Mann Ki Baat: ಮನ್ ಕೀ ಬಾತ್‍ನಲ್ಲಿ ಕರ್ನಾಟಕವನ್ನು ಹೊಗಳಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮನ್ ಕೀಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಬಾರಿ ಕರ್ನಾಟಕದ 'ಅಮೃತ ಭಾರತಿಗೆ ಕನ್ನಡಾರತಿ' ಅಭಿಯಾನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರೈತ ಮಧುಕೇಶ್ವರ ಹೆಗಡೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಪ್ರಧಾನಿ ಮೋದಿ 91ನೇ ಮನ್ ಕಿ ಬಾತ್ (ಸಾಂದರ್ಭಿಕ ಚಿತ್ರ)

ಪ್ರಧಾನಿ ಮೋದಿ 91ನೇ ಮನ್ ಕಿ ಬಾತ್ (ಸಾಂದರ್ಭಿಕ ಚಿತ್ರ)

  • Share this:
    ಪ್ರಧಾನಿ (PM) ನರೇಂದ್ರ ಮೋದಿ (Narendra Modi) ಅವರ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮನ್ ಕೀ ಬಾತ್ (Mann Ki Baat) ಕಾರ್ಯಕ್ರಮ ಸಹ ಒಂದು. ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ ಈ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಈಗಾಗಲೇ 90 ಆವೃತ್ತಿಗಳನ್ನು ಯಶ್ವಸಿಯಾಗಿ ಪೂರೈಸಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. 91 ನೇ ಮನ್ ಕೀ ಬಾತ್ ಕಾರ್ಯಕ್ರಮ ಇಂದು ನಡೆದಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಬಾರಿ ಕರ್ನಾಟಕ (Karnataka)ದ 'ಅಮೃತ ಭಾರತಿಗೆ ಕನ್ನಡಾರತಿ' ಅಭಿಯಾನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕರ್ನಾಟಕದ ಉತ್ತರ ಕನ್ನಡ (Utter Kannada) ಜಿಲ್ಲೆಯ ಶಿರಸಿ ತಾಲ್ಲೂಕಿನ ರೈತ ಮಧುಕೇಶ್ವರ ಹೆಗಡೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

    ಅಮೃತ ಭಾರತಿಗೆ ಕನ್ನಡಾರತಿ
    ಪ್ರಧಾನಿಯವರು ಮನ್ ಕೀ ಬಾತ್ ನಲ್ಲಿ ಈ ಬಾರಿಯ ಸ್ವಾತಂತ್ರ್ಯ ಮಹೋತ್ಸವದ ಕುರಿತಾದ ಕರ್ನಾಟಕದ "ಅಮೃತ ಭಾರತಿಗೆ ಕನ್ನಡಾರತಿ" ಅಭಿಯಾನದ ಬಗ್ಗೆ ಮತ್ತು ಯಾವ ರೀತಿ ಕರ್ನಾಟಕದಲ್ಲಿ ಈ ಅಭಿಯಾನ ನಡೆಯುತ್ತಿದೆ ಎಂಬುದನ್ನು ಹೇಳಿದರು.ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಅಮೃತ ಭಾರತಿಗೆ ಕನ್ನಡಾರತಿ ಅಭಿಯಾನ ಆಯೋಜಿದೆ.

    ಕಾರ್ಯಕ್ರಮದ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
    ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಹಿನ್ನೆಲೆ, ಕನ್ನಡ ಸಂಸ್ಕ್ರತಿ ಇಲಾಖೆ, ರಾಜ್ಯದ 75 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ರಾಜ್ಯದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಿದೆ. ಅಲ್ಲದೇ ಸ್ಥಳೀಯ ಸಂಸ್ಕøತಿ, ಕಲೆ, ಸಾಹಿತ್ಯಕ್ಕೂ ಒತ್ತು ನೀಡಿರುವುದು ಪ್ರಶಂಸನೀಯ ಎಂದು ಪ್ರಧಾನಿ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ರು.

    ಇದನ್ನೂ ಓದಿ:  Mann Ki Baat: ಭಾರತದ ತ್ರಿವರ್ಣ ಧ್ವಜವನ್ನು ಡಿಪಿಯಾಗಿ ಬಳಸಿ! ದೇಶದ ಜನರ ಮುಂದೆ ಮೋದಿ ಮನದ ಮಾತು

    ಅಮೃತ ಭಾರತಿಗೆ ಕನ್ನಡಾರತಿ ರಥಯಾತ್ರೆ
    ಸಚಿವ ಸುನೀಲ್ ಕುಮಾರ್ ಅವರ ಪರಿಕಲ್ಪನೆ ಅಡಿಯಲ್ಲಿ ಈ ಕಾರ್ಯಕ್ರಮ ಮೂಡಿ ಬರುತ್ತಿದೆ. ರಾಜ್ಯದ ಸಾಂಸ್ಕøತಿಕ ಹಾಗೂ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಜನರಿಗೆ ಮುಟ್ಟಿಸುತ್ತಿದೆ. 31 ಜಿಲ್ಲೆಗಳಲ್ಲಿ ಅಮೃತ ಭಾರತಿಗೆ ಕನ್ನಡಾರತಿ ರಥಯಾತ್ರೆ ಸಂಚರಿಸಲಿದೆ. ಈ ರಥಯಾತ್ರೆ ಪ್ರಮುಖ ಸ್ಥಳಗಳಲ್ಲಿ ನಾಟಕ, ಮೆರವಣಿಗೆ, ಸ್ಥಬ್ಧಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಮೆರವಣಿಗೆ ನಡೆಸಿ ಜನರಿಗೆ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹನೀಯರ ಬಗ್ಗೆ ತಿಳಿಸಿಕೊಡುತ್ತಿದೆ.

    ರೈತ ಮಧುಕೇಶ್ವರ ಹೆಗಡೆ ಬಗ್ಗೆ ಮೆಚ್ಚುಗೆ
    ಯಶಸ್ವಿ ರೈತರ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರೈತ ಮಧುಕೇಶ್ವರ ಹೆಗಡೆ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ರು. ಕೇಂದ್ರ ಸರ್ಕಾರದಿಂದ 50 ಪೆಟ್ಟಿಗೆ ಜೇನುನೊಣಗಳ ಸಾಕಾಣಿಕೆಗೆ ಸಬ್ಸಿಡಿ ಪಡೆದು, ಇಂದು ಅವರು 800ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ಹೊಂದಿದ್ದಾರೆ. ಅವುಗಳಿಂದ ಟನ್‍ಗಳಷ್ಟು ಜೇನುತುಪ್ಪ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ. ಹಲವರು ಬಗೆಯ ಜೇನು ಸಾಕುತ್ತಿದ್ದಾರೆ. ಅವರ ಯಶಸ್ಸು ಹೀಗೆ ಸಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  PM Modi Security Scare: ಪಿಎಂ ಮೋದಿ ಭದ್ರತಾ ಲೋಪ; ಪ್ರಧಾನಿ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನು ಹಾರಾಟ

    ತ್ರಿವರ್ಣ ಧ್ವಜವನ್ನು ಡಿಪಿಯಾಗಿ ಬಳಸಿ
    ಹರ್ ಘರ್ ತಿರಂಗಾ ಅಭಿಯಾನ ಕುರಿತಾದ ಮಾಹಿತಿಯನ್ನು ನೀಡಿದ ಮೋದಿ ಆಗಸ್ಟ್ 15 ರವೆಗೆ ಭಾರತದ ತ್ರಿವರ್ಣ ಧ್ವಜವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಡಿಪಿಯಾಗಿ ಬಳಸಿ ಎಂದರು.

    ಮೊದಲ ಮನ್ ಕೀ ಬಾತ್ ಕಾರ್ಯಕ್ರಮ
    ಪ್ರಧಾನಿ ಮೋದಿಯವರು ಮೊದಲು ಮನ್ ಕೀ ಬಾತ್ ಕಾರ್ಯಕ್ರಮವನ್ನು 2014ರಲ್ಲಿ ಅಕ್ಟೋಂಬರ್ 3ರಂದು ನೀಡಿದ್ದರು. ಅಂದಿನಿಂದ ನಿರಂತರವಾಗಿ ಪ್ರತಿ ತಿಂಗಳ ಕೊನೆಯ ಭಾನುವಾರ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಇದ್ದಾರೆ. ಇವತ್ತು ಬೆಳಿಗ್ಗೆ 11 ಗಂಟೆಗೆ 91 ಆವೃತ್ತಿಯ ಮನ್ ಕೀಬಾತ್ ಕಾರ್ಯಕ್ರಮ ನಡೆದಿದೆ.
    Published by:Savitha Savitha
    First published: