HOME » NEWS » National-international » PM NARENDRA MODI INAUGURATES DANDI MARCH ANNIVERSARY AND INDEPENDENCE AMRITH MAHOTSAV SNVS

ಭಾರತದ ಲಸಿಕೆ ಸಾಮರ್ಥ್ಯವನ್ನು ಐತಿಹಾಸಿಕ ಉಪ್ಪಿನ ಚಳವಳಿಗೆ ಹೋಲಿಸಿದ ಪ್ರಧಾನಿ ಮೋದಿ

ಮಹಾತ್ಮ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹಕ್ಕೆ ಇಂದು 91 ವರ್ಷವಾಗಿದ್ದು, ಸಾಂಕೇತಿಕ ಪಾದಯಾತ್ರೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ಸ್ವಾವಲಂಬನೆ ವಿಚಾರದಲ್ಲಿ ಉಪ್ಪಿನ ಚಳವಳಿಯನ್ನು ನರೇಂದ್ರ ಮೋದಿ ಅವರು ಈಗಿನ ಲಸಿಕೆ ಅಭಿಯಾನಕ್ಕೆ ಹೋಲಿಕೆ ಮಾಡಿದ್ದಾರೆ.

news18
Updated:March 12, 2021, 2:25 PM IST
ಭಾರತದ ಲಸಿಕೆ ಸಾಮರ್ಥ್ಯವನ್ನು ಐತಿಹಾಸಿಕ ಉಪ್ಪಿನ ಚಳವಳಿಗೆ ಹೋಲಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
  • News18
  • Last Updated: March 12, 2021, 2:25 PM IST
  • Share this:
ಅಹ್ಮದಾಬಾದ್(ಮಾ. 12): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಚಳವಳಿಯ 91ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು. ಹಾಗೆಯೇ, ಮುಂದಿನ ವರ್ಷಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುವ ಹಿನ್ನೆಲೆಯಲ್ಲಿ ಇಂದು ಅದನ್ನು ಆಚರಿಸಲು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೂ ಚಾಲನೆ ಕೊಟ್ಟರು. 2021ರ ಆಗಸ್ಟ್ 15ರವರೆಗೂ 75 ವಾರ ಕಾಲ ಅಮೃತ ಮಹೋತ್ಸವದ ಆಚರಣೆ ಇಂದಿನಿಂದ ನಡೆಯಲಿದೆ. ಹಾಗೆಯೇ, ಮಹಾತ್ಮ ಗಾಂಧಿ ಅವರು 1930ರಲ್ಲಿ ನಡೆಸಿದ ಉಪ್ಪಿನ ಸತ್ಯಾಗ್ರಹ (ದಂಡಿ ಯಾತ್ರೆ - Dandi March) ಚಳವಳಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ಸಂದರ್ಭಕ್ಕೆ ಹೋಲಿಕೆ ಮಾಡಿದ್ದು ವಿಶೇಷ. ಕೋವಿಡ್ ಲಸಿಕೆ ವಿಚಾರದಲ್ಲಿ ಭಾರತ ಸಾಧಿಸಿರುವ ಸ್ವಾವಲಂಬನೆಯು ತನಗೆ ದಂಡಿಯಾತ್ರೆಯ ನೆನಪಾಗುತ್ತದೆ ಎಂದು ಪ್ರಧಾನಿಗಳು ಹೇಳಿದರು.

“ಮಹಾತ್ಮ ಗಾಂಧಿ ಅವರಿಗೆ ಆಗಲೇ ಸ್ವಾವಲಂಬನೆಯ ಮಹತ್ವ ಅರಿವಾಗಿತ್ತು. ಆಗ ಉಪ್ಪು ನಮ್ಮ ದೇಶದ ಸ್ವಾವಲಂಬನೆಯ ಸಂಕೇತವಾಗಿತ್ತು. ಭಾರತದ ಮೌಲ್ಯಗಳ ಜೊತೆಗೆ ಬ್ರಿಟಿಷರು ನಮ್ಮ ಈ ಸ್ವಾವಂಲಬೆಯ ಪ್ರತೀಕಕ್ಕೂ ಭಂಗ ತಂದಿದ್ದರು… ಆಗ ಭಾರತದ ಜನರು ಉಪ್ಪಿಗಾಗಿ ಇಂಗ್ಲೆಂಡ್ ಮೇಲೆ ಅವಲಂಬಿತವಾಗಿದ್ದರು. ಗಾಂಧೀಜಿ ಅವರು ಜನರ ನಾಡಿಮಿಡಿತ ಅರಿತುಕೊಂಡರು. ಅವರು ಈ ಚಳವಳಿ ರೂಪಿಸಿದಾಗ ಅದು ಪ್ರತಿಯೊಬ್ಬ ಭಾರತೀಯನ ಚಳವಳಿಯಾಯಿತು, ಪ್ರತಿಯೊಬ್ಬ ವ್ಯಕ್ತಿಯ ಸಂಕಲ್ಪ ಶಕ್ತಿಯೂ ಆಯಿತು” ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಜನಾಂಗೀಯ ನಿಂದನೆ ಆರೋಪ: ಆಕ್ಸ್​ಫರ್ಡ್ ವಿವಿಯ ಉಡುಪಿ ಯುವತಿಯಿಂದ ಕಾನೂನು ಹೋರಾಟ ಸಾಧ್ಯತೆ

ಈ ವೇಳೆ ಭಾರತದ ಈಗಿನ ಲಸಿಕೆ ತಯಾರಿಕೆಯ ಶಕ್ತಿಯನ್ನು ಮೋದಿ ಮುನ್ನೆಲೆಗೆ ತಂದರು. ಭಾರತ ಈಗ ಸ್ವಾವಲಂಬನೆಯ ಶಕ್ತಿ ತೋರಿಸುತ್ತಿದ್ದು, ಇದರಿಂದ ಇಡೀ ಜಗತ್ತಿಗೆ ಪ್ರಯೋಜನವಾಗುತ್ತಿದೆ ಎಂದು ಅವರು ತಿಳಿಸಿದರು. ಗುಜರಾತ್​ನ ಅಹ್ಮದಾಬಾದ್​ನ ಅಭಯ್ ಘಾಟ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಇದಕ್ಕೆ ಮುನ್ನ ಅವರು ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪಾರ್ಚಣೆ ಮಾಡಿ ಗೌರವ ಅರ್ಪಿಸಿದರು.

ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ದಂಡಿಯಾತ್ರೆಯ ನೆನಪಿಗಾಗಿ ಇವತ್ತಿನಿಂದ ಸಾಬರಿಮತಿ ಆಶ್ರಮದಿಂದ 386 ಕಿಮೀ ದೂರ ನವಸಾರಿಯವರೆಗೆ ಯಾತ್ರೆಯನ್ನ ಸಾಂಕೇತಿಕವಾಗಿ ನಡೆಸಲಾಗುತ್ತಿದೆ.

ಇದನ್ನೂ ಓದಿ: Explained: ದಂಡಿ ಯಾತ್ರೆ 2021: 75 ವರ್ಷಗಳ ಸ್ವಾತಂತ್ರ್ಯವನ್ನು ಗುರುತಿಸುವತ್ತ...!

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಮಟ್ಟದ ಕಿಚ್ಚು ಹಚ್ಚಿದ್ದು 1930ರ ಈ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹ ಚಳವಳಿ. 1930 ಮಾರ್ಚ್ 12ರಿಂದ ಏಪ್ರಿಲ್ 5ರವರೆಗೆ 24 ದಿನಗಳ ಕಾಲ ಈ ಪಾದಯಾತ್ರೆ ನಡೆಸಲಾಗಿತ್ತು. ನಮ್ಮ ದೇಶದಲ್ಲಿ ಯಥೇಚ್ಛ ಉಪ್ಪು ಇದ್ದರೂ ಇಂಗ್ಲೆಂಡ್ ದೇಶದಿಂದ ಬರುವ ಉಪ್ಪಿನ ಮೇಲೆ ಭಾರತೀಯರು ಅವಲಂಬಿತವಾದಂತಹ ಪರಿಸ್ಥಿತಿ ಆಗ ಇತ್ತು. ಇದನ್ನು ಕೊನೆಗಾಣಿಸಲು ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದ್ದರು. ಬೆರಳೆಣಿಕೆಯ ಜನರಿಂದ ಶುರುವಾದ ಈ ಪಾದಯಾತ್ರೆಗೆ ಮುಂಬರುವ ದಿನಗಳಲ್ಲಿ ಸಾವಿರಾರು ಜನರು ಸೇರಿಕೊಂಡರು. ದೇಶಾದ್ಯಂತ ಕೋಟ್ಯಂತರ ಜನರು ಈ ಚಳವಳಿಗೆ ಬೆಂಬಲ ನೀಡಿದರು. ಅಲ್ಲಿಂದ ಅಗಾಧ ಸ್ವಾತಂತ್ರ್ಯ ಹೋರಾಟಕ್ಕೆ ಬಲ ಸಿಕ್ಕಿತು. ಈ ಉಪ್ಪಿನ ಸತ್ಯಾಗ್ರಹ ವಿಶ್ವಾದ್ಯಂತ ಮಾಧ್ಯಮಗಳ ಮೂಲಕ ಜಾಗತಿಕ ರಾಷ್ಟ್ರಗಳ ಗಮನ ಸೆಳೆಯಿತು. ಇದು ಭಾರತದ ಸ್ವಾತಂತ್ರ್ಯದ ದಾರಿಯನ್ನು ಸುಗಮಗೊಳಿಸಿತು.
Published by: Vijayasarthy SN
First published: March 12, 2021, 2:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories