ಬ್ರಿಟನ್: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು, ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರು ಎಂದು ಬ್ರಿಟಿಷ್ ಸಂಸದೀಯ ಲಾರ್ಡ್ ಕರಣ್ ಬಿಲಿಮೋರಿಯಾ (Lord Karan Bilimoria) ತಿಳಿಸಿದ್ದಾರೆ. ಬ್ರಿಟಿಷ್ ಸಂಸತ್ತಿನಲ್ಲಿ (British Parliament) ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾದ (Economy) ಭಾರತದೊಂದಿಗೆ (India) ಯುಕೆ ಹೊಂದಿರುವ ಬಾಂಧವ್ಯ ಕುರಿತಂತೆ ಮಾತನಾಡಿದ ಅವರು, ಬಾಲ್ಯದಲ್ಲಿ ನರೇಂದ್ರ ಮೋದಿ ಅವರು ಗುಜರಾತ್ನ (Gujrat) ರೈಲ್ವೆ ನಿಲ್ದಾಣದಲ್ಲಿ (Railway station) ತಮ್ಮ ತಂದೆಯ ಟೀ ಸ್ಟಾಲ್ನಲ್ಲಿ (Tea Stall) ಚಹಾ ಮಾರಾಟ ಮಾರುತ್ತಿದ್ದರು. ಆದರಿಂದು ಭಾರತದ ಪ್ರಧಾನಿಯಾಗಿ ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದ್ದಾರೆ.
"India has a vision to become, within 25 years, the 2nd largest economy in the world with a GDP of $32 trillion. The Indian Express has left the station. It is now the fastest train in the world—the fastest-growing major economy. The UK must be its closest friend and partner." pic.twitter.com/n1Pdhalw5W
— Lord Karan Bilimoria (@Lord_Bilimoria) January 20, 2023
ಭಾರತ ಆರ್ಥಿಕತೆಯು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ
ಇಂದು ಭಾರತವು ಜಿ 20 ಅಧ್ಯಕ್ಷ ಸ್ಥಾನವನ್ನು ಹೊಂದಿದೆ. ಇಂದು ಭಾರತವು ಮುಂದಿನ 25 ವರ್ಷಗಳಲ್ಲಿ USD 32 ಶತಕೋಟಿ GDP ಯೊಂದಿಗೆ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗುವ ದೃಷ್ಟಿಯನ್ನು ಹೊಂದಿದೆ. ಇಂಡಿಯನ್ ಎಕ್ಸ್ಪ್ರೆಸ್ ನಿಲ್ದಾಣವನ್ನು ಹೊಂದಿದೆ. ಇದು ಈಗ ವಿಶ್ವದ ಅತ್ಯಂತ ವೇಗದ ರೈಲಾಗಿದೆ. ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ದೇಶವಾಗಿದೆ. ಮುಂದಿನ ದಶಕಗಳಲ್ಲಿ ಯುಕೆ ಭಾರತದ ಅತ್ಯಂತ ನಿಕಟ ಮತ್ತು ವಿಶ್ವಾಸಾರ್ಹ ಸ್ನೇಹಿತ ಮತ್ತು ಪಾಲುದಾರರಾಗಿರಬೇಕು ಎಂದು ಹೇಳಿದರು.
ಭಾರತವು ಯುಕೆಯನ್ನೇ ಹಿಂದಿಕ್ಕಿದೆ
'ಯುನೈಟೆಡ್ ಕಿಂಗ್ಡಮ್ ಮತ್ತು ಭಾರತದ ನಡುವಿನ ಸಂಬಂಧದ ಪ್ರಾಮುಖ್ಯತೆ' ಕುರಿತು ಚರ್ಚೆಯ ಸಂದರ್ಭದಲ್ಲಿ ಲಾರ್ಡ್ ಬಿಲಿಮೋರಿಯಾ ಅವರು ಭಾರತವು ಈಗ ಯುಕೆಯನ್ನು ಹಿಂದಿಕ್ಕಿದೆ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅಲ್ಲದೇ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿದೆ.
ಭಾರತ ನಾಲ್ಕನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ
"75 ವರ್ಷಗಳ ಪ್ರಜಾಪ್ರಭುತ್ವದೊಂದಿಗೆ, ಇದು ಯುವ ದೇಶವಾಗಿದೆ. ಇದು ಕಳೆದ ಹಣಕಾಸು ವರ್ಷದಲ್ಲಿ 8.7 ಶೇಕಡಾ ಬೆಳವಣಿಗೆ ದರವನ್ನು ಹೊಂದಿತ್ತು ಮತ್ತು ಇದು 10 ಯುನಿಕಾರ್ನ್ ಕಂಪನಿಗಳಲ್ಲಿ ಒಂದನ್ನು ಕೊಡುಗೆ ನೀಡಿದೆ, 100 ಯುನಿಕಾರ್ನ್ಗಳನ್ನು ಹೊಂದಿದೆ. ಇದು ನಾಲ್ಕನೇ ಅತಿದೊಡ್ಡ ಉತ್ಪಾದಕ ದೇಶವಾಗಿದೆ ಎಂದಿದ್ದಾರೆ.
ಕೊರೊನಾ ವೇಳೆ ಶತಕೋಟಿ ಲಸಿಕೆಗಳನ್ನು ಉತ್ಪಾದಿಸಿದ್ದ ಭಾರತ
ಭಾರತವು ಸಾಂಕ್ರಾಮಿಕ ಸಮಯದಲ್ಲಿ ಶತಕೋಟಿ ಲಸಿಕೆಗಳನ್ನು ಉತ್ಪಾದಿಸಿತ್ತು. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕಾದೊಂದಿಗೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪಾಲುದಾರಿಕೆಯೊಂದಿಗೆ ಲಸಿಕೆಯನ್ನು ಕಂಡು ಹಿಡಿಯಲಾಗಿತ್ತು. ಹೀಗೆ ಭಾರತವು ದಿನೇ ದಿನೇ ಅಭಿವೃದ್ಧಿ ಹೊಂದುತ್ತಿದೆ. ಅಲ್ಲದೇ ಯುಕೆ-ಭಾರತ ಮುಕ್ತ ವ್ಯಾಪಾರ ಒಪ್ಪಂದವು ಉತ್ತಮವಾಗಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಯುಕೆಯ 12 ನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿರುವ ಭಾರತ
ಸದ್ಯ ನಮ್ಮ ವ್ಯಾಪಾರವು £29.6 ಶತಕೋಟಿ ಮೌಲ್ಯದ್ದಾಗಿದ್ದರೂ, ಭಾರತವು ಯುಕೆಯ 12 ನೇ ಅತಿದೊಡ್ಡ ವ್ಯಾಪಾರ ಪಾಲುದಾರವಾಗಿದೆ. ಅಷ್ಟೇ ಸಾಕಾಗುವುದಿಲ್ಲ, ಇದು ಇನ್ನೂ ಹೆಚ್ಚಾಗಬೇಕಾಗಿದೆ ಎಂದು ಹೇಳಿದರು.
ಪ್ರಧಾನಿ ಟೀಕಿಸುವ ಬಿಬಿಸಿ ಸಾಕ್ಷ್ಯಚಿತ್ರ
2002ರಲ್ಲಿ ನಡೆದ ಗುಜರಾತ್ ಗಲಭೆ ಮತ್ತು ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಕುರಿತು ಮಾಡಲಾಗಿದ್ದ ಬಿಬಿಸಿ ಸಾಕ್ಷ್ಯಚಿತ್ರದ ಎಲ್ಲಾ ಲಿಂಕ್ಗಳನ್ನು ತೆಗೆದು ಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟ್ಟರ್ಗೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Siddaramaiah: ಮೋದಿ ಕರ್ನಾಟಕಕ್ಕೆ 100 ಬಾರಿ ಬಂದರೂ ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ! ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ತುರ್ತು ಅಧಿಕಾರ ಬಳಸಿದ ಕೇಂದ್ರ
ಜೊತೆಗೆ ಈ ಡಾಕ್ಯುಮೆಂಟರಿ ಚಿತ್ರದ ವಿಡಿಯೋ ಅಥವಾ ಲಿಂಕ್ಗಳನ್ನು ಯಾರಾದರೂ ಪುನಃ ಅಪ್ಲೋಡ್ ಮಾಡಿದರೆ ಅವುಗಳನ್ನೂ ತೆಗೆದು ಹಾಕುವಂತೆ ಟ್ವಿಟ್ಟರ್ ಮತ್ತು ಯೂಟ್ಯೂಬ್ಗೆ ಕೇಂದ್ರ ಸರ್ಕಾರ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ