• Home
  • »
  • News
  • »
  • national-international
  • »
  • PM Modi Mother Funeral: ತಾಯಿಯ ಅಂತಿಮಯಾತ್ರೆಗೆ ಹೆಗಲುಕೊಟ್ಟ ಪ್ರಧಾನಿ, ಹೀರಾಬೆನ್ ಪಂಚಭೂತಗಳಲ್ಲಿ ಲೀನ

PM Modi Mother Funeral: ತಾಯಿಯ ಅಂತಿಮಯಾತ್ರೆಗೆ ಹೆಗಲುಕೊಟ್ಟ ಪ್ರಧಾನಿ, ಹೀರಾಬೆನ್ ಪಂಚಭೂತಗಳಲ್ಲಿ ಲೀನ

ಅಂತಿಮಯಾತ್ರೆಯ ದೃಶ್ಯ

ಅಂತಿಮಯಾತ್ರೆಯ ದೃಶ್ಯ

ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರವನ್ನು ಹೊತ್ತೊಯ್ದ ಪ್ರಧಾನಿ ಮೋದಿ ಪುಷ್ಪ ನಮನ ಸಲ್ಲಿಸಿದ್ದಾರೆ.

  • News18 Kannada
  • Last Updated :
  • Gujarat, India
  • Share this:

ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿ ಹೀರಾಬೆನ್ ಮೋದಿಯವರ ಅಂತ್ಯಕ್ರಿಯೆಯಲ್ಲಿ (Heeraben Modi Funeral) ಭಾಗಿಯಾಗಿದ್ದಾರೆ. ಗುಜರಾತ್ ರಾಜಧಾನಿ ಗಾಂಧಿನಗರದ ಸೆಕ್ಟರ್ 30 ನಲ್ಲಿರುವ ಮುಕ್ತಿಧಾಮ್ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳು ನಡೆಯುತ್ತಿವೆ. ತಾಯಿ ಹೀರಾಬೆನ್ ಅವರ ಪಾರ್ಥಿವ ಶರೀರವನ್ನು ಹೊತ್ತೊಯ್ದ ಪ್ರಧಾನಿ ಮೋದಿ (PM Narendra Modi) ಪುಷ್ಪ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು (PM Modi Mother) ಇಹಲೋಕ ತ್ಯಜಿಸಿದ್ದಾರೆ. ಶತಾಯುಶಿಯಾಗಿದ್ದ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ (Ahmedabad Hospital) ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದ್ದಾರೆ.


ಇತ್ತೀಚಿಗಷ್ಟೇ ತಾಯಿಯ ಆರೋಗ್ಯ ವಿಚಾರಿಸಿದ್ದ ಪ್ರಧಾನಿ
ಇತ್ತೀಚಿಗಷ್ಟೇ ಮುಕ್ತಾಯವಾಗಿದ್ದ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ತಾಯಿ ಹೀರಾಬೆನ್ ಮೋದಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೇ ಹೀರಾಬೆನ್ ಮೋದಿ ಅವರ ಪಾದಸ್ಪರ್ಶಿಸಿ ಆಶೀರ್ವಾದವನ್ನೂ ಪಡೆದುಕೊಂಡಿದ್ದರು.


ಇದನ್ನೂ ಓದಿ: Heeraben Modi: 100 ವರ್ಷಗಳ ಜೀವನ, 6 ಮಕ್ಕಳ ಕುಟುಂಬ, ಹೀಗಿತ್ತು ಹೀರಾಬೆನ್ ಸಂಘರ್ಷ!


ಹೀರಾಬೆನ್ ಮೋದಿ ಅವರ ನಿಧನಕ್ಕೆ ದೇಶಾದ್ಯಂತ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.


ಇತ್ತ ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ್​ ಮೋದಿಯವರ ಕಾರು ಮೈಸೂರು ಬಳಿ ಅಪಘಾತವಾಗಿದೆ. ಈ ಅವಘಡದಲ್ಲಿ ಪ್ರಹ್ಲಾದ್ ಮೋದಿ ಅವರ ಮಗ ಮತ್ತು ಸೊಸೆಗೆ ಗಾಯಗಳಾಗಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಇವರೆಲ್ಲರೂ ಚಿಕಿತ್ಸೆ ಪಡೆದು ಡಿಸ್​ಚಾರ್ಚ್ ಆಗಿದ್ದರು.


ಶತಾಯುಶಿಯಾಗಿದ್ದ ಹೀರಾಬೆನ್
ಭಾರತದ ಕಂಡ ಅಗ್ರಸಾಲಿನ ಪ್ರಧಾನಿಗೆ ಜನ್ಮ ನೀಡಿ ಬೆಳೆಸಿದ ಹಿರಿಮೆ ಹೀರಾಬೆನ್ ಎಂಬ ಅಮ್ಮನದಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಶತಾಯುಶಿಯಾಗಿದ್ದರು. ಜೂನ್ 18, 1923 ರಂದು ಅವರು ಜನಿಸಿದ್ದರು.


ಹೀರಾಬೆನ್ ಪ್ರಧಾನಿ ಅವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರಧಾನಿಯಾದ ನಂತರ ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮೋದಿ, ಯಾವುದೇ ಭದ್ರತೆಯಿಲ್ಲದೆ 17 ಸೆಪ್ಟೆಂಬರ್ 17, 2014 ರಂದು ತಮ್ಮ ತಾಯಿಯನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಭೇಟಿ ನೀಡಿದ್ದರು.


ಇದನ್ನೂ ಓದಿ: Heeraben Modi Life: ಮಗ ಪ್ರಧಾನಿಯಾದ್ರೂ ಅಮ್ಮ ಹೀರಾಬೆನ್ ಇಷ್ಟು ಸಿಂಪಲ್ಲಾಗಿದ್ರು!


ಹೀರಾಬೆನ್ ಮೋದಿ ಅತ್ಯಂತ ಸರಳ ಜೀವನಕ್ಕೆ ಹೆಸರುವಾಸಿಯಾಗಿದ್ದರು. ಪ್ರಧಾನಿಯವರ ತಾಯಿಯಾಗಿದ್ದರೂ ಹೀರಾಬೆನ್ ಅವರು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುತ್ತಿದ್ದರು. ಇವರು ಪ್ರಧಾನಿಯವರ ತಾಯಿಯೇ ಎಂದು ಎಲ್ಲರೂ ಹುಬ್ಬೇರಿಸುವಂತೆ ಅವರು ಬದುಕಿದ್ದರು.

Published by:ಗುರುಗಣೇಶ ಡಬ್ಗುಳಿ
First published: