India Ideas Summit: ‘ಕೊರೋನಾದಿಂದ ತತ್ತರಿಸಿದ ಜಗತ್ತಿನ ಆರ್ಥಿಕ ಪುನಶ್ಚೇತನಕ್ಕೆ ಭಾರತ ಶ್ರಮಿಸಲಿದೆ‘ - ಪ್ರಧಾನಿ ನರೇಂದ್ರ ಮೋದಿ

2019-20ನೇ ವರ್ಷದಲ್ಲಿ ಭಾರತದ ಎಫ್​ಡಿಐ ಒಳಹರಿವು 74 ಬಿಲಿಯನ್ ಡಾಲರ್ ಇತ್ತು. ಆದರೀಗ, ಇದು ಶೇ.20ರಷ್ಟು ಏರಿಕೆಯಾಗಿದೆ. ಕೇವಲ ಏಪ್ರಿಲ್​​ ಮತ್ತು ಜುಲೈನಲ್ಲೇ 20 ಬಿಲಿಯನ್​​ ಡಾಲರ್​​ ವಿದೇಶಿ ಹೂಡಿಕೆ ಭಾರತ ಆಕರ್ಷಿಸಿದೆ ಎಂದು ಅಭಿಪ್ರಾಯಪಟ್ಟರು.

news18-kannada
Updated:July 22, 2020, 10:20 PM IST
India Ideas Summit: ‘ಕೊರೋನಾದಿಂದ ತತ್ತರಿಸಿದ ಜಗತ್ತಿನ ಆರ್ಥಿಕ ಪುನಶ್ಚೇತನಕ್ಕೆ ಭಾರತ ಶ್ರಮಿಸಲಿದೆ‘ - ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ(ಜು.22): ಮಾರಕ ಕೊರೋನಾ ವೈರಸ್​ನಿಂದ ತತ್ತರಿಸಿದ ವಿಶ್ವದ ಆರ್ಥಿಕತೆ ಪುನಶ್ಚೇತನಕ್ಕೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು. ಇಂದು ಅಮೆರಿಕಾ-ಭಾರತ ವ್ಯವಹಾರ ಸಮಿತಿ ಆಯೋಜಿಸಿರುವ ಇಂಡಿಯಾ ಐಡಿಯಾಸ್​​​ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್​ ಮಾತಾಡುವ ಪ್ರಧಾನಿ ನರೇಂದ್ರ ವೇಳೆ ಹೀಗೆಂದರು.


ಕೋವಿಡ್​​-19 ಸೋಂಕಿನಿಂದ ಜಗತ್ತು ತತ್ತರಿಸಿದೆ. ನಾವು ದೇಶೀಯ ಆರ್ಥಿಕ ಸಾಮರ್ಥ್ಯದ ಮೂಲಕವೇ ಜಾಗತಿಕ ಆರ್ಥಿಕ ಪುನಶ್ಚೇತನಗೊಳಿಸಬೇಕು. ಇದಕ್ಕಾಗಿ ದೇಶಿಯ ಉತ್ಪಾದನೆ ಹೆಚ್ಚಿಸಬೇಕು. ಈ ಮೂಲಕ ಜಾಗತಿಕ ಆರ್ಥಿಕ ವ್ಯವಸ್ಥೆಗೆ ವ್ಯಾಪಾರದ ವೈವಿಧ್ಯೀಕರಣ ಪುನರ್​ ಸ್ಥಾಪಿಸಬೇಕು ಎಂದರು.

ಆತ್ಮ ನಿರ್ಭರ ಭಾರತದ ಮೂಲಕ ಭಾರತವೂ ಜಗತ್ತಿನ ಏಳಿಗೆಗಾಗಿ ಶ್ರಮಿಸಲಿದೆ. ಇದಕ್ಕೆ ಅಮೆರಿಕಾದ ಸಹಭಾಗಿತ್ವ ಬೇಕಿದೆ. ಎರಡು ದೇಶಗಳ ಜಗತ್ತಿನ ಆರ್ಥಿಕ ವ್ಯವಸ್ಥೆ ಸುಧಾರಿಸಲು ಕೆಲಸ ಮಾಡಬೇಕಿ ಎಂದು ಹೇಳಿದರು ಮೋದಿ.

ಭಾರತದಲ್ಲಿ ನಗರಗಳಿಗಿಂತಲೂ ಗ್ರಾಮೀಣ ಭಾಗದಲ್ಲೇ ಅತೀ ಹೆಚ್ಚು ಇಂಟರ್​ನೆಟ್​ ಬಳಕೆಯಾಗುತ್ತಿದೆ. ಹೀಗಾಗಿ ಭಾರತವೂ ಜನರಿಗೆ ಉದ್ಯೋಗ ನೀಡುವ ಅವಕಾಶಗಳ ತಾಣವಾಗಿ ಬೆಳೆಯುತ್ತಿದೆ ಎಂದು ತಿಳಿಸಿದರು.

2019-20ನೇ ವರ್ಷದಲ್ಲಿ ಭಾರತದ ಎಫ್​ಡಿಐ ಒಳಹರಿವು 74 ಬಿಲಿಯನ್ ಡಾಲರ್ ಇತ್ತು. ಆದರೀಗ, ಇದು ಶೇ.20ರಷ್ಟು ಏರಿಕೆಯಾಗಿದೆ. ಕೇವಲ ಏಪ್ರಿಲ್​​ ಮತ್ತು ಜುಲೈನಲ್ಲೇ 20 ಬಿಲಿಯನ್​​ ಡಾಲರ್​​ ವಿದೇಶಿ ಹೂಡಿಕೆ ಭಾರತ ಆಕರ್ಷಿಸಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19 ಆರ್ಭಟ: ಇಂದು 4764 ಕೇಸ್​​ ಪತ್ತೆ, 75 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಭಾರತದ ಕೃಷಿ ಕ್ಷೇತ್ರದಲ್ಲಿ ಅಮೆರಿಕದ ಹೂಡಿಕೆ ಮಾಡಿದೆ. ಇದು ಕ್ರಾಂತಿಕಾರಿ ಬದಲಾವಣೆ ತರಲಿದೆ. ಭಾರತದ ಇಂಧನ ಕ್ಷೇತ್ರದಲ್ಲೂ ಅಮೆರಿಕ ಕಂಪನಿಗಳಿಗೆ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ರಕ್ಷಣೆ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲೂ ಅಮೆರಿಕ ಹೂಡಿಕೆ ಮಾಡಲು ಭಾರತ ಸ್ವಾಗತಿಸುತ್ತದೆ. ಈ ಸದೃಢ ಜಗತ್ತನ್ನು ನಿರ್ಮಿಸಲಿದೆ ಎಂದು ಭರವಸೆ ನೀಡಿದರು.
Published by: Ganesh Nachikethu
First published: July 22, 2020, 10:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading