ಫೇಸ್​ಬುಕ್​ ಲೈಕ್ಸ್​​ ಪಡೆದ ಜಗತ್ತಿನ ನಾಯಕರ ಸಾಲಿನಲ್ಲಿ ಮೊದಲ ಸ್ಥಾನ ಪಡೆದ ಪ್ರಧಾನಿ ಮೋದಿ; ಅವರು ಪಡೆದ ಲೈಕ್ಸ್​ ಎಷ್ಟು ಗೊತ್ತೇ?

ಮೋದಿ ಅವರ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರ ಖಾತೆಯನ್ನು 23 ಮಿಲಿಯನ್​ ಜನರು ಲೈಕ್​ ಮಾಡಿದ್ದಾರೆ. ಈ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್​ ವಿಶ್ವ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

news18
Updated:April 11, 2019, 6:44 PM IST
ಫೇಸ್​ಬುಕ್​ ಲೈಕ್ಸ್​​ ಪಡೆದ ಜಗತ್ತಿನ ನಾಯಕರ ಸಾಲಿನಲ್ಲಿ ಮೊದಲ ಸ್ಥಾನ ಪಡೆದ ಪ್ರಧಾನಿ ಮೋದಿ; ಅವರು ಪಡೆದ ಲೈಕ್ಸ್​ ಎಷ್ಟು ಗೊತ್ತೇ?
ಪ್ರಧಾನಿ ನರೇಂದ್ರ ಮೋದಿ
news18
Updated: April 11, 2019, 6:44 PM IST
ನ್ಯೂಯಾಕ್​: ವಿಶ್ವದಾದ್ಯಂತ ಅಧಿಕ ಜನರನ್ನು ಒಳಗೊಂಡ ಫೇಸ್​ಬುಕ್​ ಜಾಲತಾಣದಲ್ಲೂ ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೋದಿ ಅವರ ವೈಯಕ್ತಿಕ ಫೇಸ್​ಬುಕ್​ ಖಾತೆಗೆ 43.5 ಮಿಲಿಯನ್​ ಲೈಕ್ಸ್​ ಹಾಗೂ ಅಧಿಕೃತ ಖಾತೆಗೆ 13.7 ಲೈಕ್ಸ್​ಗಳನ್ನು ಪಡೆಯುವ ಮೂಲಕ ಫೇಸ್​ಬುಕ್​ನಲ್ಲಿ ಅತಿಹೆಚ್ಚು ಲೈಕ್ಸ್​ ಪಡೆದ ಜಗತ್ತಿನ ಅಗ್ರಗಣ್ಯ ನಾಯಕರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.

ಗ್ಲೋಬಲ್​ ಕಮ್ಯುನಿಕೇಷನ್​ ಏಜೆನ್ಸಿ ಬಿಸಿಡಬ್ಲ್ಯೂ ನಡೆಸಿದ ‘ಟಿಪ್ಲೊಮೆಸಿ‘ ಅಧ್ಯಯನದ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಫೇಸ್​​ಬುಕ್​ ಖಾತೆಯನ್ನು 43.5 (4 ಕೋಟಿ 35 ಲಕ್ಷ) ಮಿಲಿಯನ್​ ಜನರು ಲೈಕ್​ ಮಾಡಿದ್ದಾರೆ. ಅಧಿಕೃತ ಫೇಸ್​ಬುಕ್​ ಖಾತೆಯನ್ನು 13.7 (1 ಕೋಟಿ 37 ಲಕ್ಷ) ಮಂದಿ ಲೈಕ್ಸ್​ ಮಾಡಿದ್ದಾರೆ.

ಮೋದಿ ಅವರ ನಂತರ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎರಡನೇ ಸ್ಥಾನದಲ್ಲಿ ಇದ್ದಾರೆ. ಇವರ ಖಾತೆಯನ್ನು 23 ಮಿಲಿಯನ್​ ಜನರು ಲೈಕ್​ ಮಾಡಿದ್ದಾರೆ. ಈ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್​ ವಿಶ್ವ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ಜೋರ್ಡನ್​ನ ರಾಣಿ  ರಾನಿಯಾ ಫೇಸ್​ಬುಕ್​ನಲ್ಲಿ 3ನೇ ಸ್ಥಾನ ಪಡೆದಿದ್ದು, 16.9 ಮಿಲಿಯನ್​ ಜನರು ರಾನಿಯಾ ಅವರ ಫೇಸ್​ಬುಕ್​ ಖಾತೆಯನ್ನು ಲೈಕ್​ ಮಾಡಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಇತ್ತೀಚೆಗೆ ಬ್ರೆಜಿಲ್​ ದೇಶದ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಜಾಯರ್​ ಬೊಲ್ಸೊನಾರೋ ಫೇಸ್​ಬುಕ್​ ಪೇಜ್​​ನ್ನು ಸಕ್ರಿಯವಾಗಿ ಬಳಸುತ್ತಿರುವ ಕಾರಣ 145 ಮಿಲಿಯನ್​ ಜನರು ಇವರ ಖಾತೆಯಲ್ಲಿ ಸಂವಾದ ನಡೆಸಿದ್ದಾರೆ. ಟ್ರಂಪ್​ ಅವರ ಖಾತೆಯಲ್ಲಿ 84 ಮಿಲಿಯನ್​ ಜನರ ಸಂವಾದ ನಡೆಸಿದ್ದಾರೆ.
Loading...

First published:April 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626