ರೈತ ವಿರೋಧಿಗಳಿಂದ ಆತಂಕ ಸೃಷ್ಟಿಸುವ ಕೆಲಸ; ಕೇಂದ್ರ ಕೃಷಿ ಮಸೂದೆ ಸಮರ್ಥಿಸಿಕೊಂಡ ಪ್ರಧಾನಿ
ಈ ಮಸೂದೆಯಿಂದ ನಾವು ರೈತರನ್ನು ಮೋಸಗೊಳಿಸುವ ಉದ್ದೇಶ ನಮಗೆ ಇಲ್ಲ. ನಮ್ಮ ಉದ್ದೇಶ ಕೂಡ ಈ ಗಂಗೆಯಷ್ಟೇ ಪವಿತ್ರವಾಗಿದೆ ಎಂದರು

ನರೇಂದ್ರ ಮೋದಿ
- News18 Kannada
- Last Updated: November 30, 2020, 5:34 PM IST
ಕೃಷಿ ಮಸೂದೆ ಮೂಲಕ ಕೋಟಿ ಮೌಲ್ಯದ ವಿಶೇಷ ನಿಧಿಯನ್ನು ಜಾರಿಗೆ ತಂದಿದ್ದೇವೆ. ಮೂಲ ಸೌಕರ್ಯ ಮತ್ತು ವಿಶೇಷ ಕಿಸಾನ್ ರೈಲುಗಳ ಸುಧಾರಣೆಯಿಂದ ರೈತರ ಆದಾಯ ಹೆಚ್ಚಾಲಿದೆ. ಇದರಿಂದ ಅವರಿಗೆ ಮೂಲ ಸೌಕರ್ಯ ಸ್ಥಾಪಿಸಬಹುದು. ಹೊಸ ಮಾರುಕಟ್ಟೆ ಹುಡುಕಲು ಇದು ಸಹಾಯ ಮಾಡಲಿದೆ. ಇದರ ಜೊತೆ ಅವರ ಆದಾಯ ಕೂಡ ಹೆಚ್ಚಲಿದೆ. ರೈತರು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಸಂಪೂರ್ಣ ಲಾಭ ಪಡೆಯಬೇಕು. ಬನಾರಸಿ ಮಾವು ಅಂತರರಾಷ್ಟ್ರೀಯ ಮಾರುಕಟ್ಟೆ ಪಡೆಯಬೇಕು. ಉತ್ತರ ಪ್ರದೇಶದಲ್ಲಿ ಬೆಳೆಯುವ ಕಪ್ಪು ಅಕ್ಕಿಗೆ ಆಸ್ಟ್ರೇಲಿಯಾದಲ್ಲಿ ಮಾರುಕಟ್ಟೆ ಇದೆ. ಈ ಹಿನ್ನಲೆ ಉತ್ತಮ ಮಾರುಕಟ್ಟೆಗಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಕೇಂದ್ರ ಕೃಷಿ ಮಸೂದೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸಮರ್ಥಿಸಿಕೊಂಡರು
Farmers are being empowered by giving them options for a bigger market. Reforms are being done in the interest of farmers, which will give them more options. Shouldn't a farmer get freedom to sell his produce directly to those who give them better prices & facilities: PM Modi https://t.co/p0RQLjI4ix pic.twitter.com/DLLX4hLP6E
— ANI UP (@ANINewsUP) November 30, 2020
ನಾವು ಸ್ವಾಮಿನಾಥನ್ ವರದಿಯನ್ನು ಮತ್ತು ಉತ್ತಮ ರೀತಿಯ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೆ ತಂದಿದ್ದೇವೆ. ಅಷ್ಟೇ ಅಲ್ಲದೇ ರೈತರ ಖಾತೆಗಳಿಗೆ ನೇರವಾಗಿ ಠೇವಣಿ ಇಡುವ ವ್ಯವಸ್ಥೆ ಮಾಡಿದ್ದೇವೆ, 2014ಕ್ಕಿಂತ ಮೊದಲು ಖರೀದಿಸಿದ್ದಕ್ಕಿಂತ ಹೆಚ್ಚಿನ ಧಾನ್ಯಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಿದ್ದೇವೆ. ಮಂಡಿ ಹಾಗೂ ಬೆಂಬಲ ಬೆಲೆ ತೆಗೆದುಹಾಕಬೇಕು ಎಂಬ ಉದ್ದೇಶ ಇದ್ದಿದ್ದರೆ, ನಾವು ಯಾಕೆ ಅದನ್ನು ಬಲಪಡಿಸುವ ಕಾನೂನು ತರುತ್ತಿದ್ದೇವು ಎಂದು ಪ್ರಶ್ನಿಸಿದರು.
For the first time, produce of Varanasi farmers is being exported to foreign countries at a large scale. Varanasi's Langda & Dussehri mangoes are spreading their fragrance in London & middle-east...Mango farmers need not go to other cities for packaging now: PM Modi in Varanasi https://t.co/dDBgDTdUFl pic.twitter.com/wUjsXyp9cF
— ANI UP (@ANINewsUP) November 30, 2020
ಕಳೆದ ಐದು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಹಿನ್ನಲೆ ಅವರೊಂದಿಗೆ ಮಾತುನಾಡುತ್ತಿದ್ದೇವೆ. ಅವರ ಆತಂಕವನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದೇವೆ. ಈ ಕೆಲಸವನ್ನು ನಾವು ಅವರಿಗಾಗಿ ಮುಂದುವರೆಸುತ್ತೇವೆ.
ಇದನ್ನು ಓದಿ: ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷ ಸಭೆ
ಕಾಂಗ್ರೆಸ್ನಿಂದ ಅಭಿಯಾನ:
ಕೇಂದ್ರದ ಹೊಸ ಕೃಷಿ ನೀತಿ ವಿರೋಧಿಸಿ ರೈತರ ಹೋರಾಟಕ್ಕೆ ಬೆಂಬಲಿಸುವ ಕಾರ್ಯವನ್ನು ಕಾಂಗ್ರೆಸ್ ನಡೆಸುತ್ತಿದೆ. ಇದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ನಡೆಸಿದೆ. ಮೋದಿ ಸರ್ಕಾರ ರೈತರ ದಮನ ಮಾಡುತ್ತಿದೆ. ಮೊದಲು ಅವರ ವಿರೋಧಿ ಕಾನೂನು ತಂದರೂ, ಈಗ ಲಾಠಿ ಪ್ರಯೋಗ ಮಾಡುತ್ತಿದ್ದಾರೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. #SpeakUpForFarmers campaign ಎಂಬ ಹ್ಯಾಷ್ಟ್ಯಾಗ್ ಅಡಿ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಅಭಿಯಾನ ನಡೆಸಲು ಮುಂದಾಗಿದ್ದಾರೆ.