ಆತ್ಮ ನಿರ್ಭರ ಭಾರತ​ ಎಂಬುದು ಕೇವಲ ದೃಷ್ಟಿಕೋನವಲ್ಲ ಅದು ದೇಶದ ಯೋಜಿತ ಆರ್ಥಿಕ ತಂತ್ರ; ಪ್ರಧಾನಿ ಮೋದಿ

ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆಯೂ ಭಾರತ ಗಮನಾರ್ಹ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸಿದೆ. ಈ ಸ್ಥಿತಿಸ್ಥಾಪಕತೆಗೆ ನಮ್ಮ ವ್ಯವಸ್ಥೆಯ ಶಕ್ತಿ, ಜನರ ಬೆಂಬಲ ಮತ್ತು ನಮ್ಮ ನೀತಿಗಳ ಬಲವೇ ಕಾರಣ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ನವ ದೆಹಲಿ (ನವೆಂಬರ್​ 11); ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಭಾರತ ತುತ್ತಾಗಿ ಆರ್ಥಿಕವಾಗಿಯೂ ದೇಶ ನಲುಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ 'ಆತ್ಮ ನಿರ್ಭರ ಭಾರತ' ಹೆಸರಿನಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ, ಇವು ಕೇವಲ ದೃಷ್ಟಿಕೋನ ಮಾತ್ರವಲ್ಲ ಬದಲಾಗಿ ಇಡೀ ದೇಶದ ಆರ್ಥಿಕ ಬೆಳವಣಿಗೆಯ ದೂರದೃಷ್ಟಿ ಅಥವಾ ಯೋಜಿತ ಆರ್ಥಿಕ ತಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ವರ್ಚುವಲ್​ ಸಮಾವೇಶದಲ್ಲಿ ಇಂದು ಮಾತನಾಡುವ ಮೂಲಕ ವಿದೇಶಿ ಬಂಡವಾಳದಾರರಿಗೆ ಮುಕ್ತ ಆಹ್ವಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, "ಭಾರತ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ರಾಷ್ಟ್ರ. ಕೊರೋನಾ ಸಂದರ್ಭದಲ್ಲಿ ದೇಶದ ಆರ್ಥಿಕತೆ ಹಿನ್ನಡೆ ಅನುಭವಿಸಿತ್ತು. ಆದರೆ, ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆಯೂ ಭಾರತ ಗಮನಾರ್ಹ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆ. ಆರ್ಥಿಕ ಸ್ಥಿರತೆಯನ್ನು ಖಾತರಿಪಡಿಸಿದೆ.

  ಈ ಸ್ಥಿತಿಸ್ಥಾಪಕತೆಗೆ ನಮ್ಮ ವ್ಯವಸ್ಥೆಯ ಶಕ್ತಿ, ಜನರ ಬೆಂಬಲ ಮತ್ತು ನಮ್ಮ ನೀತಿಗಳ ಬಲವೇ ಕಾರಣ ಇದಲ್ಲದೆ, ಕೊರೋನಾ ಬಿಕ್ಕಟ್ಟು ಭಾರತೀಯರಲ್ಲಿ ಜವಾಬ್ದಾರಿಯ ಪ್ರಜ್ಞೆ, ಸಹಾನುಭೂತಿಯ ಮನೋಭಾವ, ರಾಷ್ಟ್ರೀಯ ಏಕತೆ ಮತ್ತು ನಾವೀನ್ಯತೆಯ ಕಿಡಿ ಎಂಬ ನಾಲ್ಕು ಗುಣಲಕ್ಷಣಗಳನ್ನು ಇಡೀ ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟಿದೆ" ಎಂದು ಅವರು ತಿಳಿಸಿದ್ದಾರೆ.

  ಇದೇ ಸಂದರ್ಭದಲ್ಲಿ ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಸಿಗುವ ಅನುಕೂಲಗಳ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿರುವ ಪ್ರಧಾನಿ ಮೋದಿ, "ಕೃಷಿ ಕ್ಷೇತ್ರದಲ್ಲಿನ ನಮ್ಮ ಇತ್ತೀಚಿನ ಸುಧಾರಣೆಗಳು ಭಾರತದ ರೈತರೊಂದಿಗೆ ಪಾಲುದಾರರಾಗಲು ಹೊಸ ಉತ್ತೇಜಕ ಸಾಧ್ಯತೆಗಳನ್ನು ತೆರೆಯುತ್ತಿವೆ. ತಂತ್ರಜ್ಞಾನ ಮತ್ತು ಆಧುನಿಕ ಸಂಸ್ಕರಣಾ ಪರಿಹಾರಗಳ ಸಹಾಯದಿಂದ ಭಾರತ ಶೀಘ್ರದಲ್ಲೇ ಕೃಷಿ ರಫ್ತು ಕೇಂದ್ರವಾಗಿ ಹೊರಹೊಮ್ಮಲಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

  ಇದನ್ನೂ ಓದಿ : ರಿಲಯನ್ಸ್ ರೀಟೇಲ್​ ಮೇಲೆ 9,555 ಕೋಟಿ ರೂಪಾಯಿ ಹೂಡಿಕೆ ಮಾಡಿದ ಸೌದಿ ಅರೇಬಿಯಾದ ಪಿಐಎಫ್

  "ವಿಶ್ವ ಆರ್ಥಿಕ ಕ್ರಮವನ್ನು ಸ್ಥಿರಗೊಳಿಸಲು ಭಾರತ ಬಲವಾದ ಮತ್ತು ಅಗತ್ಯ ಕೊಡುಗೆ ನೀಡಬಹುದು. ಭಾರತವನ್ನು ಜಾಗತಿಕ ಬೆಳವಣಿಗೆಯ ಪುನರುತ್ಥಾನದ ಎಂಜಿನ್ ಮಾಡಲು ನಾವು ಏನು ಬೇಕಾದರೂ ಮಾಡಲು ಸಿದ್ದರಿದ್ದೇವೆ.  ನೀವು ವಿಶ್ವಾಸಾರ್ಹತೆಯೊಂದಿಗೆ ಆದಾಯವನ್ನು ಬಯಸಿದರೆ, ಭಾರತ ಅದಕ್ಕೆ ಸೂಕ್ತ ಸ್ಥಳವಾಗಿದೆ. ನೀವು ಪ್ರಜಾಪ್ರಭುತ್ವದೊಂದಿಗೆ ಬೇಡಿಕೆ, ಸುಸ್ಥಿರತೆಯೊಂದಿಗೆ ಸ್ಥಿರತೆಯನ್ನು ನಿರೀಕ್ಷಿಸುತ್ತೀರಿ ಎಂದರೆ ಅದಕ್ಕೆ ಭಾರತಕ್ಕಿಂತ ಉತ್ತಮ ದೇಶ ಮತ್ತೊಂದಿಲ್ಲ.

  ತಂತ್ರಜ್ಞಾನದಲ್ಲಿ ನಮ್ಮ ಶಕ್ತಿಯನ್ನು ನಾವೀನ್ಯತೆಗಳ ಜಾಗತಿಕ ಕೇಂದ್ರವಾಗಿಸಲು ಮತ್ತು ನಮ್ಮ ಅಪಾರ ಮಾನವ ಸಂಪನ್ಮೂಲಗಳನ್ನು ಹಾಗೂ ಅವರ ಪ್ರತಿಭೆಯನ್ನು ಬಳಸಿಕೊಂಡು ಜಾಗತಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿರುವ ತಂತ್ರವನ್ನು ಭಾರತ ನಂಬುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
  Published by:MAshok Kumar
  First published: