Narendra Modi And Kamala Harris: ಕಮಲಾ ಹ್ಯಾರಿಸ್‌ರನ್ನು ಭಾರತಕ್ಕೆ ಆಹ್ವಾನಿಸಿದ ಮೋದಿ

Narendra Modi Invites Kamala Harris To India: ನೀವು ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಲು ನಮಗೆ ಅವಕಾಶ ಸಿಕ್ಕಿತ್ತು. ಭಾರತವು ಕೋವಿಡ್ -19 ಸೋಂಕಿನ ಕಠಿಣ ತರಂಗದೊಂದಿಗೆ ಹೋರಾಡುತ್ತಿರುವಾಗ ನಮ್ಮ ನಡುವೆ ಒಂದು ಸಂವಾದ ನಡೆಯಿತು. ಆ ಸಮಯದಲ್ಲಿ ನಿಮ್ಮ ಬೆಂಬಲವನ್ನು ನಾನು ನೆನಪಿಸಿಕೊಳ್ಳುತ್ತೇನೆ" ಎಂದು ಮೋದಿ ಹೇಳಿದ್ದಾರೆ.

ಮೋದಿ ಮತ್ತು ಕಮಲಾ ಹ್ಯಾರಿಸ್​

ಮೋದಿ ಮತ್ತು ಕಮಲಾ ಹ್ಯಾರಿಸ್​

  • Share this:

ಅಮೆರಿಕ ಪ್ರವಾಸ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಶುಕ್ರವಾರ ಅಲ್ಲಿನ ರಾಜಧಾನಿ ವಾಷಿಂಗ್ಟನ್‌ ಡಿಸಿಯಲ್ಲಿರುವ ವೈಟ್‌ ಹೌಸ್‌ನಲ್ಲಿ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris)ರೊಂದಿಗೆ ಮೊದಲ ವ್ಯಕ್ತಿಗತ ಸಭೆ ನಡೆಸಿದ್ದರು. ಈ ವೇಳೆ ಭಾರತ ಮತ್ತು ಅಮೆರಿಕ "ನೈಸರ್ಗಿಕ ಪಾಲುದಾರರು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವೇಳೆ ಉಭಯ ನಾಯಕರು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಿದರು ಮತ್ತು ಪರಸ್ಪರರ ಹಾಗೂ ಜಾಗತಿಕ ಹಿತಾಸಕ್ತಿಗಳನ್ನು ಚರ್ಚೆ ನಡೆಸಿದ್ದಾರೆ. "ಭಾರತ ಮತ್ತು ಅಮೆರಿಕ ಸಹಜ ಪಾಲುದಾರರು. ನಮ್ಮಲ್ಲಿ ಒಂದೇ ರೀತಿಯ ಮೌಲ್ಯಗಳು, ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿವೆ" ಎಂದು ಪ್ರಧಾನಿ ಮೋದಿ ಜಂಟಿ ಮಾಧ್ಯಮದಲ್ಲಿ ಹೇಳಿದರು. ಭಾರತ ಮತ್ತು ಯುಎಸ್ ಅತಿದೊಡ್ಡ ಹಾಗೂ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳೆಂದು ತಿಳಿಸಿದ ಮೋದಿ, ಎರಡು ದೇಶಗಳು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅವುಗಳ ಸಹಕಾರವು ಕ್ರಮೇಣ ಹೆಚ್ಚುತ್ತಿದೆ ಎಂದೂ ಹೇಳಿದರು.


ಉಭಯ ನಾಯಕರ ನಡುವಿನ ಮೊದಲ ಭೇಟಿ ಇದಾಗಿತ್ತು, ಭಾರತದಲ್ಲಿ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಜೂನ್‌ನಲ್ಲಿ ಯುಎಸ್‌ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪ್ರಧಾನಿ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು.


"ಅಧ್ಯಕ್ಷ ಜೋ ಬೈಡೆನ್ ಮತ್ತು ನಿಮ್ಮ ಆಳ್ವಿಕೆಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧಗಳು ಹೊಸ ಎತ್ತರವನ್ನು ಮುಟ್ಟುತ್ತವೆ ಎಂದು ನನಗೆ ವಿಶ್ವಾಸವಿದೆ" ಎಂದು ಪಿಎಂ ಮೋದಿ ಕಮಲಾ ಹ್ಯಾರಿಸ್‌ಗೆ ಹೇಳಿದರು. ಅಲ್ಲದೆ, "ಪ್ರಪಂಚದ ಅನೇಕ ಜನರಿಗೆ ಸ್ಫೂರ್ತಿಯ ಮೂಲ" ಎಂದು ವಿವರಿಸಿದರು. ಹಾಗೂ, ಭಾರತಕ್ಕೆ ಭೇಟಿ ನೀಡುವಂತೆ ಕಮಲಾ ಹ್ಯಾರಿಸ್‌ರನ್ನು ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ.


56 ವರ್ಷದ ಕಮಲಾ ಹ್ಯಾರಿಸ್‌ ಯುನೈಟೆಡ್‌ ಸ್ಟೇಟ್ಸ್‌ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎನಿಸಿಕೊಂಡಿರುವುದು ವಿಶೇಷ.


ಇದನ್ನೂ ಓದಿ: ಪ್ರಧಾನ ಮಂತ್ರಿ ಡಿಜಿಟಲ್ ಆರೋಗ್ಯ ಮಿಷನ್​ಗೆ ಇಂದು ಚಾಲನೆ -ಏನಿದು ಯೋಜನೆ? ಯಾರಿಗೆ ಉಪಯೋಗ ?

"ನಮ್ಮ ಗ್ರಹವು ತುಂಬಾ ಕಠಿಣ ಸವಾಲುಗಳನ್ನು ಎದುರಿಸಿದ ಸಮಯದಲ್ಲಿ ಅಧ್ಯಕ್ಷ ಬೈಡೆನ್‌ ಮತ್ತು ನೀವು ಅಧಿಕಾರ ಸ್ವೀಕರಿಸಿದ್ದೀರಿ. ಅಲ್ಪಾವಧಿಯಲ್ಲಿ ನಿಮ್ಮ ಕ್ರೆಡಿಟ್‌ಗೆ ಕೋವಿಡ್ -19, ಹವಾಮಾನ ಬದಲಾವಣೆ ಅಥವಾ ಕ್ವಾಡ್ ಸೇರಿ ಅನೇಕ ಸಾಧನೆಗಳನ್ನು ಸಾಧಿಸಿದ್ದೀರಿ" ಎಂದು ಪ್ರಧಾನಿ ಮೋದಿ ಹೇಳಿದರು.


"ನೀವು ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಮಾತನಾಡಲು ನಮಗೆ ಅವಕಾಶ ಸಿಕ್ಕಿತ್ತು. ಭಾರತವು ಕೋವಿಡ್ -19 ಸೋಂಕಿನ ಕಠಿಣ ತರಂಗದೊಂದಿಗೆ ಹೋರಾಡುತ್ತಿರುವಾಗ ನಮ್ಮ ನಡುವೆ ಒಂದು ಸಂವಾದ ನಡೆಯಿತು. ಆ ಸಮಯದಲ್ಲಿ ನಿಮ್ಮ ಬೆಂಬಲವನ್ನು ನಾನು ನೆನಪಿಸಿಕೊಳ್ಳುತ್ತೇನೆ" ಎಂದು ಮೋದಿ ಹೇಳಿದರು.


ಭಾರತವು ಕೋವಿಡ್ -19 ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವಾಗ ಯುಎಸ್ ಸರ್ಕಾರ, ಯುಎಸ್ ಮೂಲದ ಕಂಪನಿಗಳು ಮತ್ತು ಭಾರತೀಯ ವಲಸಿಗರು ಬಹಳ ಸಹಾಯಕವಾಗಿದ್ದರು ಎಂದೂ ಪ್ರಧಾನಿ ಮೋದಿ ಹೇಳಿದರು.

ಭಾರತೀಯ ಮೂಲದ ನಾಲ್ಕು ಮಿಲಿಯನ್ ಅಮೆರಿಕದಲ್ಲಿರುವ ಜನರು ಎರಡು ದೇಶಗಳ ನಡುವಿನ ಸ್ನೇಹದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಈ ವೇಳೆ ಹೇಳಿದರು.


ಇನ್ನೊಂದೆಡೆ, ಭಾರತ ಅಮೆರಿಕಕ್ಕೆ "ಅತ್ಯಂತ ಪ್ರಮುಖ ಪಾಲುದಾರ" ಎಂದು ಯುಎಸ್‌ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ವಿವರಿಸಿದ್ದಾರೆ ಮತ್ತು ಶೀಘ್ರದಲ್ಲೇ ಲಸಿಕೆ ರಫ್ತು ಪುನಾರಂಭಿಸುವುದಾಗಿ ಕೇಮದ್ರ ಸರ್ಕಾರದ ಘೋಷಣೆಯನ್ನು ಸ್ವಾಗತಿಸಿದರು.


ಇದನ್ನೂ ಓದಿ: 65 ಗಂಟೆ- 20 ಸಭೆ, ದೀರ್ಘ ವಿಮಾನ ಪ್ರಯಾಣ ಇದ್ರೂ ಮೋದಿ ಸುಸ್ತಾಗದಿರಲು ಕಾರಣವೇನು? ಇಲ್ಲಿದೆ ಪ್ರಧಾನಿ ಎನರ್ಜಿ ಸೀಕ್ರೆಟ್..

ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಈ ವರ್ಷದ ಏಪ್ರಿಲ್‌ನಲ್ಲಿ ದೇಶವನ್ನು ಅಪ್ಪಳಿಸಿದ ನಂತರ ಭಾರತವು ಕೋವಿಡ್ -19 ಲಸಿಕೆಗಳ ರಫ್ತನ್ನು ನಿಲ್ಲಿಸಿತ್ತು. ಈಗ, ಭಾರತವು ಹೆಚ್ಚುವರಿ ಕೋವಿಡ್ -19 ಲಸಿಕೆಗಳ ರಫ್ತನ್ನು 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ಪುನಾರಂಭಿಸುವುದಾಗಿ ಮತ್ತು ಕೋವ್ಯಾಕ್ಸ್‌ ಜಾಗತಿಕ ಪೂಲ್‌ಗೆ ತನ್ನ ಬದ್ಧತೆಯನ್ನು ಪೂರೈಸಲು ಹೇಳಿದೆ.


Published by:Sandhya M
First published: