PM Narendra Modi: ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ ಪಿಎಂ ಮೋದಿ; ಇದರ ಹಿಂದಿದೆ ವಿಶೇಷ ಕಾರಣ

ಸಾಮಾಜಿಕ ಮಾಧ್ಯಮಗಳಲ್ಲಿ ಡಿಪಿಯನ್ನಾಗಿ ಬಳಸುವಂತೆ ಕರೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಸ್ವತಃ ತಾವೇ ಈ ಆಂದೋಲನಕ್ಕೆ ಬುನಾದಿಯಾಗಿ ಪ್ರೊಫೈಲ್ ಫೋಟೊ ಬದಲಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಖಾತೆಗಳ ಪ್ರೊಫೈಲ್ ಫೋಟೋವನ್ನು ಬದಲಾಯಿಸಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು (Indian Flag)  ಸಾಮಾಜಿಕ ಮಾಧ್ಯಮಗಳಲ್ಲಿ ಡಿಪಿಯನ್ನಾಗಿ ಬಳಸುವಂತೆ ಕರೆ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi)  ಸ್ವತಃ ತಾವೇ ಈ ಆಂದೋಲನಕ್ಕೆ ಬುನಾದಿಯಾಗಿ ಪ್ರೊಫೈಲ್ ಫೋಟೊ ಬದಲಾಯಿಸಿದ್ದಾರೆ. ತಮ್ಮ ಫೇಸ್​ಬುಕ್ ಮತ್ತು ಟ್ವಿಟರ್ ಅಕೌಂಟ್​ಗಳಲ್ಲಿ ಭಾರತದ ಧ್ವಜವನ್ನು ಪ್ರೊಫೈಲ್ ಫೋಟೊವನ್ನಾಗಿ ಬದಲಾಯಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಅವರು ಕರೆ ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಇಮೇಜ್​ನ್ನು ಭಾರತದ ಧ್ವಜದ ಚಿತ್ರವನ್ನು ಬಳಸುವಂತೆಯೂ ಅವರು ಕರೆ ನೀಡಿದ್ದರು.  ಪಿಂಗಳಿ ವೆಂಕಯ್ಯ ಅವರನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ
  ಅಲ್ಲದೇ ಭಾರತ ತ್ರಿವರ್ಣ ಧ್ವಜ ವಿನ್ಯಾಸ ಮಾಡಿದ ಪಿಂಗಳಿ ವೆಂಕಯ್ಯ ಅವರ ಜನ್ಮದಿನದಂದು ಮೋದಿ ಅವರಿಗೆ ನಮನ ಸಲ್ಲಿಸಿದರು. "ನಮಗೆ ತ್ರಿವರ್ಣ ಧ್ವಜವನ್ನು ನೀಡುವ ಅವರ ಪ್ರಯತ್ನಗಳಿಗಾಗಿ ನಮ್ಮ ರಾಷ್ಟ್ರವು ಅವರ ಕುರಿತು ಎಂದೆಂದಿಗೂ ಋಣಿಯಾಗಿದೆ. ಭಾರತೀಯರಾದ ನಾವು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ತ್ರಿವರ್ಣ ಧ್ವಜದಿಂದ ಶಕ್ತಿ ಮತ್ತು ಸ್ಫೂರ್ತಿಯನ್ನು ಪಡೆದುಕೊಂಡು ನಾವು ರಾಷ್ಟ್ರದ ಪ್ರಗತಿಗಾಗಿ ಶ್ರಮಿಸೋಣ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

  ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಫೋಟೋ ಬದಲಿಸಲು ಕರೆ
  ಕಳೆದ ಭಾನುವಾರ ತಮ್ಮ ಮನ್ ಕಿ ಬಾತ್ ರೇಡಿಯೋ ಪ್ರಸಾರದಲ್ಲಿ, ಪ್ರಧಾನಿ ಮೋದಿ ಅವರು 'ಆಜಾದಿ ಕಾ ಅಮೃತ್ ಮಹೋತ್ಸವ' ಸಾಮೂಹಿಕ ಆಂದೋಲನವಾಗಿ ಬದಲಾಗುತ್ತಿದೆ. ಆಗಸ್ಟ್ 15 ರವರೆಗೆತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರೊಫೈಲ್ ಚಿತ್ರವಾಗಿ 'ತಿರಂಗ' ಎಂದು ಹಾಕುವಂತೆ ಜನರಿಗೆ ಕರೆ ಕೊಟ್ಟಿದ್ದರು.

  ಮತ್ತೆ ಮನವಿ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ
  ಇಂದು ವಿಶೇಷವಾದ 2ನೇ ಆಗಸ್ಟ್! ನಾವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ನಮ್ಮ ರಾಷ್ಟ್ರವು ನಮ್ಮ ತ್ರಿವರ್ಣ ಧ್ವಜದ ಕುರಿತಾದ ಸಾಮೂಹಿಕ ಆಂದೋಲನವಾದ ಹರ್ ಘರ್ ತಿರಂಗಕ್ಕೆ ಸಿದ್ಧವಾಗಿದೆ. ನಾನು ನನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ DP ಅನ್ನು ಬದಲಾಯಿಸಿದ್ದೇನೆ.  ನೀವೆಲ್ಲರೂ ಅದೇ ರೀತಿ ತ್ರಿವರ್ಣ ಧ್ವಜವನ್ನು ಸಾಮಾಜಿಕ ಜಾಲತಾಣಗಳಲ್ಲಿ ಡಿಪಿಯನ್ನಾಗಿ ಬದಲಾಯಿಸಿ ಎಂದು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

  ಇದನ್ನೂ ಓದಿ: Modi Books: ಕವಿಯಾದ ನರೇಂದ್ರ ಮೋದಿ! ಶೀಘ್ರವೇ ಗುಜರಾತಿ ಕವನಗಳ ಇಂಗ್ಲಿಷ್ ಅನುವಾದ ಬಿಡುಗಡೆ

  ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕರ ನೆನಪು
  ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶದ 75 ರೈಲ್ವೇ ನಿಲ್ದಾಣಗಳಿಗೆ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಹೆಸರನ್ನು ಇಡಲಾಗಿದೆ. ಅಂತಹ ನಿಲ್ದಾಣಗಳಿಗೆ ಕುಟುಂಬ ಸಮೇತ ಭೇಟಿ ನೀಡಿ. ಮಹಾನ್​ ನಾಯಕರ ಬಗ್ಗೆ ಯುವಪೀಳಿಗೆಗೆ ಮಾಹಿತಿ ನೀಡಿ ಎಂದು ಅವರು ಮನ್ ಕಿ ಬಾತ್​ನಲ್ಲಿ ಕರೆ ನೀಡಿದ್ದರು.

  ಇದನ್ನೂ ಓದಿ: PM Narendra Modi: ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಫೋಟೋ ಬದಲಾಯಿಸಿದ ಪಿಎಂ ಮೋದಿ; ಇದರ ಹಿಂದಿದೆ ವಿಶೇಷ ಕಾರಣ

  ಗ್ಲೋಬಲ್ ಆಯುಷ್ ಇನ್ವೆಷ್ಟ್ಮೆಂಟ್ ಬಗ್ಗೆ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತೀಯ ಆರ್ಯುವೇದಿಕ್ ಸಂಪನ್ಮೂಲಗಳ ಬಗೆಗಿನ ವಿಚಾರವನ್ನು ಮತ್ತು ಜೇನು ಕೃಷಿಯ ಕುರಿತಾದ ಮಾಹಿತಿಗಳನ್ನು ಹಂಚಿಕೊಂಡರು. ದೇಶದ ಕ್ರೀಡಾ ಪಟುಗಳ ಸಾಧನೆ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
  Published by:guruganesh bhat
  First published: