Rishi Sunak: ಸುನಕ್ ಸುಂಟರಗಾಳಿಗೆ ಪ್ರಧಾನಿ ಮೋದಿ ಶುಭಾಶಯ

ರಿಷಿ ಸುನಕ್ ಮತ್ತು ಪ್ರಧಾನಿ ಮೋದಿ

ರಿಷಿ ಸುನಕ್ ಮತ್ತು ಪ್ರಧಾನಿ ಮೋದಿ

ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್​ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದೇಶಗಳ ನಾಯಕರು ಶುಭಕೋರಿದ್ದಾರೆ. ಹೃತ್ಪೂರ್ವಕ ಅಭಿನಂದನೆಗಳು ರಿಷಿ ಸುನಕ್, ನೀವು ಬ್ರಿಟನ್ ಪಿಎಂ ಆಗುತ್ತಿದ್ದಂತೆ, ಜಾಗತಿಕ ಸಮಸ್ಯೆಗಳ ಬಗ್ಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಅಂತ ಟ್ವೀಟ್ ಮಾಡಿದ್ದಾರೆ.

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

  ಬ್ರಿಟನ್ ಹೊಸ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಕ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ  ಮೂಲದ ರಿಷಿ ಸುನಕ್ (Rishi Sunak) ಅಂತೂ ಇಂತೂ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಖ್ಯಾತ ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ (Infosys Narayana Murthy and Sudhamurthy) ಅಳಿಯ ರಿಷಿ ಸುನಕ್ ಬ್ರಿಟನ್‌ನಲ್ಲಿ ಅಚ್ಚರಿ ಎಂಬಂತೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರು ಈವರೆಗೆ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್​ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದೇಶಗಳ ನಾಯಕರು ಶುಭಕೋರಿದ್ದಾರೆ.


  ಕೆಲ ದಿನಗಳ ಹಿಂದಷ್ಟೇ ಬ್ರಿಟನ್ ಪ್ರಧಾನಿ (British Prime Minister) ಸ್ಥಾನಕ್ಕೆ ಲಿಜ್ ಟ್ರುಸ್ ರಾಜೀನಾಮೆ (Liz Truss resign) ನೀಡಿದ್ದರು. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರುಸ್ ರಾಜೀನಾಮೆ ನೀಡಿದ್ದರು. ಇದೀಗ ಈ ಅದೃಷ್ಟ ರಿಷಿ ಸುನಕ್‌ಗೆ ಒಲಿದು ಬಂದಿದೆ.  ಪ್ರಧಾನಿ ನರೇಂದ್ರ ಮೋದಿ ಟ್ವೀಟ್


  ಹೃತ್ಪೂರ್ವಕ ಅಭಿನಂದನೆಗಳು ರಿಷಿ ಸುನಕ್, ನೀವು ಬ್ರಿಟನ್ ಪಿಎಂ ಆಗುತ್ತಿದ್ದಂತೆ, ಜಾಗತಿಕ ಸಮಸ್ಯೆಗಳ ಬಗ್ಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಮತ್ತು 2030ರ ಮಾರ್ಗಸೂಚಿಯನ್ನು ಕಾರ್ಯಗತಗೊಳಿಸಲು ನಾನು ಎದುರು ನೋಡುತ್ತಿದ್ದೇನೆ. ಬ್ರಿಟನ್ ಭಾರತೀಯರಿಗೆ ವಿಶೇಷ ದೀಪಾವಳಿ ಶುಭಾಶಯಗಳು ಅಂತ ಮೋದಿ ಟ್ವೀಟ್ ಮಾಡಿದ್ದಾರೆ.


  ಇದನ್ನೂ ಓದಿ: Rishi Sunak: ಕೊನೆಗೂ ರಿಷಿ ಸುನಕ್‌ಗೆ ಒಲಿದ ಬ್ರಿಟನ್ ಪ್ರಧಾನಿ ಪಟ್ಟ, ದೀಪಾವಳಿ ದಿನವೇ ಭಾರತೀಯರಿಗೆ ಗುಡ್ ನ್ಯೂಸ್!


  193 ಸಂಸದರ ಬೆಂಬಲ


  ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬೆಂಬಲ ನೀಡಿದ್ದು ಇನ್ನು ರಿಷಿ ಸುನಕ್ ಗೆ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ ಗೆ 26 ಸಂಸದರು ಮಾತ್ರ ಬೆಂಬಲ ನೀಡಿದ್ದು ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಮೋರ್ಡಾಂಟ್ ಹಿಂದೆ ಸರಿದಿದ್ದರು. ಹೀಗಾಗಿ ರಿಷಿ ಹಾದಿ ಸುಗಮವಾಯ್ತು.


  ಅಕ್ಟೋಬರ್ 28ಕ್ಕೆ ರಿಷಿ ಪ್ರಮಾಣ ವಚನ?


  ಆಡಳಿತ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಷಿ ಸುನಕ್ ಅವರು ಕಳೆದ ವಾರ ಅಧಿಕಾರ ತ್ಯಜಿಸಿದ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ರಿಷಿ ಸುನಕ್ ಅವರನ್ನು 1922 ರ ಕನ್ಸರ್ವೇಟಿವ್ ಶಾಸಕರ ಸಮಿತಿಯ ಮುಖ್ಯಸ್ಥರು ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಎಂದು ಕಳೆದ ಸೋಮವಾರ ಘೋಷಿಸಿದ್ದರು. ಈ ಮೂಲಕ ಮುಂದಿನ ಪ್ರಧಾನಿ ಹಾದಿಯಲ್ಲಿ ಅವರ ಪ್ರಯಾಣವನ್ನು ಸುಲಭವಾಗಿ ಇರಿಸಿದ್ದರು. ಇನ್ನು ಅಕ್ಟೋಬರ್ 28 ರಂದು ರಿಷಿ ಸುನಕ್ ಅವರು ಪ್ರಮಾಣವಚನ ಸ್ವೀಕರಿಸಬಹುದು ಎಂದು ವರದಿಗಳು ಹೇಳಿವೆ.


  45 ದಿನಕ್ಕೆ ರಾಜೀನಾಮೆ ನೀಡಿದ್ದ ಲಿಜ್ ಟ್ರಸ್


  ಈ ಹಿಂದೆ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್,  ಲಿಜ್ ಟ್ರಸ್ ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿದ್ದರು. ಹೀಗಾಗಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ 45 ದಿನಗಳಲ್ಲಿ ರಾಜೀನಾಮೆ ಕೊಟ್ಟಿದ್ದರು.


  ಇದನ್ನೂ ಓದಿ: Rishi Sunak: ಕರ್ನಾಟಕದ ಅಳಿಯ ರಿಷಿ ಸುನಕ್! ಬ್ರಿಟನ್ ನೂತನ ಪ್ರಧಾನಿ ಬಗ್ಗೆ ಆಸಕ್ತಿಕರ ಮಾಹಿತಿ ಇಲ್ಲಿದೆ


  ರಿಷಿ ಮುಂದಿದೆ ದೊಡ್ಡ ಸವಾಲು


  ಬ್ರಿಟನ್‌ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ. ಹೀಗಾಗಿ ನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ. ಇನ್ನು ಆರ್ಥಿಕ ಸುಧಾರಣೆ ಸಾಧ್ಯವಾಗದ ಕಾರಣ ಲಿಜ್ ಟ್ರಸ್ ರಾಜೀನಾಮೆ ನೀಡಬೇಕಾಯಿತು. ಇದೀಗ ಹೊಸದಾಗಿ ಆಯ್ಕೆಯಾಗಿರುವ ರಿಷಿ ಸುನಕ್ ಮುಂದೆ ಕೂಡ ಬಹುದೊಡ್ಡ ಸವಾಲುಗಳು ಇವೆ.

  Published by:ಗುರುಗಣೇಶ ಡಬ್ಗುಳಿ
  First published: