• Home
  • »
  • News
  • »
  • national-international
  • »
  • Modi@8: ಅಚ್ಛೇ ದಿನ್, ಆತ್ಮನಿರ್ಭರ್, ಜೈ ಶ್ರೀರಾಮ್! ಪ್ರಧಾನಿ ಮೋದಿಯಿಂದ ಈ ಪದಗಳಿಗೆ ಜನಪ್ರಿಯತೆಯ ಭಾಗ್ಯ!

Modi@8: ಅಚ್ಛೇ ದಿನ್, ಆತ್ಮನಿರ್ಭರ್, ಜೈ ಶ್ರೀರಾಮ್! ಪ್ರಧಾನಿ ಮೋದಿಯಿಂದ ಈ ಪದಗಳಿಗೆ ಜನಪ್ರಿಯತೆಯ ಭಾಗ್ಯ!

 ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಇಂದು ಮೋದಿ ಅವರು ತಮ್ಮ ಪ್ರಧಾನಿ ಹುದ್ದೆಯಲ್ಲಿ ಅಲಂಕರಿಸಿ ಎಂಟು ವರ್ಷಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ ಭಾರತದಲ್ಲಿ 2014 ರಿಂದ ಭಾಷಾ ಪ್ರಯೋಗಗಳಲ್ಲಿ ಏನೆಲ್ಲ ಬದಲಾವಣೆಗಳನ್ನು ಕಂಡಿದೆ ಎಂಬುದರ ಬಗ್ಗೆ ಒಂದು ಪಕ್ಷಿನೋಟ ಬೀರೋಣ.

  • Share this:

ನಮ್ಮ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಭಾಷಣ (Speech) ಮುಂಚೆಯಿಂದಲೂ ಜನಮನಗಳಲ್ಲಿ ತನ್ನದೆ ಆದ ವಿಶಿಷ್ಟ ಛಾಪು ಮೂಡಿಸಿದೆ. ಅವರು ಮಾತನಾಡುವ ಶೈಲಿ (Speaking style) ಹಾಗೂ ಬಳಸುವ ಪದನುಡಿಗಳು ಶ್ರೀಸಾಮಾನ್ಯರ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದರೆ ಈಗಲೂ ನಮ್ಮ ನಿತ್ಯಜೀವನದ ಆಡುವ ಭಾಷೆಗಳಲ್ಲಿ (Language) ಅವರ ಕೆಲವು ಪದನುಡಿಗಳು ಹಾಸು ಹೊಕ್ಕಾಗಿವೆ ಎಂದರೂ ತಪ್ಪಾಗಲಾರದು. ಕೇವಲ ಜನಸಾಮಾನ್ಯರಲ್ಲದೆ ಭಾರತೀಯ ಜನತಾ ಪಕ್ಷದ (BJP) ಹಲವು ನೇತಾರರು ಅವರ ಭಾಷಣ ಶೈಲಿಯಿಂದ ಪ್ರಭಾವಿತರಾಗಿದ್ದಾರೆಂದೇ ಹೇಳಬಹುದು.


ಇಂದು ಮೋದಿ ಅವರು ತಮ್ಮ ಪ್ರಧಾನಿ ಹುದ್ದೆಯಲ್ಲಿ ಅಲಂಕರಿಸಿ ಎಂಟು ವರ್ಷಗಳು ಪೂರ್ಣಗೊಂಡ ಈ ಸಂದರ್ಭದಲ್ಲಿ ಭಾರತದಲ್ಲಿ 2014 ರಿಂದ ಭಾಷಾ ಪ್ರಯೋಗಗಳಲ್ಲಿ ಏನೆಲ್ಲ ಬದಲಾವಣೆಗಳನ್ನು ಕಂಡಿದೆ ಎಂಬುದರ ಬಗ್ಗೆ ಒಂದು ಪಕ್ಷಿ ನೋಟ ಬೀರೋಣ.


ಅಚ್ಛೆ ದಿನ್ (ಒಳ್ಳೆಯ ದಿನಗಳು)
ಮೋದಿ ಅವರು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಒಂದು ಪದನುಡಿ ಎಂದರೆ 'ಅಚ್ಛೆ ದಿನ್' ಎಂಬುದಾಗಿದೆ. ಮೋದಿ ಅವರು ಚುನಾವಣಾ ಪ್ರಚಾರ ರ್‍ಯಾಲಿಗಳಲ್ಲಿ ಪಾಲ್ಗೊಂಡಾಗ ಮೊಟ್ಟ ಮೊದಲ ಬಾರಿಗೆ "ಅಚ್ಛೆ ದಿನ್ ಆನೆ ವಾಲೆ ಹೈ" (ಒಳ್ಳೆಯ ದಿನಗಳು ಬರಲಿವೆ) ಎಂಬ ಘೋಷ ವಾಕ್ಯವನ್ನು ಪರಿಚಯಿಸಿ ಜನರನ್ನು ತಮ್ಮತ್ತ ಆಕರ್ಷಿಸಿದರು. ಈ ಮೂಲಕ ಅವರು ಕಾಂಗ್ರೆಸ್ ಪಕ್ಷವನ್ನು ಆಡಳಿತದಿಂದ ಹೊರಗುಳಿಸುವ ಮೂಲಕ ಒಳ್ಳೆಯ ದಿನಗಳು ಭಾರತಕ್ಕೆ ಬರಲಿವೆ ಎಂಬುದನ್ನು ತಮ್ಮ ಪ್ರಚಾರ ಕಾರ್ಯದಲ್ಲಿ ಒತ್ತಿಯಾಗಿ ಹೇಳಿದ್ದರು.


ಈ ವಾಕ್ಯಕ್ಕೆ ಎಷ್ಟೊಂದು ಪ್ರಾಮುಖ್ಯತೆ ನೀಡಲಾಯಿತೆಂದರೆ ಅಂದಿನ ಚುನಾವಣೆಯ ಸಂದರ್ಭದಲ್ಲಿ ಎಲ್ಲೆಡೆ ಹಾಕಲಾಗಿದ್ದ ಹೋರ್ಡಿಂಗ್​ಗಳು ಹಾಗೂ ಟಿವಿ ಮಾಧ್ಯಮಗಳಲ್ಲಿ ಇದು ಬಿತ್ತರವಾಗಿತ್ತು. ಈ ಸಂದರ್ಭದಲ್ಲಿ ಮೋದಿ ಅವರು ಕಪ್ಪು ಹಣವನ್ನು ತಮ್ಮ ಸರ್ಕಾರ ಹೊರತರಲಿದ್ದು ಈ ಮೂಲಕ ಪ್ರತಿ ಜನರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಗೂ ಲಕ್ಷಾಂತರ ಉದ್ಯೋಗಗಳು ಸೃಷ್ಟಿ ಮಾಡುವ ಭರವಸೆ ನೀಡುವುದರ ಮೂಲಕ 'ಅಚ್ಛೆ ದಿನ್' ಬರುವ ಬಗ್ಗೆ ಪ್ರಚುರ ಪಡಿಸಲಾಗಿತ್ತು.


ಇದನ್ನೂ ಓದಿ: Sim Card Rule: ಸರ್ಕಾರ ಜಾರಿಗೆ ತಂದಿದೆ ಹೊಸ ಸಿಮ್ ಕಾರ್ಡ್ ರೂಲ್ಸ್! ಹೊಸ ಸಿಮ್ ಖರೀದಿ ಮಾಡಲು ಏನು ಮಾಡಬೇಕು ಗೊತ್ತಾ?


ಅಂತಿಮವಾಗಿ, ಲೋಕಸಭೆಯಲ್ಲಿ 282 ಬಹುಮತ ಪಡೆಯುವುದರ ಮೂಲಕ ಬಿಜೆಪಿ ಇತಿಹಾಸವನ್ನೇ ಸೃಷ್ಟಿಸಿತು.  ಮೋದಿ ನಾಯಕತ್ವ ಈ ದೇಶಕ್ಕೆ ಲಭ್ಯವಾಯಿತು. ಇಲ್ಲಿ ಆಸಕ್ತಿಕರ ವಿಷಯವೆಂದರೆ ಈ ಪದವನ್ನು ಮೊದಲು ಈ ಹಿಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅನಿವಾಸಿ ಭಾರತೀಯರ ಸಭೆಯೊಂದರಲ್ಲಿ ಮೊದಲ ಬಾರಿಗೆ ಬಳಸಿದ್ದರಾದರೂ ಇದನ್ನು ಮಂಚೂಣಿ ನೆಲೆಗೆ ತಂದು ಅದರ ಕೀರ್ತಿಯನ್ನು ತೆಗೆದುಕೊಳ್ಳಲು ಸಫಲರಾಗಿದ್ದವರು ನರೇಂದ್ರ ಮೋದಿ.


ಆ್ಯಂಟಿ ನ್ಯಾಷನಲ್ ಅಲಿಯಾಸ್ ಅರ್ಬನ್ ನಕ್ಸಲ್
ಒಂದೊಮ್ಮೆ ಬಿಜೆಪಿ ಕೇಂದ್ರದಲ್ಲಿ ತನ್ನ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಬಹಳಷ್ಟು ಆಘಾತ ಆ ಪಕ್ಷದ ಸಿದ್ಧಾಂತವನ್ನು ವಿರೋಧಿಸುವ ಹಾಗೂ ಜಾತ್ಯಾತೀತ ಮನೋಭಾವನೆ ಹೊಂದಿದವರಿಗಾಗಿತ್ತು. ಅಂಥವರಿಂದ ಆಗಾಗ ವಿರೋಧಗಳು ಹೊರ ಬೀಳಲಾರಂಭಿಸಿದಾಗ ಬಿಜೆಪಿ ಅನುಯಾಯಿಗಳಿಂದ ಅವರ ಬಗ್ಗೆ ಆ್ಯಂಟಿ ನ್ಯಾಷನಲ್ ಅಲಿಯಾಸ್ ಅರ್ಬನ್ ನಕ್ಸಲ್ ಪದಗಳು ಆರಂಭಿಸಲ್ಪಡತೊಡಗಿದವು. ಆದರೆ ಇಂದು ಈ ಪದ ಸರ್ವ ವ್ಯಾಪಿಯಾಗಿದೆ.


ಪ್ರಧಾನಿ ಮೋದಿ ಬಳಸದಿದ್ದರೂ ವ್ಯಾಪಕ ಬಳಕೆ!
ಪ್ರತಿಯೊಂದು ಪಕ್ಷಗಳಿಂದಲೂ ತಮ್ಮ ವಿರೋಧಿಗಳನ್ನು ಟೀಕಿಸುವ ಸಂದರ್ಭದಲ್ಲಿ ಈ ಪದಗಳು ಈಗ ಬಳಸಲ್ಪಡುತ್ತಿವೆ ಎಂದರೂ ತಪ್ಪಾಗಲಾರದು. ಇದರ ಪ್ರಯೋಗ ಯಾವ ಪರಿ ಬೆಳೆಯಿತೆಂದರೆ 2016 ರಲ್ಲಿ ಭಾರತ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಆ ಬಗ್ಗೆ ಪ್ರಮಾಣ ಒದಗಿಸುವಂತೆ ಕೇಳಿದವರ ಮೇಲೆಯೂ ಈ ಪದಗಳನ್ನು ಬಳಸಲಾಯಿತು. ಆದರೆ, ನರೇಂದ್ರ ಮೋದಿ ಅವರು ಇದೇ ಪದವನ್ನು ಯಥಾವತ್ತಾಗಿ ತಮ್ಮ ಟ್ವಿಟ್ ನಲ್ಲಿ ಎಲ್ಲಿಯೂ ಬಳಸಿಲ್ಲ ಎಂಬುದು ಗಮನಿಸಬೇಕಾದ ಅಂಶ.


ಆತ್ಮನಿರ್ಭರ್
ಮೋದಿ ಅವರ ಇನ್ನೊಂದು ಮಹತ್ವಾಕಾಂಕ್ಷೆ ಎಂದರೆ ದೇಶವನ್ನು ಸ್ವಾವಲಂಬಿಯಾಗಿಸುವುದು. ಅದಕ್ಕಾಗಿ ಚಾಲ್ತಿಗೆ ಬಂದ ಪದವೆಂದರೆ 'ಆತ್ಮನಿರ್ಭರ್' ಎಂದರೆ ಸ್ವಾವಲಂಬನೆ. ಪ್ರಧಾನಿ ಮೋದಿ ಅವರು ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ಮೇ 12, 2020 ರಂದು ಭಾರತಕ್ಕೆ ಆರ್ಥಿಕ ಚೇತರಿಕೆ ನೀಡುವಂತಹ 20 ಲಕ್ಷ ಕೋಟಿ ರೂ. ಗಳ ಪ್ಯಾಕೇಜ್ ನೀಡುವಂತಹ "ಆತ್ಮನಿರ್ಭರ್ ಭಾರತ" ಅಭಿಯಾನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಈ ಪದವನ್ನು ಮೊದಲ ಬಾರಿಗೆ ಉಚ್ಛರಿಸಿದ್ದರು. ತದನಂತರದಿಂದ ಈ ಸ್ವಾವಲಂಬನೆಯ ಪದವು ಭಾರತದ ಪ್ರತಿ ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಉಪಸ್ಥಿತಿ ಹೊಂದಿದೆ.


ಭಕ್ತ
ನೀವು ಭಾರತದಲ್ಲಿ ರಾಜಕೀಯ ನಿಲುವುಗಳನ್ನು ಹೊಂದಿದ್ದರೆ ನೀವು ಒಂದು ನಿರ್ದಿಷ್ಟ ಪಕ್ಷದ ಬೆಂಬಲಿಗ, ಇಲ್ಲವೆ ವಿಮರ್ಶಕರಾಗಿರುವಿರಿ ಎಂದರ್ಥ. ಆದರೆ, ಆ ರೀತಿಯ ಭಾವನೆ ಇಂದು ನಿಧಾನವಾಗಿ ಮಾಯವಾಗುತ್ತಿದೆ. ಇಂದು ಬಲಪಂಥೀಯರನ್ನು ಇಲ್ಲವೆ ಬಲ ಪಂಥೀಯ ಪಕ್ಷವನ್ನು ಸಮರ್ಥಿಸುವವರಿಗೆ ಭಕ್ತ ಎಂಬ ಬಿರುದಾವಳಿಯಿಂದ ಕರೆಯಲಾಗುವುದನ್ನು ಕಾಣಬಹುದು.


ಮೋದಿ ಅವರ ಮೇಲೆ ಅಭಿಮಾನಿಗಳಿಗೆ ಈ ಹೆಸರು!
ಎಡಪಂಥೀಯರು ಈ ಪದವನ್ನು ಬಳಕೆಗೆ ತಂದಿದ್ದಾರೆನ್ನಬಹುದು. ಹೇಗೆ ಬಲಪಂಥೀಯರು ತಮ್ಮ ಸೈದ್ಧಾಂತಿಕ ಶತ್ರುಗಳಿಗೆ 'ಲಿಬ್ಟಾರ್ಡ್ಸ್' ಅಥವಾ 'ಸಿಕ್ಯೂಲರ್ಸ್' ಎನ್ನುತ್ತಾರೊ ಅದೇ ರೀತಿ ವ್ಯಂಗ್ಯಮಯವಾಗಿ ಈ ಪದವನ್ನು ಬಲಪಂಥೀಯರಿಗೆಂದು ಎಡಪಂಥೀಯರಿಂದ ಬಳಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮೋದಿ ಅವರ ಮೇಲೆ ಅಭಿಮಾನ ಹೊಂದಿರುವವರನ್ನು ಈ ಪದನಾಮದಿಂದ ಕರೆಯಲಾಗುತ್ತದೆ.


ಅಪನಗದೀಕರಣ (ಡಿಮೊನೆಟೈಸೇಷನ್)
ಪ್ರಧಾನಿ ಅವರೊಂದಿಗೆ ಇದು ಸಮಾನಾಂತರ ಪದವಾಗೇ ಬಳಕೆಯೊಂದಿಗೆ ಬಂದಿದೆ ಎಂದರೂ ತಪ್ಪಾಗಲಾರದು. ಮೋದಿ ಅವರು ತಮ್ಮ ಚೊಚ್ಚಲ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತಾಗಿ ನವಂಬರ್ 8, 2016 ರಂದು ಭಾರತದಲ್ಲಿ ಚಲಾವಣೆಯಲ್ಲಿದ್ದ ಎಲ್ಲ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಪಮೌಲ್ಯಗೊಳಿಸಿ ಆದೇಶ ಹೊರಡಿಸಿದರು.


ಇದನ್ನೂ ಓದಿ: Modi@8: ಕಳೆದ 8 ವರ್ಷಗಳಲ್ಲಿ ದೇಶದ ಗಮನ ಸೆಳೆದ ಮೋದಿಯವರ 8 ಟೋಪಿಗಳು


ಇದೊಂದು ನಂಬಲಸಾಧ್ಯವಾದಂತಹ ನಡೆಯಾಗಿತ್ತು ಹಾಗೂ ಇದರ ಪ್ರಮುಖ ಉದ್ದೇಶ ದೇಶದಲ್ಲಿ ಸರ್ಕ್ಯೂಲೇಟ್ ಆಗುತ್ತಿದ್ದ ಎಲ್ಲ ಕಪ್ಪು ಹಣವನ್ನು ತೊಡೆದು ಹಾಕುವುದಾಗಿತ್ತು. ಈ ನಿರ್ಧಾರದ ನಂತರ ಹಲವು ಸಮಯದವರೆಗೆ ದೇಶದ ಜನತೆ ಸಾಕಷ್ಟು ಪರದಾಡಬೇಕಯಿತು. ಎಟಿಎಂಗಳಲ್ಲಿ, ಬ್ಯಾಂಕುಗಳಲ್ಲಿ ನಗದು ಹಣ ಪಡೆಯಲು ಗಂಟೆಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು.


ಗೋಮಾತಾ/ಗೋರಕ್ಷಕ
ಗೋವುಗಳನ್ನು ನಮ್ಮ ಭಾರತದಲ್ಲಿ ಅನಾದಿ ಕಾಲದಿಂದಲೂ ಪೂಜಿಸ ಬರಲಾಗುತ್ತಿದೆ. ಆದರೆ, ನರೇಂದ್ರ ಮೋದಿ ಅವರ ಆಡಳಿತದಲ್ಲಿ ಈ ಅಂಶವು ಹೆಚ್ಚಿನ ಗಮನ ಹಾಗೂ ಒತ್ತು ಪಡೆಯಿತು. 2017 ರಲ್ಲಿ ಗೋರಕ್ಷಕರಿಂದ ನಡೆದ ಎನ್ನಲಾದ ಹಿಂಸೆಗಳ ಪ್ರಕರಣಗಳು ಕೇಳಿಬಂದವು. ಆದರೆ, ಈ ಬಗ್ಗೆ ಮೋದಿ ಅವರು ಗೋವಿನ ಹೆಸರಿನಲ್ಲಿ ಜನರನ್ನು ಹತ್ಯೆಗೈಯುವುದನ್ನು ಎಂದಿಗೂ ಸಮರ್ಥಿಸಲಿಲ್ಲ. 2019 ರಲ್ಲಿ ಅವರ ಸಚಿವ ಸಂಪುಟವು ದನಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಸಮಿತಿಯ ಆಯೋಜನೆ ಮಾಡಿತು.


ಜೈ ಶ್ರೀರಾಮ್
ದೇಶದಲ್ಲಿ ರಾಮ ಜನ್ಮಭೂಮಿಯ ಚಳುವಳಿ ಪ್ರಾರಂಭವಾದಾಗ ವಿಶ್ವ ಹಿಂದು ಪರಿಷದ್ ಹೊರತಂದ ಪದ ಜೈ ಶ್ರೀರಾಮ್. ಅಯೋಧ್ಯಾ ವಿವಾದವು ಮತ್ತೆ ಮುನ್ನೆಲೆಗೆ ಬಂದಾಗ ಬಿಜೆಪಿ ನೇತಾರರೂ ಸಹ ಈ ಪದವನ್ನು ಒಪ್ಪಿಕೊಂಡರು. ಈಗ ಭಾರತದೆಲ್ಲೆಡೆ ಈ ಪದದ ಬಳಕೆ ಜೋರಾಗಿಯೇ ನಡೆಯುತ್ತಿರುವುದನ್ನು ಗಮನಿಸಬಹುದು.


ಮಿತ್ರೋ (ಸ್ನೇಹಿತರೆ)
ಇದು ಇನ್ನೊಂದು ಮೋದಿ ಅವರ ಬಾಯಿಂದ ಬಂದ ಪ್ರಸಿದ್ಧಿ ಪಡೆದ ಪದ. ಮೋದಿ ಅವರು ತಮ್ಮ ಪ್ರತಿ ಭಾಷಣವನ್ನು ಈ ಪದದ ಸಂಭೋದನೆಯೊಂದಿಗೆ ಪ್ರಾರಂಭಿಸುತ್ತಾರೆ ಹಾಗೂ ಇದು ಒಂದು ರೀತಿಯಲ್ಲಿ ಜನರೆಲ್ಲರೂ ಸ್ವಯಂ ಆಗಿಯೇ ಈ ಪದ ನುಡಿದು ಆನಂದಿಸುವ ರೂಢಿ ನಡೆದುಕೊಂಡು ಬಂದಿದೆ. ಅದರಲ್ಲೂ ವಿಶೇಷವಾಗಿ ನೋಟುಗಳ ಅಮೌಲ್ಯೀಕರಣ ಮಾಡುವ ಸಂದರ್ಭದ ತಮ್ಮ ಭಾಷಣದಲ್ಲಿ ಮೋದಿ ಅವರು ಈ ಪದವನ್ನು ಗಟ್ಟೀಯಾಗಿ ನುಡಿದಿದ್ದು ಆ ಪದ ಈಗ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಂತಾಗಿದೆ.


ಸರ್ಜಿಕಲ್ ಸ್ಟ್ರೈಕ್
2016, ಸೆಪ್ಟೆಂಬರ್ 28 ರಂದು ಭಾರತೀಯ ಸೇನೆಯು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಯಶಸ್ವಿಪೂರ್ವಕವಾಗಿ ಈ ಸ್ಟ್ರೈಕ್ ಮಾಡಿತು. 18 ಸೆಪ್ಟೆಂಬರ್ ನಲ್ಲಿ ಆತಂಕವಾದಿಗಳಿಂದ ಭಾರತೀಯ ಸೇನೆಯ ಮೇಲೆ ಉರಿಯಲ್ಲಿ ಮಾಡಿದ್ದ ಬಾಂಬ್ ಆಕ್ರಮಣದ ಪ್ರತಿಕಾರವಾಗಿ ಭಾರತೀಯ ಸೈನ್ಯದಿಂದ ಈ ನಡೆಯನ್ನು ಕೈಗೊಳ್ಳಲಾಗಿತ್ತು. ಮೋದಿ ಅವರ ಆಡಳಿತದಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದ್ದು ಇದು ದೇಶದ ಜನರಿಂದ ಉತ್ತಮ ಸ್ಪಂದನೆಗಳಿಸಿತು. ಈಗ ಸೆಪ್ಟೆಂಬರ್ 29 ಅನ್ನು 'ಸರ್ಜಿಕಲ್ ಸ್ಟ್ರೈಕ್ ದಿನ' ಎಂದು ಆಚರಿಸಲಾಗುತ್ತದೆ.


ಇದನ್ನೂ ಓದಿ:  Modi@8: ಪ್ರಧಾನಿ ಮೋದಿ ಸರ್ಕಾರಕ್ಕೆ 8 ವರ್ಷ: ಷೇರುಪೇಟೆಯ ಗೂಳಿ ನೆಗೆತದ ವೇಗ ಹೇಗಿದೆ?


ಸ್ವಚ್ಛ ಭಾರತ್
ಮೋದಿ ಅವರ ಇನ್ನೊಂದು ಅಭೂತಪೂರ್ವ ಯಶಸ್ಸು ಪಡೆದ ಅಭಿಯಾನ ಇದಾಗಿದೆ. ಅಕ್ಟೋಬರ್ 2, 2014 ರಂದು ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇದರ ಪ್ರಮುಖ ಉದ್ದೇಶ ದೇಶದೆಲ್ಲೆಡೆ ಸ್ವಚ್ಛತೆ ಹಾಗೂ ನೈರ್ಮಲ್ಯದ ಮಹತ್ವದ ಕುರಿತು ಸಂದೇಶ ಹರಡುವುದಾಗಿತ್ತು ಹಾಗೂ ಕ್ಜನರು ಅದನ್ನು ಅನುಸರಿಸುವಂತೆ ಪ್ರೇರೇಪಿಸುವುದಾಗಿತ್ತು. ಮೋದಿ ಅವರೇ ಸ್ವತಃ ಕಸಬರಿಗೆಯೊಂದನ್ನು ಕೈಗಳಲ್ಲಿ ಹಿಡಿದು ದೆಹಲಿಯ ಬೀದಿಗಳಲ್ಲಿ ಕಸಗುಡಿಸುವ ಮೂಲಕ ದೇಶದ ಕೋಟ್ಯಂತರ ಜನರಿಗೆ ಮಾದರಿ ನಾಯಕನಾಗಿ ರೂಪಗೊಂಡರು.

Published by:Ashwini Prabhu
First published: