• Home
  • »
  • News
  • »
  • national-international
  • »
  • PM Narendra Modi: "ಔಷಧಿಗಳ ಆಧಾರ್ ಕಾರ್ಡ್" ಯೋಜನೆ ಜಾರಿಗೆ ನಿರ್ಧರಿಸಿದ ಮೋದಿ ಸರ್ಕಾರ

PM Narendra Modi: "ಔಷಧಿಗಳ ಆಧಾರ್ ಕಾರ್ಡ್" ಯೋಜನೆ ಜಾರಿಗೆ ನಿರ್ಧರಿಸಿದ ಮೋದಿ ಸರ್ಕಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ

ಈ ಉಪಕ್ರಮವು ಆಗಸ್ಟ್ 1, 2023 ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದ್ದು ಈ ಮೂಲಕ ಔಷಧಿಗಳ ನೈಜತ್ವ, ಹಾಗೂ ಸಮರ್ಪಕವಾದ ರೀತಿಯಲ್ಲಿ ಅದರ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇರಿಸಬಹುದಾಗಿದೆ.

  • Share this:

ದೆಹಲಿ: ಆಧಾರ್ ಕಾರ್ಡ್​ನಂತೆಯೇ ಈ ಕ್ಯೂಆರ್ ಅಥವಾ ಬಾರ್ ಕೋಡ್​ಗಳು ಔಷಧಿಯ ವಿಶಿಷ್ಟ ಗುರುತಿನ ಸಂಖ್ಯೆ, ಅದರ ಸರಿಯಾದ ಹಾಗೂ ಜನರಿಕ್ ಹೆಸರು, ಬ್ರ್ಯಾಂಡ್ ಹೆಸರು, ತಯಾರಿಸಿದ ದಿನಾಂಕ, ಉತ್ಪಾದಕರ ಹೆಸರು, ಎಕ್ಸ್ ಪೈರ್ ಆಗುವ ದಿನಾಂಕ, ಬ್ಯಾಚ್ ಸಂಖ್ಯೆ, ಉತ್ಪಾದನಾ ಪರವಾನಗಿ ಸಂಖ್ಯೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಒಳಗೊಂಡಿರಲಿದೆ.  ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು (PM Narendra Modi Government) ಔಷಧಿಗಳ ಕ್ಷೇತ್ರದಲ್ಲಿ ಮತ್ತೊಂದು ಹೊಸ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವ ಬಗ್ಗೆ ಯೋಜಿಸುತ್ತಿದೆ. ಮೋದಿ ಅವರು ಹೇಳಿರುವಂತೆ ಇದೊಂದು ದವಾ ಕಾ ಆಧಾರ್ ಕಾರ್ಡ್ (Dawa Ka Aadhaar Card) ಯೋಜನೆಯಾಗಿದ್ದು ಈ ಮೂಲಕ ಭಾರತದಲ್ಲಿ ಮುಂಚೂಣಿಯಲ್ಲಿ ಮಾರಾಟವಾಗುವ ಹಲವು ಔಷಧಿಗಳ ಪ್ಯಾಕೆಟ್​ಗಳ ಮೇಲೆ ಕ್ಯೂಆರ್ (QR Code On Medicines)  ಅಥವಾ ಬಾರ್ ಕೋಡ್​ಗಳನ್ನು  ಅಳವಡಿಸುವುದು ಕಡ್ಡಾಯವಾಗಲಿದೆ.


ಕಳೆದ ತಿಂಗಳಷ್ಟೇ ಆರೋಗ್ಯ ಮಂತ್ರಾಲಯವು ಮಾರಾಟವಾಗುವ ಮೊದಲ 300 ಔಷಧಿ ಬ್ರ್ಯಾಂಡುಗಳು ತಮ್ಮ ಔಷಧಿ ಉತ್ಪನ್ನಗಳ ಮೇಲೆ ಬಾರ್​ಕೋಡ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಶೆಡ್ಯೂಲ್ H2 ಅನ್ನು ಜಾರಿ ಮಾಡಿದೆ.


ಔಷಧಿಗಳಿಗಾಗಿ ಆಧಾರ್ ಕಾರ್ಡ್
ಈ ಉಪಕ್ರಮವು ಆಗಸ್ಟ್ 1, 2023 ರಿಂದ ಪರಿಣಾಮಕಾರಿಯಾಗಿ ಜಾರಿಗೆ ಬರಲಿದ್ದು ಈ ಮೂಲಕ ಔಷಧಿಗಳ ನೈಜತ್ವ, ಹಾಗೂ ಸಮರ್ಪಕವಾದ ರೀತಿಯಲ್ಲಿ ಅದರ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇರಿಸಬಹುದಾಗಿದೆ. ಎರಡು ಸರ್ಕಾರಿ ಮೂಲಗಳ ಪ್ರಕಾರ ಈ ಉಪಕ್ರಮಕ್ಕೆ "ಔಷಧಿಗಳಿಗಾಗಿ ಆಧಾರ್ ಕಾರ್ಡ್" ಎಂಬ ಹೆಸರನ್ನಿರಿಸಲಾಗುವುದು ಎಂದಾಗಿದೆ.


ಇದರಲ್ಲಿ ಸಿಗಲಿವೆ ಹಲವು ಮಾಹಿತಿ
ಮೂಲಗಳ ಪ್ರಕಾರ, ಆಧಾರ್ ಕಾರ್ಡ್​ನಂತೆಯೇ ಈ ಕ್ಯೂಆರ್ ಅಥವಾ ಬಾರ್ ಕೋಡ್​ಗಳು ಔಷಧಿಯ ವಿಶಿಷ್ಟ ಗುರುತಿನ ಸಂಖ್ಯೆ, ಅದರ ಸರಿಯಾದ ಹಾಗೂ ಜನರಿಕ್ ಹೆಸರು, ಬ್ರ್ಯಾಂಡ್ ಹೆಸರು, ತಯಾರಿಸಿದ ದಿನಾಂಕ, ಉತ್ಪಾದಕರ ಹೆಸರು, ಎಕ್ಸ್ ಪೈರ್ ಆಗುವ ದಿನಾಂಕ, ಬ್ಯಾಚ್ ಸಂಖ್ಯೆ, ಉತ್ಪಾದನಾ ಪರವಾನಗಿ ಸಂಖ್ಯೆ ಸೇರಿದಂತೆ ಹಲವು ಮಹತ್ವದ ಮಾಹಿತಿಯನ್ನು ಒಳಗೊಂಡಿರಲಿದೆ.


ಇನ್ನಷ್ಟು ಉಪಯೋಗದ ಭರವಸೆ
ಸದ್ಯ, ತಿಳಿದುಬಂದಿರುವ ಮಾಹಿತಿಗಳ ಪ್ರಕಾರ, ಈ ಉಪಕ್ರಮವನ್ನು ಸರ್ಕಾರವು ಇತರೆ ಎರಡು ಯೋಜನೆಗಳೊಂದಿಗೆ ಪ್ರಚಾರ ಮಾಡಲಿದೆ. ಅವುಗಳೆಂದರೆ ಫಾರ್ಮಾ ಸಹಿ ದಾಮ್ (ಔಷಧಿಯನ್ನು ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೆ ಸಂಬಂಧಿಸಿದಂತೆ ದೂರು ನೀಡುವಿಕೆ) ಹಾಗೂ ಫಾರ್ಮಾ ಕೋವಿಜಿಲೆನ್ಸ್ (ಔಷಧಿಯ ಅಡ್ಡಪರಿಣಾಮಗಳನ್ನು ಉಲ್ಲೇಖಿಸುವಿಕೆ).


ಭಾರತದಾದ್ಯಂತ ಉಪಸ್ಥಿತವಿರುವ ಎಲ್ಲ ಕೆಮಿಸ್ಟ್ ಹಾಗೂ ಡ್ರಗ್ಗಿಸ್ಟ್ ವಿತರಣೆಗಾರರನ್ನು ಇದರ ವ್ಯಾಪ್ತಿಯಲ್ಲಿ ತರಲಾಗುತ್ತಿದ್ದು ಈ ಮೂರು ಯೋಜನೆಗಳಿಂದ ಜನರಲ್ಲಿ ಹೆಚ್ಚಿನ ಮಟ್ಟದ ಜಾಗೃತಿ ಮೂಡಲಿದೆ ಎಂದು ನಂಬಲಾಗಿದೆ.


ಇದನ್ನೂ ಓದಿ: G20 Summit: ಭಾರತದಲ್ಲಿ ಮುಂದಿನ ಜಿ20 ಶೃಂಗಸಭೆ, ರಷ್ಯಾದ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದ ಬಾಗ್ಚಿ


"ನಾವು ಇದಕ್ಕೆ ಸಂಬಂಧಿಸಿದಂತೆ ಮೂರು ಯೋಜನೆಗಳ ಹೋರ್ಡಿಂಗ್ ಹಾಗೂ ಬ್ಯಾನರ್ ಗಳು ಎಲ್ಲ ಔಷಧಿ ಅಂಗಡಿಗಳ ಮೇಲೆ ಇರುವಂತೆ ಮಾಡಲಾಗುವ ಬಗ್ಗೆ ಯೋಜಿಸುತ್ತಿದ್ದೇವೆ" ಎಂದು ಸರ್ಕಾರಿ ಮೂಲಗಳಿಂದ ತಿಳಿದುಬಂದಿದೆ.


ಇನ್ನು ಈ ಉಪಕ್ರಮಗಳ ಬಗ್ಗೆ ಭಾರತದಾದ್ಯಂತೆ ಎಲ್ಲ ಫಾರ್ಮಾಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ನಿಯಮಗಳಲ್ಲಿ ಕೆಲವು ನಿಯಮಗಳನ್ನು ತಿದ್ದುಪಡಿ ಮಾಡುವುದು ಅವಶ್ಯಕವಾಗಿದೆ. ಅದನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ: Train: ನೀವು ರೈಲಿನಲ್ಲಿ ಪ್ರಯಾಣಿಸುತ್ತೀರಾ? ಹಾಗಿದ್ರೆ ಈ ವಿಚಾರಗಳು ನಿಮಗೆ ತಿಳಿದಿರಲಿ


ಭಾರತದಲ್ಲಿ ಪ್ರಸ್ತುತ ಮಂಚೂಣಿಯಲ್ಲಿ ಮಾರಾಟವಾಗುವ ಕೆಲ ಉನ್ನತ ಬ್ರ್ಯಾಂಡ್​ಗಳಾದ ಅಲೆಗ್ರಾ, ಡೊಲೊ, ಕಾಲ್ಪೋಲ್, ಆಗ್ಮೆಂಟಿನ್, ಸ್ಯಾರಿಡಾನ್, ಹಾಗೂ ಥೈರೋನಾರ್ಮ್ ಮುಂದಿನ ದಿನಗಳಲ್ಲಿ ತಾವು ಉತ್ಪಾದಿಸುವ ಔಷಧೀಯ ಉತ್ಪನ್ನಗಳ ಪ್ಯಾಕೆಟ್ಟುಗಳ ಮೇಲೆ ಬಾರ್ಕೋಡ್ ಅಥವಾ ಕ್ಯೂಆರ್ ಕೋಡನ್ನು ಮುದ್ರಿಸಲಿವೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು