• Home
  • »
  • News
  • »
  • national-international
  • »
  • ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಯಿತು; ಎಸ್​ಪಿಬಿ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ

ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಯಿತು; ಎಸ್​ಪಿಬಿ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ

SP Balasubrahmanyam: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

SP Balasubrahmanyam: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ಇಂದು ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಭಾರತದ ಪ್ರತಿ ಮನೆ, ಮನಗಳಲ್ಲಿ ಹೆಸರಾದವರ ಎಸ್​ಪಿ ಬಾಲಸುಬ್ರಹ್ಮಣ್ಯಂ. ದಶಕಗಳ ಕಾಲ ತಮ್ಮ ಸುಮಧರ ಕಂಠದಿಂದ ರಂಜಿಸಿದವರು. ಅವರ ಈ ವಿದಾಯ ನೋವು ನೀಡಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ-ಮೋದಿ

  • Share this:

    ಗಾನ ಗಂಧರ್ವ ಎಸ್​ಪಿಗೆ ಅಗಲಿಕೆಗೆ ಇಡೀ ದೇಶ ಕಂಬನಿ ಮಿಡಿದಿದೆ. 16 ಭಾಷೆಗಳಲ್ಲಿ 40 ಸಾವಿರ ಹಾಡುಗಳನ್ನು ಹಾಡಿದ ಗಾನ ಕೋಗಿಲೆ ಇಂದು ಅಸ್ತಂಗತವಾಗಿದೆ.  ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳ ಅಭಿಮಾನಿಗಳು, ರಾಜಕೀಯ ನಾಯಕರು  ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಅವರ ಅಗಲಿಕೆಯಿಂದ 'ಸಾಂಸ್ಕೃತಿಕ ಲೋಕ ಬಡವಾಗಿದೆ' ಎಂದು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಭಾರತದ ಪ್ರತಿ ಮನೆ, ಮನಗಳಲ್ಲಿ ಹೆಸರಾದವರ ಎಸ್​ಪಿ ಬಾಲಸುಬ್ರಹ್ಮಣ್ಯಂ. ದಶಕಗಳ ಕಾಲ ತಮ್ಮ ಸುಮಧರ ಕಂಠದಿಂದ ರಂಜಿಸಿದವರು. ಅವರ ಈ ವಿದಾಯ ನೋವು ನೀಡಿದೆ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ' ಎಂದಿದ್ದಾರೆ.



    ಅನಾರೋಗ್ಯಕ್ಕೆ ತುತ್ತಾಗಿದ್ದ ಎಸ್​ಪಿ ಬಾಲಸುಬ್ರಹ್ಮಣ್ಯಂ ಕಳೆದ ಒಂದೂವರೆ ತಿಂಗಳಿನಿಂದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಅವರ ದೇಹ ಸ್ಥಿತಿ ಅತಿ ಗಂಭೀರಗೊಂಡಿದ್ದರು.  ಇಂದು ಮಧ್ಯಾಹ್ನ 1 ಗಂಟೆಗೆ ಅವರು ಇಹಲೋಹ ತ್ಯಜಿಸಿದ್ದಾರೆ.



    ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೂಡ ಎಸ್​ಪಿ ಅವರಿಗೆ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ತಮ್ಮ ಗಾಯನದ ಮೂಲಕ ಲಕ್ಷಾಂತರ ಜನರನ್ನು ತಲುಪಿದ್ದ ಎಸ್​ಪಿಬಿ ಅವರ ಧ್ವನಿ ಅಮರವಾಗಲಿದೆ ಎಂದಿದ್ದಾರೆ.



    ವೆಂಕಯ್ಯ ನಾಯ್ಡು, ಹರ್ದೀಪ್​ ಸಿಂಗ್​ ಪುರಿ, ಕಿರಣ್​ ರಿಜ್ಜು ಕೂಡ ಎಸ್​ಪಿಯವರ ಕೊಡಗೆಯನ್ನು ಸ್ಮರಿಸಿದ್ದಾರೆ.



    ಚೆಸ್​ ಮಾಂತ್ರಿಕ ವಿಶ್ವನಾಥನ್​ ಆನಂದ್​ ಕೂಡ ಎಸ್​ಪಿಬಿ ಅವರೊಂದಿಗಿನ ಭೇಟಿ ಮೆಲುಕು ಹಾಕಿದ್ದಾರೆ. 'ನಾನು ಭೇಟಿ ಮಾಡಿದ ಉತ್ತಮ ವ್ಯಕ್ತಿಗಳಲ್ಲಿ ಅವರು ಒಬ್ಬರು' ಎಂದಿದ್ದಾರೆ.

    Published by:Seema R
    First published: