HOME » NEWS » National-international » PM NARENDRA MODI HITS OUT AT OPPN FOR MAKING BIHAR BIMARU SNVS

ಬಿಹಾರವನ್ನು ಶಿಲಾಯುಗಕ್ಕೆ ತಳ್ಳಿದವರಿಗೆ ಜನರ ಬಳಿ ಮತ ಕೇಳುವ ಧೈರ್ಯ ಎಷ್ಟು? - ಪ್ರಧಾನಿ ಮೋದಿ

ಬಿಹಾರದಲ್ಲಿ ನಿತೀಶ್ ಅಧಿಕಾರಕ್ಕೆ ಬರುವ ಮುನ್ನ 15 ವರ್ಷ ಆಡಳಿತ ನಡೆಸಿದ್ದ ಆರ್ಜೆಡಿ ಪಕ್ಷ ಈ ರಾಜ್ಯವನ್ನು ಕತ್ತಲಯುಗಕ್ಕೆ ನೂಕಿತ್ತು. ಕೊಲೆ, ಸುಲಿಗೆ, ಅಪಹರಣಕ್ಕೆ ಅಂಕೆಯೇ ಇರಲಿಲ್ಲ ಎಂದು ನರೇಂದ್ರ ಮೋದಿ ಟೀಕಿಸಿದ್ದಾರೆ.

news18
Updated:October 23, 2020, 3:17 PM IST
ಬಿಹಾರವನ್ನು ಶಿಲಾಯುಗಕ್ಕೆ ತಳ್ಳಿದವರಿಗೆ ಜನರ ಬಳಿ ಮತ ಕೇಳುವ ಧೈರ್ಯ ಎಷ್ಟು? - ಪ್ರಧಾನಿ ಮೋದಿ
ನರೇಂದ್ರ ಮೋದಿ
  • News18
  • Last Updated: October 23, 2020, 3:17 PM IST
  • Share this:
ಪಾಟ್ನಾ(ಅ. 23): ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಚುನಾವಣಾ ಪ್ರಚಾರದ ಅಖಾಡಕ್ಕೆ ಅಡಿ ಇಟ್ಟಿದ್ದಾರೆ. ಸಾಸಾರಾಮ್​ನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, “ಇನ್ನೊಮ್ಮೆ ಎನ್​ಡಿಎ ಸರ್ಕಾರ” ಎಂಬ ಘೋಷ ವಾಕ್ಯದೊಂದಿಗೆ ಭಾಷಣ ಮುಂದುವರಿಸಿ, ವಿಪಕ್ಷಗಳಾದ ಆರ್​ಜೆಡಿ ಮತ್ತು ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು. ಬಿಹಾರವನ್ನು ಶಿಲಾಯುಗಕ್ಕೆ ತಳ್ಳಿದವರು ಮತ್ತು ಸಂವಿಧಾನಕ್ಕೆ 370ನೇ ಆರ್ಟಿಕಲ್ ಅನ್ನು ಪುನಃ ಸೇರಿಸುತ್ತೇನೆನ್ನುವರಿಗೆ ಬಿಹಾರದ ಜನರ ಬಳಿ ಮತ ಕೇಳುವ ಯಾವ ಮುಖವೂ ಇಲ್ಲ ಎಂದು ಮೋದಿ ಟೀಕಿಸಿದರು. ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಮತ್ತೆ ತರುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಟ್ವೀಟ್ ಮಾಡಿದ್ದರು. ಇದನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು.

“ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ನಿರ್ಧಾರವನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯ ಎಂದರೆ ಅಂಥ ಹೇಳಿಕೆಗಳನ್ನ ನೀಡಿಯೂ ಅವರು ಬಿಹಾರದ ಜನರ ಬಳಿ ಮತ ಕೇಳುವ ಧೈರ್ಯ ಇದೆಯಲ್ಲಾ” ಎಂದು ಮೋದಿ ಕುಟುಕಿದರು.

ಇನ್ನು ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್​ಜೆಡಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ನರೇಂದ್ರ ಮೋದಿ, ಬಿಹಾರವನ್ನು ‘ಬಿಮಾರು’ (ರೋಗಗ್ರಸ್ತ ಎಂಬ ಅರ್ಥ ಇದೆ. ಹಾಗೆಯೇ ದುರ್ಬಲ ಆರ್ಥಿಕತೆಯುಳ್ಳ ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳನ್ನ ಸೇರಿಸಿ ಬಿಮಾರು ಎಂದು ಕರೆಯುತ್ತಾರೆ.) ರಾಜ್ಯವನ್ನಾಗಿ ಮಾಡಿದವರಿಗೆ ಜನರು ಮತ್ತೆ ಅವಕಾಶ ಕೊಡುವುದಿಲ್ಲ ಎಂದರು.

ಇದನ್ನೂ ಓದಿ: ಟ್ವೀಟ್​ ಮೂಲಕ ಸರ್ಕಾರಿ ಸಂಸ್ಥೆಗಳ ಅವಹೇಳನ: ನಟಿ ಕಂಗನಾ ವಿರುದ್ಧ ದಾಖಲಾಯ್ತು ಮತ್ತೊಂದು ದೂರು

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ 15 ವರ್ಷದ ಆಡಳಿತಕ್ಕೆ ಮುನ್ನ ಆರ್​ಜೆಡಿ 15 ವರ್ಷ ರಾಜ್ಯಭಾರ ಮಾಡಿದ ಅವಧಿಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಮೋದಿ, “ಸೂರ್ಯಾಸ್ತ ಆಯಿತೆಂದರೆ ಎಲ್ಲವೂ ನಿಂತೇ ಹೋಯಿತು ಎಂದರ್ಥ. ಯಾವ ಕಾನೂನೂ ಬಳಕೆಯಲ್ಲಿರಲಿಲ್ಲ. ಸುಲಿಗೆ, ಕೊಲೆ, ಅಪಹರಣ ಸಾಮಾನ್ಯವಾಗಿದ್ದವು. ಬಿಹಾರದ ಈಗಿನ ತಲೆಮಾರಿನ ಜನರು ಮತ ಹಾಕುವ ಮುನ್ನ ಆ ಕತ್ತಲ ಯುಗವನ್ನೊಮ್ಮೆ ನೆನಪಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಮೋದಿ ಭೋಜಪುರಿ ಭಾಷೆಯಲ್ಲಿ ಭಾಷಣದ ಆರಂಭಿಸಿ ಇತ್ತೀಚಿಗೆ ಅಗಲಿದ ಬಿಹಾರಿ ಮುಖಂಡರಾದ ರಾಮ್ ವಿಲಾಸ್ ಪಾಸ್ವಾನ್ ಮತ್ತು ರಘುವಂಶ್ ಪ್ರಸಾದ್ ಸಿಂಗ್ ಅವರಿಗೆ ಗೌರವಾರ್ಪಣೆ ಮಾಡಿದರು. ಹಾಗೆಯೇ, ಗಾಲ್ವನ್ ಕಣಿವೆಯಲ್ಲಿ ಚೀನೀ ಸೈನಿಕರೊಂದಿಗೆ ಕಾದಾಡಿ ವೀರ ಮರಣ ಅಪ್ಪಿದ ಬಿಹಾರೀ ಸೈನಿಕರನ್ನು ಸ್ಮರಿಸಿದರು.

ಇದನ್ನೂ ಓದಿ: Home Loan Offer: ಇತಿಹಾಸದಲ್ಲೇ ಮೊದಲು; ಅತೀ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡಲು ಮುಂದಾದ ಬ್ಯಾಂಕ್​​ಗಳುಕೇಂದ್ರ ಸರ್ಕಾರದ ಕೃಷಿ ಮಸೂದೆಗಳಿಗೆ ಕಾಂಗ್ರೆಸ್ ಮತ್ತಿತರರು ಮಾಡುತ್ತಿರುವ ವಿರೋಧವನ್ನು ಮೋದಿ ಈ ವೇಳೆ ಅಲ್ಲಗಳೆದರು. “ಮಂಡಿ (ಎಪಿಎಂಸಿ ಮಾರುಕಟ್ಟೆ) ಮತ್ತು ಎಂಎಸ್​ಪಿ ಇವರಿಗೆ ಟೀಕಿಸಲು ಒಂದು ನೆಪ ಮಾತ್ರ. ಇವರಿಗೆ ಮಧ್ಯವರ್ತಿಗಳನ್ನ ಕಾಪಾಡುವ ಉದ್ದೇಶ ಮಾತ್ರ ಇದೆ” ಎಂದು ಟೀಕಿಸಿದರು.

ಇನ್ನು, ಬಿಹಾರದಲ್ಲಿ ಎನ್​ಡಿಎ ಮೈತ್ರಿಕೂಟದಿಂದ ಸಿಡಿದು ಹೊರಬಂದು ಎಲ್​ಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿರುವ ಕುರಿತು ಮಾತನಾಡಿದ ಮೋದಿ, “ಚುನಾವಣೆ ಬಂತೆಂದರೆ ಒಬ್ಬಿಬ್ಬರು ಮುಖಂಡರು ದುತ್ತೆಂದು ಕಾಣಿಸಿಕೊಳ್ಳುತ್ತಾರೆ. ವಾಸ್ತವದಲ್ಲಿರುವುದಕ್ಕಿಂತ ಅವರನ್ನು ದೊಡ್ಡವರನ್ನಾಗಿ ಬಿಂಬಿಸಲಾಗುತ್ತದೆ. ಪ್ರತೀ ಚುನಾವಣೆಯಲ್ಲೂ ಇಂಥದ್ದು ಸಾಮಾನ್ಯ. ಇಂಥ ವದಂತಿ ಮತ್ತು ಮಿಥ್ಯೆಗಳನ್ನ ಬಿಹಾರದ ಬುದ್ಧಿವಂತ ಮತದಾರರು ನಂಬುವುದಿಲ್ಲ” ಎಂದರು.
Published by: Vijayasarthy SN
First published: October 23, 2020, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories