Viral News: ಈ ವಯಸ್ಸಲ್ಲೂ ಸಖತ್​ ವರ್ಕೌಟ್​ ಮಾಡಿದ ಮೋದಿ: ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಪ್ರಧಾನಿ ಮೋದಿ ಜಿಮ್ ಒಂದರಲ್ಲಿ ಪ್ರವೇಶಿಸಿ ಜಿಮ್ ಪರಿಕರಗಳನ್ನು ಬಳಸಿ ಕಸರತ್ತಿನ ಕಿರು ಪ್ರದರ್ಶನ ಮಾಡಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ.

ಪಿ.ಎಂ. ಮೋದಿ

ಪಿ.ಎಂ. ಮೋದಿ

  • Share this:
ಇಂದು ಸಾಮಾಜಿಕ ಮಾಧ್ಯಮಗಳು (Social media)ಎಷ್ಟು ಪ್ರಭಾವಶಾಲಿಯಾಗಿವೆ ಎಂದರೆ, ಎಲ್ಲಿಯಾದರೂ ಏನಾದರೊಂದು ಘಟನೆ ನಡೆದು ಅದನ್ನು ಟ್ವಿಟ್ಟರ್‌ (Twitter) ಅಥವಾ ಫೇಸ್‌ಬುಕ್‌ ಪುಟಗಳಲ್ಲಿ ಹಂಚಿಕೊಂಡರೆ ಸಾಕು ಆ ಘಟನೆ ಅಂತರ್ಜಾಲದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತದೆ ಹಾಗೂ ಅಲ್ಪಾವಧಿಯಲ್ಲೇ ಲಕ್ಷಾಂತರ(Millions) ಜನರಿಗೆ ತಲುಪುತ್ತದೆ.ಹಾಗಾಗಿಯೇ, ಇಂದು ಬಹು ಸಂಖ್ಯೆಯಲ್ಲಿ ಗಣ್ಯ ವ್ಯಕ್ತಿಗಳು, ರಾಜಕೀಯ ವಲಯದ ವ್ಯಕ್ತಿಗಳು, ಅಷ್ಟೆ ಅಲ್ಲ ಪ್ರಭಾವಿ (Influential Entrepreneurs) ಉದ್ಯಮಿಗಳು ಸಹ ತಮ್ಮ ತಮ್ಮ ಕೆಲಸಗಳ ಪ್ರದರ್ಶನಕ್ಕಾಗಿ ಅಥವಾ ತಾವು ಹೇಳಬೇಕಾಗಿರುವುದು ಬಹು ಜನರಿಗೆ ತಲುಪುವಂತೆ ಮಾಡಲು ಸಾಮಾಜಿಕ ಮಾಧ್ಯಮಗಳ ಬಳಕೆ ಮಾಡುತ್ತಲೇ ಇರುತ್ತಾರೆ.

ಸಾವಿರಾರುಗಟ್ಟಲೆ ಮೆಚ್ಚುಗೆ
ಅದರಲ್ಲೂ ವಿಶೇಷವಾಗಿ ಪ್ರಧಾನಿ ಮೋದಿಯವರು ಮೊದಲಿನಿಂದಲೂ ಸಾಮಾಜಿಕ ಮಾಧ್ಯಮಗಳನ್ನು ಜನರೊಂದಿಗೆ ಬೆರೆಯಲು ಪರಿಣಾಮಕಾರಿಯಾಗಿ ಬಳಸಲು ಸಿದ್ಧಹಸ್ತರು. ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿಯವರಿಗೆ ಕೋಟ್ಯಂತರ ಸಂಖ್ಯೆಯಲ್ಲಿ ಹಿಂಬಾಲಕರಿದ್ದಾರೆ. ಮೋದಿಯವರ ಯಾವುದಾದರೂ ಪ್ರಸಂಗಗಳನ್ನು ಯಾರಾದರೂ ಶೇರ್ ಮಾಡಿಕೊಂಡರೂ ಸಾವಿರಾರುಗಟ್ಟಲೆ ಮೆಚ್ಚುಗೆಗಳು ಬರುವುದರಲ್ಲಿ ಸಂದೇಹವೇ ಇಲ್ಲ.

ಇದನ್ನೂ ಓದಿ: PM Modi: ಅಬ್ಬಬ್ಬಾ ಪ್ರಧಾನಿ ಮೋದಿ ಸಂಚರಿಸುವ 12 ಕೋಟಿಯ ಕಾರಿಗೆ ಎಷ್ಟೆಲ್ಲಾ ಭದ್ರತೆ ಇದೆ ಗೊತ್ತಾ?

ಅಲ್ಲದೆ, ಭಾರತೀಯ ಮೂಲದ ಯೋಗಾಸನವನ್ನು ಜಗತ್ತಿನಾದ್ಯಂತ ಮುಖ್ಯವಾಹಿನಿಗೆ ಬರಲು ತಮ್ಮದೆ ಆದ ಕೊಡುಗೆ ನೀಡಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಆರೋಗ್ಯವನ್ನು ಸದಾ ಸದೃಢವಾಗಿ ಇರಿಸಿಕೊಳ್ಳುವಲ್ಲಿ ನಂಬಿಕೆ ಹೊಂದಿದ್ದಾರೆಂದರೆ ತಪ್ಪಾಗಲಾರದು. ಹಾಗಾಗಿಯೇ ಅವರು ದೇಶದ ಯುವಜನತೆಗೆ ಸದಾ ಫಿಟ್ ಆಗಿರುವಂತೆ ಉತ್ತೇಜಿಸಿ ಫಿಟ್ ಇಂಡಿಯಾದ ಸಮರ್ಥನೆ ಮಾಡುತ್ತಿರುತ್ತಾರೆ.

ಕಸರತ್ತಿನ ಕಿರು ಪ್ರದರ್ಶನ
ಭಾನುವಾರದಂದು ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿದ್ದ ಜಿಮ್ ಒಂದರಲ್ಲಿ ಪ್ರವೇಶಿಸಿ ಜಿಮ್ ಪರಿಕರಗಳನ್ನು ಬಳಸಿ ಕಸರತ್ತಿನ ಕಿರು ಪ್ರದರ್ಶನ ಮಾಡಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ಭಾನುವಾರದಂದು ಉತ್ತರ ಪ್ರದೇಶದ ಮೀರತ್‌ನಲ್ಲಿ ಮೇಜರ್ ಧ್ಯಾನಚಂದ್ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡಿಪಾಯದ ಕಲ್ಲನ್ನು ಹಾಕುವ ಕಾರ್ಯಕ್ರಮಕ್ಕೆ ಮೋದಿ ತೆರಳಿದ್ದರು.

ವಿಡಿಯೋ ನೋಡಿ:

ಶಂಕುಸ್ಥಾಪನೆಯ ಕಾರ್ಯಕ್ರಮ ಮುಕ್ತಾಯದ ನಂತರ ಪ್ರಧಾನಿ ಅಲ್ಲೇ ಇದ್ದ ಜಿಮ್‌ಗೆ ಪ್ರವೇಶಿಸಿ ಅಲ್ಲಿದ್ದ ಉಪಕರಣಗಳನ್ನು ಪ್ರಯತ್ನಿಸಿದ್ದರು. ಆ ಮೂಲಕ "ಫಿಟ್ ಇಂಡಿಯಾ"ದ ಸಂದೇಶವನ್ನು ಜನರಿಗೆ ಸಾರಿದರು. ಈ ದೃಶ್ಯವೀಗ ವೈರಲ್ ಆಗುತ್ತಿದೆ. ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ದೃಶ್ಯ ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಮೆಚ್ಚುಗೆಗಳನ್ನು ಪಡೆದುಕೊಂಡಿದ್ದು ಆ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಲೇ ಇದೆ.

ಗಮನ ಸೆಳೆಯುವ ತಂತ್ರ
ಈಗಾಗಲೇ ಚುನಾವಣಾ ಆಯೋಗದಿಂದ ಈ ವರ್ಷದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಚುನಾವಣೆಯೂ ಸಹ ಒಂದಾಗಿದ್ದು ಇದು ದೇಶದಲ್ಲೇ ಎಲ್ಲರ ಗಮನ ಸೆಳೆದಿದೆ ಹಾಗೂ ರಾಜಕೀಯ ವಲಯದಲ್ಲಿ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಚುನಾವಣೆಯ ಕಾವು ನಿಧಾನವಾಗಿ ಏರುತ್ತಿದ್ದು ಎಲ್ಲ ಪಕ್ಷಗಳು ತಮ್ಮದೆ ಆದ ರಣತಂತ್ರಗಳನ್ನು ಹೆಣೆಯುತ್ತಿವೆ. ಹಾಗಾಗಿ ಈ ರಾಜ್ಯದಲ್ಲಿ ಪ್ರಮುಖವಾಗಿ ನಡೆಯುವ ಘಟನೆಗಳು ಸಾಮಾನ್ಯವಾಗಿ ಎಲ್ಲರ ಗಮನ ಸೆಳೆಯುವಂತಿರುತ್ತದೆ.

ಯುಪಿ ಗದ್ದುಗೆ
ಇಂತಹ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರೂ ಸಹ ಈಗಾಗಲೇ ಹಲವು ಬಾರಿ ಉತ್ತರ ಪ್ರದೇಶದ ಪ್ರವಾಸ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಒಟ್ಟಿನಲ್ಲಿ ಸಾಮಾಜಿಕವಾಗಿ ಪ್ರಧಾನಿಯವರು ಮಾಡುತ್ತಿರುವ ಕಾರ್ಯಗಳು ಒಂದೆಡೆಯಾದರೆ ರಾಜಕೀಯವಾಗಿ ಈ ಕುರಿತು ವಿರೋಧ ಪಕ್ಷಗಳು ತಮ್ಮದೇ ಆದ ಅಭಿಪ್ರಾಯ ಹಾಗೂ ನಿಲುವುಗಳನ್ನು ಹೊಂದಿರಬಹುದು. ಒಟ್ಟಿನಲ್ಲಿ ಪಕ್ಷಗಳ ಮುಖಂಡರ ಕಣ್ಣು ಯುಪಿ ಗದ್ದುಗೆ ಮುಂದೆ ಯಾರಿಗೆ ಒಲಿಯಲಿದೆ ಎಂಬುದರ ಮೇಲೆಯೇ ಕಾದು ಕುಳಿತಿವೆ.

ಇದನ್ನೂ ಓದಿ: Goa: ಸರ್ದಾರ್ ಪಟೇಲ್ ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಗೋವಾ ಇನ್ನು ಬೇಗ ಮುಕ್ತವಾಗುತ್ತಿತ್ತು: ಮೋದಿ

ಇನ್ನು, ಮೋದಿಯವರು ಜಿಮ್‌ಗೆ ಭೇಟಿ ನೀಡಿ ಅಲ್ಲಿದ್ದ ಉಪಕರಣಗಳನ್ನು ಪ್ರಯೋಗಿಸಿದ ಕುರಿತಂತೆ ಮಾಧವ್ ತಿವಾರಿ ಎಂಬುವವರು ತಮ್ಮ ಟ್ವಿಟ್ಟರ್‌ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದು, "ನಾನು 24 ಹಾಗೂ 28ಕ್ಕೂ ಸದೃಢವಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ,
Published by:vanithasanjevani vanithasanjevani
First published: