂಚಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರು ಹಲವು ವರ್ಷಗಳಿಂದ 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆಯಿಂದ ವಂಚಿತರಾಗಿದ್ದರು. ಜನರನ್ನು ಸಬಲೀಕರಣಗೊಳಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ಕೇಂದ್ರ ಕಾನೂನುಗಳನ್ನು ನಲ್ಲಿ ಜಾರಿಗೆ ತಂದಿದ್ದೇವೆ. ಮೀಸಲಾತಿಯನ್ನು ವಿರೋಧಿಸಿದವರು ಇದೀಗ ಜಮ್ಮು ಮತ್ತು ಕಾಶ್ಮೀರದಲ್ಲಿ ಅದರ ಲಾಭ ಪಡೆಯುತ್ತಿದ್ದಾರೆ. ಪ್ರವಾಸೋದ್ಯಮ ಈಗ ಇಲ್ಲಿ ಮತ್ತೊಮ್ಮೆ ವೇಗ ಪಡೆಯುತ್ತಿದೆ. ಕಳೆದೆರಡು ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಅಭಿವೃದ್ದಿ ಕಾಣತೊಡಗಿದೆ ಎಂದರು

    ಇದನ್ನು ಓದಿ: ನಗದು ರಹಿತ ವ್ಯವಹಾರಕ್ಕೆ ಒತ್ತು ನೀಡಲು ಮೋದಿ ಕರೆ, ಡಿಜಿಟಲ್ ಆರ್ಥಿಕತೆ ಬಗ್ಗೆ ಮಾತು

    ರೈತರಿಗೆ ಪ್ರಧಾನಿ ಕರೆ
    ಇದೇ ವೇಳೆ ರೈತರಿಗೆ ಸಾವಯವ ಕೃಷಿಯತ್ತ ವಾಲುವಂತೆ ಮನವಿ ಮಾಡಿದ ಪ್ರಧಾನಿ, ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಬೇಕು. ಆದ್ದರಿಂದ, ನಮ್ಮ ರೈತರು ಸಾವಯವ ಕೃಷಿಯತ್ತ ಸಾಗಿದರೆ, ಇಡೀ ಮಾನವಕುಲಕ್ಕೆ ಲಾಭವಾಗುತ್ತದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಅಗತ್ಯವಿದೆ, ಇದಕ್ಕಾಗಿ ಸಾಮೂಹಿಕ ಪ್ರಯತ್ನವೂ ಅಗತ್ಯ ಎಂದು ತಿಳಿಸಿದರು

    ಕಿಶ್ತ್ವಾರ್ ಜಿಲ್ಲೆಯ ಚೆನಾಬ್ ನದಿಯಲ್ಲಿ ನಿರ್ಮಿಸಲಿರುವ 850 ಮೆಗಾವ್ಯಾಟ್ ರಾಟಲ್ ಜಲವಿದ್ಯುತ್ ಯೋಜನೆ ಮತ್ತು 540 ಮೆಗಾವ್ಯಾಟ್ ಕ್ವಾರ್ ಜಲವಿದ್ಯುತ್ ಯೋಜನೆಗೆ ಇದೇ ವೇಳೆ ಅವರು ಶಂಕು ಸ್ಥಾಪನೆ ಮಾಡಿದರು.

    ಇದನ್ನು ಓದಿ: ಅಂಟಾರ್ಕ್ಟಿಕಾ ಖಂಡದಲ್ಲಿ ಹೆಜ್ಜೆಯಿಟ್ಟ ಮೊದಲ ಮಹಿಳಾ ಅರಣ್ಯಾಧಿಕಾರಿ ಇವರೇ!

    3,100 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬನಿಹಾಲ್-ಖಾಜಿಗುಂಡ್ ರಸ್ತೆ ಸುರಂಗ ಮಾರ್ಗವನ್ನು ಕೂಡ ಅವರು ಉದ್ಘಾಟಿಸಿದರು. 8.45 ಕಿಮೀ ಉದ್ದದ ಸುರಂಗವು ಬನಿಹಾಲ್ ಮತ್ತು ಖಾಜಿಗುಂಡ್ ನಡುವಿನ ರಸ್ತೆ ಪ್ರಯಾಣವನ್ನು 16 ಕಿಮೀ ಕಡಿಮೆ ಮಾಡುತ್ತದೆ.

    ಇದೇ ವೇಳೆ ದೆಹಲಿ-ಅಮೃತಸರ-ಕತ್ರಾ ಎಕ್ಸ್‌ಪ್ರೆಸ್‌ವೇಗೂ ಶಂಕುಸ್ಥಾಪನೆ ಮಾಡಿ, ಸಾಂಬಾದ ಪಲ್ಲಿ ಗ್ರಾಮದಲ್ಲಿ 500KW ಸೌರ ವಿದ್ಯುತ್ ಸ್ಥಾವರವನ್ನು ಉದ್ಘಾಟಿಸಿದರು

    ಪ್ರಧಾನಿ ಭೇಟಿಗೂ ಮುನ್ನ ಸ್ಪೋಟ

    ಇನ್ನು ಪ್ರಧಾನಿ ಮೋದಿ ಅವರು ಆಗಮಿಸುವ ಮುನ್ನ ಅವರು ಭಾಗಿಯಾಗಿದ್ದ ಸಮಾವೇಶ ಸ್ಥಳದಿಂದ 12 ಕಿಮೀ ದೂರದಲ್ಲಿ ಸ್ಫೋಟವೊಂದು ಸಂಭವಿಸಿತು. ಜಮ್ಮುವಿನ ಬಿಷ್ನಾಹ್‌ನ ಲಾಲಿಯನ್‌ ಗ್ರಾಮದ ಬಯಲು ಪ್ರದೇಶದಲ್ಲಿ ಈ ಸ್ಪೋಟ ನಡೆದಿದೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಹಾಗೂ ಭದ್ರತಾ ಪಡೆಗಳು ಧಾವಿಸಿದ್ದು, ಸ್ಥಳದಲ್ಲಿ ಪರಿಶೀಲನೆ ನಡೆಸಿ ಕಟ್ಟೆಚ್ಚರ ವಹಿಸಿದರು
    Published by:Seema R
    First published: