Muharram 2022: ಮೊಹರಂ ಮಹತ್ವ ಸಾರಿದ ಪ್ರಧಾನಿ ಮೋದಿ; ಸಹೋದರತ್ವದ ಹಬ್ಬ ಎಂದು ಬಣ್ಣನೆ

PM Narendra Modi: ಸಹೋದರತ್ವ ಮತ್ತು ಸಮಾನತೆಯನ್ನು ಪ್ರತಿಪಾದಿಸಿದ ಹಜರತ್ ಇಮಾಮ್ ಹುಸೇನ್ ಅವರು ಪ್ರತಿಪಾದಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ದೆಹಲಿ: ಪ್ರಪಂಚದಾದ್ಯಂತದ ಮುಸ್ಲಿಂ ಸಮುದಾಯ ಇಂದು ಆಚರಿಸುತ್ತಿರುವ ಮೊಹರಂ ಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶುಭ ಕೋರಿದ್ದಾರೆ.  ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಜರತ್ ಇಮಾಮ್ ಹುಸೇನ್ ಅವರು (Hazrat Imam Hussain ) ಸಮಾನತೆ ಮತ್ತು ಸಹೋದರತ್ವಕ್ಕೆ (Brotherhood) ನೀಡಿದ ಮಹಾನ್ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. 7 ನೇ ಶತಮಾನದ ಕ್ರಾಂತಿಕಾರಿ ನಾಯಕ ಮತ್ತು ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಸತ್ಯಕ್ಕಾಗಿ ಅವರ ಅಚಲ ಬದ್ಧತೆ ಮತ್ತು ಅನ್ಯಾಯದ ವಿರುದ್ಧದ ಹೋರಾಟವನ್ನು ನೆನಪಿಸಿಕೊಳ್ಳುವ ದಿನ ಮೊಹರಂ (Muharram) ಎಂದು ಟ್ವೀಟ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

  ಹಜರತ್ ಇಮಾಮ್ ಹುಸೇನ್ ಅವರ ತ್ಯಾಗ ಮತ್ತು ಬಲಿದಾನವನ್ನು ನೆನೆಸಿಕೊಳ್ಳುವ ದಿನವಿಂದು. ಅನ್ಯಾಯದ ವಿರುದ್ಧ ಹೋರಾಟ ಮತ್ತು ಸತ್ಯದ ಕುರಿತು ಅವರಿಗಿದ್ದ ಬದ್ಧತೆಯಿಂದಲೇ ಹಜರತ್ ಇಮಾಮ್ ಹುಸೇನ್ ಎಂದಿಗೂ ಸ್ಮರಣೀಯರಾಗಿದ್ದಾರೆ. ಸಹೋದರತ್ವ ಮತ್ತು ಸಮಾನತೆಯನ್ನು ಪ್ರತಿಪಾದಿಸಿದ ಹಜರತ್ ಇಮಾಮ್ ಹುಸೇನ್ ಅವರು ಪ್ರತಿಪಾದಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

  ಬಿಹಾರ ಸಿಎಂ ನಿತೀಶ್ ಕುಮಾರ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ರಿಂದಲೂ ಸ್ಮರಣೆ
  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ರಾಜಕೀಯ ನಾಯಕರು ಸತ್ಯ ಮತ್ತು ನ್ಯಾಯಕ್ಕಾಗಿ ಇಮ್ರಾನ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಿಕೊಂಡಿದ್ದಾರೆ.

  ತ್ಯಾಗ, ಆದರ್ಶ ನೆನೆಸಿಕೊಳ್ಳಲು ಸೂಕ್ತ ದಿನ
  ಮೊಹರಂ ಸಂದರ್ಭದಲ್ಲಿ ನಾನು ಹುತಾತ್ಮರಿಗೆ ಮತ್ತು ಹಜರತ್ ಇಮಾಮ್ ಹುಸೇನ್ ಅವರ ತ್ಯಾಗಕ್ಕೆ ನಮಸ್ಕರಿಸುತ್ತೇನೆ. ಹಜರತ್ ಇಮಾಮ್ ಹುಸೇನ್ ಅವರ ತ್ಯಾಗವನ್ನು ಸ್ಮರಿಸಲು ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಲು ರಾಜ್ಯದ ಜನತೆಗೆ ಇದು ಮನವಿಯಾಗಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಿಂದಿಯಲ್ಲಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

  ಇದನ್ನೂ ಓದಿ: Bihar Politics: ಎನ್​ಡಿಎ ಮೈತ್ರಿಕೂಟಕ್ಕೆ ಟಾಟಾ, ಆರ್​ಜೆಡಿ ಜೊತೆ ದೋಸ್ತಿ? ಬಿಹಾರ ಸಿಎಂ ನಿತೀಶ್ ಕುಮಾರ್ ನಡೆಯೇನು?  ಇದನ್ನೂ ಓದಿ: Hubballi To Varanasi Trains: ಉತ್ತರ ಕರ್ನಾಟಕ ಮಂದಿಗೆ ಶುಭಸುದ್ದಿ! ಹುಬ್ಭಳ್ಳಿಯಿಂದ ವಾರಣಾಸಿಗೆ ವಿಶೇಷ ರೈಲು ಶುರು

  ಇಮಾಮ್ ಹುಸೇನ್ ಅವರು ಯಾಜಿದ್ ವಿರುದ್ಧ ಸಾಮಾಜಿಕ ನ್ಯಾಯಕ್ಕಾಗಿ ತ್ಯಾಗಕ್ಕೆ ಹೆಸರುವಾಸಿಯಾಗಿದ್ದಾರೆ. ಈ ದಿನದಂದು ಮುಸ್ಲಿಮರು ಯುದ್ಧದಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ಮೊಹರಂ ಅವಧಿಯಲ್ಲಿ ವಿಶೇಷ ಪ್ರಾರ್ಥನೆಗಳನ್ನು  ಸಲ್ಲಿಸುತ್ತಾರೆ.
  Published by:guruganesh bhat
  First published: