ಗುಜರಾತ್: ವಿಧಾನಸಭಾ ಚುನಾವಣೆ (assembly election) ಹತ್ತಿರವಾಗುತ್ತಿದ್ದಂತೆ ಗುಜರಾತ್ನಲ್ಲಿ (Gujarat) ರಾಜಕೀಯ ನಾಯಕರ (political leaders) ಪ್ರಚಾರ (campaign) ಜೋರಾಗಿದೆ. ಇಂದು ಗುಜರಾತ್ನಲ್ಲಿ ಚುನಾವಣಾ ಪ್ರಚಾರದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ (Congress) ವಿರುದ್ಧ ಹರಿಹಾಯ್ದಿದ್ದಾರೆ. “ಕಾಂಗ್ರೆಸ್ ಉಗ್ರರನ್ನು (terrorists) ಟಾರ್ಗೆಟ್ ಮಾಡುವ ಬದಲು ನನ್ನನ್ನು ಟಾರ್ಗೆಟ್ ಮಾಡುತ್ತಿದೆ. ಭಯೋತ್ಪಾದಕರ ವಿರುದ್ಧ ಮಾಡಲಾಗಿದ್ದ ಸರ್ಜಿಕಲ್ ಸ್ಟ್ರೈಕ್ (surgical strike) ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸುತ್ತಿದೆ” ಅಂತ ಗಂಭೀರವಾಗಿ ಆರೋಪಿಸಿದರು. “ದೇಶವು ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಯುದ್ಧವನ್ನು (War) ನಡೆಸುತ್ತಿದ್ದಾಗ, ಅವರು ದೇಶವನ್ನು ದಾರಿತಪ್ಪಿಸಲು ಮತ್ತು ಹೋರಾಟವನ್ನು ದುರ್ಬಲಗೊಳಿಸಲು ಬಯಸಿದ್ದರು” ಅಂತ ಆರೋಪಿಸಿದ್ದಾರೆ.
ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಗುಜರಾತ್ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿ ಭಯೋತ್ಪಾದಕರ ವಿರುದ್ಧ ನಡೆಸಲಾದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪುರಾವೆಗಳನ್ನು ಕೇಳಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಭಯೋತ್ಪಾದಕರ ಬಿಡುಗಡೆಗೆ ಅಂದಿನ ಸರ್ಕಾರ ಪ್ರಯತ್ನ”
“ದೇಶವು ಭಯೋತ್ಪಾದನೆಯ ವಿರುದ್ಧ ನಿರ್ಣಾಯಕ ಯುದ್ಧವನ್ನು ನಡೆಸುತ್ತಿದ್ದಾಗ, ಅವರು ದೇಶವನ್ನು ದಾರಿತಪ್ಪಿಸಲು ಮತ್ತು ಹೋರಾಟವನ್ನು ದುರ್ಬಲಗೊಳಿಸಲು ಬಯಸಿದ್ದರು” ಎಂದು ಆಕ್ರೋಶದ ಮಾತನ್ನಾಡಿದ್ದಾರೆ. ಭಯೋತ್ಪಾದಕರ ಹತ್ಯೆಯ ಬಗ್ಗೆ ಕಾಂಗ್ರೆಸ್ ಕಣ್ಣೀರು ಸುರಿಸಿದ ಘಟನೆಗಳನ್ನು ವಿವರಿಸಿದ ಮೋದಿ, ಅವರು 26/11 ಮುಂಬೈ ಭಯೋತ್ಪಾದಕ ದಾಳಿಗೆ ಹಿಂದಿನ ಸರ್ಕಾರದ ಉತ್ತರ ಮೃಧುವಾಗಿತ್ತು. ದಿಲ್ಲಿಯಲ್ಲಿ ಕುಳಿತಿದ್ದ ಅಂದಿನ ಕಾಂಗ್ರೆಸ್ ಸರಕಾರ, ಭಯೋತ್ಪಾದಕರನ್ನು ಬಿಡುಗಡೆ ಮಾಡಲು ಹೇಗೆ ಶಕ್ತಿ ವಿನಿಯೋಗಿಸುತ್ತಿತ್ತು ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಪ್ರಧಾನಿ ಆರೋಪಿಸಿದ್ರು.
ಇದನ್ನೂ ಓದಿ: Gujarat Election: ಅಯೋಧ್ಯೆಯಲ್ಲಿ ರಾಮ ಎಲ್ಲಾದರೂ ಇರಲಿ, ಅದು ಮುಖ್ಯವಲ್ಲ! ಕಾಂಗ್ರೆಸ್ ನಾಯಕನ ಹೇಳಿಕೆಗೆ ಬಿಜೆಪಿ ಆಕ್ರೋಶ
“ಭಯೋತ್ಪಾದನೆಯಲ್ಲೂ ವಿಪಕ್ಷಗಳಿಂದ ವೋಟ್ ಬ್ಯಾಂಕ್”
ಕಾಂಗ್ರೆಸ್ ಮತ್ತು ಇತರೇ ಹೊಸ ವಿಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯವನ್ನು ಅಭ್ಯಾಸ ಮಾಡುತ್ತಿವೆ. ಭಯೋತ್ಪಾದನೆಯನ್ನೂ ಮತ ಬ್ಯಾಂಕ್ಗಳ ದೃಷ್ಟಿಯಿಂದ ನೋಡುತ್ತಿವೆ ಎಂದು ಆರೋಪಿಸಿದ ಪ್ರಧಾನಿ, “ಭಯೋತ್ಪಾದನೆಯ ಸಿದ್ಧಾಂತವು ಕಣ್ಮರೆಯಾಗಿಲ್ಲ. ವೋಟ್ ಬ್ಯಾಂಕ್ ರಾಜಕಾರಣ ಇರುವವರೆಗೂ ಭಯೋತ್ಪಾದನೆಯ ಅಪಾಯ ಇದ್ದೇ ಇರುತ್ತದೆ. ವೋಟ್ ಬ್ಯಾಂಕ್ ರಾಜಕಾರಣ ಮಾಡುವ ಪಕ್ಷಗಳ ಬಗ್ಗೆ ದೇಶ ಮತ್ತು ಗುಜರಾತ್ ಬಹಳ ಎಚ್ಚರಿಕೆಯಿಂದ ಇರಬೇಕು. ಭಯೋತ್ಪಾದನಾ ದಾಳಿಯ ಅಪಾಯದಲ್ಲೂ ಮೌನವಾಗಿರುವ ಪಕ್ಷಗಳು ಮತ್ತು ಸರ್ಜಿಕಲ್ ಸ್ಟ್ರೈಕ್ನ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಪಕ್ಷಗಳು ಮತಕ್ಕಾಗೇ ಎಲ್ಲವನ್ನೂ ಮಾಡುತ್ತದೆ ಅಂತ ಆರೋಪಿಸಿದರು.
“ಭಯೋತ್ಪಾದನೆ ಬದಲು ನನ್ನನ್ನು ಟಾರ್ಗೆಟ್ ಮಾಡಿದರು”
ಗುಜರಾತ್ ಬಹುಕಾಲದಿಂದ ಭಯೋತ್ಪಾದನೆಯ ಗುರಿಯಾಗಿತ್ತು. ಸೂರತ್ ಮತ್ತು ಅಹಮದಾಬಾದ್ನಲ್ಲಿ ನಡೆದ ಸ್ಫೋಟಗಳಲ್ಲಿ ಗುಜರಾತ್ನ ಜನರು ಸಾವನ್ನಪ್ಪಿದ್ದಾರೆ. ಆಗ ಕಾಂಗ್ರೆಸ್ ಕೇಂದ್ರದಲ್ಲಿತ್ತು, ಆದರೂ ಏನು ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಅಂದು ನಾವು ಭಯೋತ್ಪಾದನೆಯನ್ನು ಟಾರ್ಗೆಟ್ ಮಾಡಿ ಅಂತ ಮನವಿ ಮಾಡಿದ್ದೆವು, ಆದರೆ ಅವರು ನನ್ನನ್ನು ಟಾರ್ಗೆಟ್ ಮಾಡಿದರು ಅಂತ ಮೋದಿ ವ್ಯಂಗ್ಯವಾಡಿದರು.
ಇದನ್ನೂ ಓದಿ: Bharat Jodo Yatra: ಭಾರತ್ ಜೋಡೋ ಯಾತ್ರಾದಲ್ಲಿ ಕೇಳಿ ಬಂತಾ ಪಾಕ್ ಪರ ಘೋಷಣೆ? ಬಿಜೆಪಿ ಗಂಭೀರ ಆರೋಪ
“2014ರಲ್ಲಿ ನಿಮ್ಮ ವೋಟ್ ಭಯೋತ್ಪಾದನೆ ನಿಗ್ರಹಕ್ಕೆ ಕಾರಣವಾಯ್ತು”
ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದ ಪ್ರಧಾನಿ ಮೋದಿ, 2014ರಲ್ಲಿ ನಿಮ್ಮ ಒಂದು ಮತವು ದೇಶದಲ್ಲಿ ಭಯೋತ್ಪಾದನೆಯನ್ನು ಅಡಗಿಸುವಲ್ಲಿ ಸಾಕಷ್ಟು ಸಹಾಯ ಮಾಡಿದೆ. ನಮ್ಮ ಗಡಿಯ ಮೇಲೆ ದಾಳಿ ಮಾಡುವ ಮುಂಚೆಯೇ ಭಯೋತ್ಪಾದಕರು ಯೋಚಿಸುವಂತಾಗಿದೆ. ಆದರೆ ಕಾಂಗ್ರೆಸ್ ನಮ್ಮ ಸೇನೆಯ ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸುತ್ತದೆ ಅಂತ ಟೀಕಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ