PM Modi Inspiration: ಪ್ರಧಾನಿ ಮೋದಿ ಜೀವನವೇ ಸ್ಪೂರ್ತಿ: ಬಡವರಿಗೆ ವಿಶೇಷ ಟೀ ಡಿಸ್ಪೆನ್ಸರ್ ಸಿದ್ಧಪಡಿಸಿದ ಹುಬ್ಬಳ್ಳಿ ಸಂಸ್ಥೆ

Modi@8: ಡಿಸ್ಪೆನ್ಸರ್ ಅನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಟೀ-ಕಾಫಿ ಮಾರಾಟ ಮಾಡಬಹುದು. ಟೀ ಡಿಸ್ಪೆನ್ಸರ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು, ಸುಲಭವಾಗಿ ಕೈಗೆಟಕುತ್ತದೆ. ಇದರಲ್ಲಿ ಸಂಗ್ರಹಿಸುವ ಟೀ-ಕಾಫಿ 9 ಗಂಟೆಗೂ ಹೆಚ್ಚು ಕಾಲ ಕಂಟೇನರ್‌ನಲ್ಲಿ ಬಿಸಿಯಾಗಿರುತ್ತದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ಮೈಸೂರು: ಗುಜರಾತ್‌ನ ರೈಲು ನಿಲ್ದಾಣದಲ್ಲಿ ಟೀ ಮಾರುತ್ತಿದ್ದ ನರೇಂದ್ರ ಮೋದಿ (PM Narendra Modi) ಇಂದು ದೇಶದ ಉನ್ನತ ಹುದ್ದೆ ಪ್ರಧಾನಿ ಪಟ್ಟಕ್ಕೆ ಏರಿದ್ದು ಸ್ಟಾರ್ಟ್-ಅಪ್​ಗಳನ್ನು (Startups) ಆರಂಭಿಸುವವರಿಗೆ ಹಲವಾರು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಜೀವನದಿಂದ ಸ್ಪೂರ್ತಿ ಪಡೆದ (Modi Inspiration) ಹುಬ್ಬಳ್ಳಿಯ ಸ್ಟೀರಾ ಟೆಕ್ನೋವೇಶನ್ಸ್ ಕಂಪನಿಯು ಬಡ ವ್ಯಾಪಾರಿಗಳಿಗೆ ಸಹಾಯ ಮಾಡಲು ಟೀ, ಕಾಫಿ ಡಿಸ್ಪೆನ್ಸರ್​ವೊಂದನ್ನು ಸಿದ್ಧಪಡಿಸಿದೆ. ಭಾರ ಹೊತ್ತು ಚಹಾ ಮಾರಾಟ ಮಾರುವ ಬಡ ವ್ಯಾಪಾರಿಗಳಿಗೆ ನೆರವಾಗಲು ಸ್ಟೀರಾ ಟೆಕ್ನೋವೇಶನ್ಸ್ ಕಂಪನಿಯು (Steira Technovations Hubballi) ಡಿಸ್ಪೆನ್ಸರ್ ಎಂಬ ಹೊಸ ಸಾಧನದ ಸಂಶೋಧನೆಯೊಂದನ್ನು ಮಾಡಿದೆ.

ಬಸ್ ನಿಲ್ದಾಣಗಳಲ್ಲಿ ಹಾಗೂ ರೈಲು ನಿಲ್ದಾಣಗಳಲ್ಲಿ ಭಾರದ ಸ್ಟೀಲ್ ಪಾತ್ರೆಗಳನ್ನು ಹೊತ್ತು ಟೀ ಮಾರಾಟ ಮಾಡುವ ವ್ಯಾಪಾರಿಗಳನ್ನು ನಾವು ನೋಡಿರುತ್ತೇವೆ. ಬಟ್ಟೆ ಚೀಲಗಳಲ್ಲಿ ಸ್ಟೀಲ್ ಪ್ಲ್ಯಾಕ್ಸ್ ಗಳಲ್ಲಿ ಟೀ, ಕಾಫಿ ಹೊತ್ತು ಬಸ್, ರೈಲು ನಿಲ್ದಾಣಗಳಲ್ಲಿ ಹೊತ್ತು ತಿರುಗುತ್ತಾರೆ. ಹೀಗೆ ಹೊಸ ಅನ್ವೇಷಣೆ ಪ್ರಕಾರ ಟೀ ವ್ಯಾಪಾರಿಗಳಿಗೆ ಇದು ಸಹಕಾರಿಯಾಗಲಿದ್ದು ಭಾರಹೊರುವ ಅವರ ದಣಿವನ್ನು ಈ ಟೀ ಡಿಸ್ಪೆನ್ಸರ್ ನೀಗಿಸಬಹುದು ಎನ್ನಲಾಗಿದೆ.

5 ಲೀಟರ್ ಸಾಮರ್ಥ್ಯ, 9 ಗಂಟೆಗಳ ಕಾಲ ಕಾಫಿ, ಟೀ ಬಿಸಿ
5 ಲೀಟರ್ ಸಾಮರ್ಥ್ಯವಿರುವ ಇನ್ಸುಲೇಟೆಡ್ ಕಂಟೇನರ್ ಅನ್ನು ಡಿಸ್ಪೆನ್ಸರ್ಗೆ ಜೋಡಿಸಲಾಗಿದ್ದು, ಹಲವು ಗಂಟೆಗಳ ಕಾಲ ಟೀ-ಕಾಫಿ ಬಿಸಿಯಾಗಿರುವಂತೆ ಇದು ನೋಡಿಕೊಳ್ಳಲಿದೆ. ಅಲ್ಲದೇ ಇದನ್ನು ಬ್ಯಾಗ್ ರೀತಿ ಹೊತ್ತುಕೊಂಡು ಬಸ್, ರೈಲು ನಿಲ್ದಾಣಗಳಲ್ಲಿ ತಿರುಗಬಹುದು. ಟೀ-ಕಾಫಿ ಮಾರಾಟ ಮಾಡುವವರು ಇದನ್ನು ಸುಲಭವಾಗಿ ಹೊತ್ತೊಯ್ಯಬಹುದು. ಯಾವುದೇ ರೀತಿಯ ಹೆಚ್ಚಿನ ಆಯಾಸವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ ಎಂದು ಕಂಪನಿ ಹೇಳಿದೆ. ಅಲ್ಲದೇ ಚಹಾ, ಕಾಫಿ ಸೋರಿಕೆ ಸಹ ಆಗುವುದಿಲ್ಲ ಎಂದು ಹೇಳಿಕೊಂಡಿದೆ.

ಲಾಭ ಇಲ್ಲದೇ ವ್ಯಾಪಾರ!
ಕಂಪನಿಯು ಲಾಭವನ್ನು ಲೆಕ್ಕಿಸುವುದಿಲ್ಲ ಬದಲಿಗೆ ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಬಯಸುತ್ತದೆ ಎಂದು ಸ್ಟೀರಾ ಟೆಕ್ನೋವೇಶನ್ಸ್ ಎಂಜಿನಿಯರ್ ಗಣೇಶ್ ಬಾಳಿಕಾಯಿ ಸುದ್ದಿ ಮಾಧ್ಯಮಗಳಿಗೆ ತಿಳಿಸಿದರು. ಈ ಡಿಸ್ಪೆನ್ಸರ್ ತಯಾರಿಕೆಯಿಂದ ಕಂಪನಿಗೆ ಯಾವುದೇ ಲಾಭವಾಗುವುದಿಲ್ಲ. ಮಾರಾಟಗಾರರಿಗೆ ಕೆಲಸವನ್ನು ಸುಲಭ ಮಾಡುವುದು ನಮ್ಮ ಗುರಿ ಆಗಿದೆ. ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಭಾರದ ಪಾತ್ರೆಗಳ ಹೊತ್ತು ಟೀ-ಕಾಫಿ ಮಾರಾಟ ಮಾಡುತ್ತಿರುವ ಬಡ ವ್ಯಾಪಾರಿಗಳಿಗೆ ಸಹಾಯ ಮಾಡುವುದು ನಮ್ಮ ಉದ್ದೇಶವಾಗಿದೆ.

ಇದನ್ನೂ ಓದಿ: Modi@8: ಪ್ರಧಾನಿ ಮೋದಿ ಸರ್ಕಾರಕ್ಕೆ 8 ವರ್ಷ: ಷೇರುಪೇಟೆಯ ಗೂಳಿ ನೆಗೆತದ ವೇಗ ಹೇಗಿದೆ?

9 ಗಂಟೆಗೂ ಹೆಚ್ಚು ಕಾಲ ಬಿಸಿ
ಡಿಸ್ಪೆನ್ಸರ್ ಅನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಟೀ-ಕಾಫಿ ಮಾರಾಟ ಮಾಡಬಹುದು. ಟೀ ಡಿಸ್ಪೆನ್ಸರ್ ಅತ್ಯಂತ ಕಡಿಮೆ ಬೆಲೆಯದ್ದಾಗಿದ್ದು, ಸುಲಭವಾಗಿ ಕೈಗೆಟಕುತ್ತದೆ. ಇದರಲ್ಲಿ ಸಂಗ್ರಹಿಸುವ ಟೀ-ಕಾಫಿ 9 ಗಂಟೆಗೂ ಹೆಚ್ಚು ಕಾಲ ಕಂಟೇನರ್‌ನಲ್ಲಿ ಬಿಸಿಯಾಗಿರುತ್ತದೆ. ಹಲವು ಡಿಸ್ಪೆನ್ಸರ್ ಗಳನ್ನು ಈಗಾಗಲೇ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮಾರಾಟಗಾರರಿಗೆ ಮಾರಾಟ ಮಾಡಿದ್ದೇವೆ. ಮೈಸೂರಿನಿಂದ ಸಹ ಹಲವು ಆರ್ಡರ್ಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಬಳಕೆಗೂ ಸುಲಭ!
ವಿದ್ಯಾರಣ್ಯಪುರಂನ ಟೀ ಮಾರಾಟಗಾರ ಎಂ.ಗಣೇಶ್ ಮಾತನಾಡಿ, “ಮೊಬೈಲ್ ಟೀ ವಿತರಕವು ಚಹಾವನ್ನು ದೀರ್ಘಕಾಲದವರೆಗೆ ಬಿಸಿಯಾಗಿರಿಸುವುದರಿಂದ ಪದೇ ಪದೇ ಚಹಾ ಬಿಸಿ ಮಾಡುವುದನ್ನು ತಪ್ಪಿಸುತ್ತದೆ ಮತ್ತು ಗ್ಯಾಸ್ ಅನ್ನು ಉಳಿಸುತ್ತದೆ ಎಂದಿದ್ದಾರೆ. ಇದರ ಜೊತೆ ಈ ಕಂಟೇನರ್ ಗಳನ್ನು ಬ್ಯಾಗ್ ನಂತೆ ಧರಿಸಿ ಸುಲಭವಾಗಿ ಬೆನ್ನಿನ ಮೇಲೆ ಹೊತ್ತಯ್ಯಬಹುದು" ಎಂದು ಅವರು ಹೇಳಿದರು.

ಇದನ್ನೂ ಓದಿ: Modi@8: ಅಚ್ಛೇ ದಿನ್, ಆತ್ಮನಿರ್ಭರ್, ಜೈ ಶ್ರೀರಾಮ್! ಪ್ರಧಾನಿ ಮೋದಿಯಿಂದ ಈ ಪದಗಳಿಗೆ ಜನಪ್ರಿಯತೆಯ ಭಾಗ್ಯ!

ಗಣೇಶ್ ಹೆಳುವಂತೆ ಸ್ಟೀರಾ ಟೆಕ್ನೋವೇಶನ್ಸ್ ಕಂಪನಿಯ ಟೀ, ಕಾಫಿ ಡಿಸ್ಪೆನ್ಸರ್ ಹಲವು ರೀತಿಯ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಬೆಲೆಯಿಂದ ಹಿಡಿದು ಎಲ್ಲಾ ರೀತಿಯಲ್ಲೂ ವ್ಯಾಪಾರಿಗಳಿಗೆ ಸೂಕ್ತವಾಗಿದೆ. ಸುಲಭವಾಗಿ ಬ್ಯಾಗ್ ನಂತೆ ಈ ಕಂಟೇನರ್ ಅನ್ನು ಧರಿಸಬಹುದು. ಮತ್ತು ಹೆಚ್ಚು ಹೊತ್ತು ಕಾಫಿ, ಟೀ ಬಿಸಿ ಇರುವುದರಿಂದ ಗ್ರಾಹಕರಿಗೆ ಬಿಸಿ ಬಿಸಿಯಾಗಿ ವಿತರಿಸಬಹುದು.
Published by:guruganesh bhat
First published: