PM Modi Birthday: ಹುಟ್ಟುಹಬ್ಬದ ಸಂಭ್ರಮದಲ್ಲಿ ನರೇಂದ್ರ ಮೋದಿ; ನಮ್ಮ ಪ್ರಧಾನಿ ಈ ಮಟ್ಟಕ್ಕೆ ಬೆಳೆದದ್ದೇ ರೋಚಕ!

ಪ್ರಧಾನಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಆಡಳಿತ ನಡೆಸುತ್ತಿರುವ ಮೋದಿ ತಮ್ಮ 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಮೋದಿಯವರ ಬಗ್ಗೆ ಒಂದಿಷ್ಟು ಕೂತುಹಲಕಾರಿ ವಿಚಾರಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಪ್ರಧಾನಿ ನರೇಂದ್ರ ಮೋದಿ (PM Narendra Modi), ಭಾರತ ದೇಶ ಕಂಡ ಅಪ್ರತಿಮ ರಾಜಕಾರಣಿ. ರಾಜಕೀಯ (Politics) ಅಖಾಡದಲ್ಲಿ ಹೊಸ ಅಲೆ ಎಬ್ಬಿಸಿದ ನಮ್ಮ ದೇಶದ ಹೆಮ್ಮೆಯ ಪ್ರಧಾನಿ. ಅಂತರಾಷ್ಟ್ರೀಯ ಸಂಬಂಧದಿಂದ ಹಿಡಿದು, ಉದ್ಯಮ, ಡಿಜಿಟಲ್‌ ಇಂಡಿಯಾ (Digital India), ವೈದ್ಯಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿ ಭಾರತದ ಅಭಿವೃದ್ಧಿಯನ್ನು (Development) ಮತ್ತು ದೇಶದ ಮುಂಚೂಣಿತನವನ್ನು ಬಯಸುತ್ತಿರುವ ಧೀಮಂತ ನಾಯಕ. ಸಮಾಜದ ಕೊನೆ ಸಾಲಿನ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯ (Facility), ಸವಲತ್ತು ಸಿಗಬೇಕೆಂದು ನಾನಾ ಯೋಜನೆಗಳ ಮೂಲಕ ಮೈಲಿಗಲ್ಲು ಸಾಧಿಸಿರುವ ನರೇಂದ್ರ ದಾಮೋದರದಾಸ್ ಮೋದಿಯವರಿಗೆ ನಾಳೆ ಹುಟ್ಟು ಹಬ್ಬದ ಸಂಭ್ರಮ.

ಕೇವಲ ರಾಜಕೀಯದಲ್ಲಿ ಮಾತ್ರ ಸ್ಪೂರ್ತಿಯಾಗಿರದೇ ಮೋದಿ ಅವರ ಜೀವನ ಶೈಲಿ, ಅವರು ನಡೆದು ಬಂದ ಕಷ್ಟದ ಹಾದಿ, ಅವರ ಆರಂಭಿಕ ಜೀವನ ಹೀಗೆ ಹಲವಾರು ವಿಚಾರಗಳಿಗೆ ನಮ್ಮ ಪ್ರಧಾನಿ ದೊಡ್ಡ ಸ್ಪೂರ್ತಿಯಾಗಿ ನಿಲ್ಲುತ್ತಾರೆ ಎಂದರೆ ಅದು ಖಂಡಿತ ಅತಿಶಯೋಕ್ತಿ ಅಲ್ಲವೇ ಅಲ್ಲ.

ಪ್ರಧಾನಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಆಡಳಿತ ನಡೆಸುತ್ತಿರುವ ಮೋದಿ ತಮ್ಮ 72ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮೋದಿಯವರ ಬಗ್ಗೆ ಒಂದಿಷ್ಟು ಕೂತುಹಲಕಾರಿ ವಿಚಾರಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ಮೋದಿಯವರ ಆರಂಭಿಕ ಜೀವನ
ನರೇಂದ್ರ ಮೋದಿಯವರು 1950 ರ ಸೆಪ್ಟೆಂಬರ್ 17 ರಂದು ಜನಿಸಿದರು, ಭಾರತವು ಸ್ವಾತಂತ್ರ್ಯವನ್ನು ಪಡೆದ 3 ವರ್ಷಗಳ ನಂತರ ಮತ್ತು ಭಾರತವು ಗಣರಾಜ್ಯವಾದ ಕೆಲವೇ ತಿಂಗಳುಗಳಲ್ಲಿ, ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾದ ವಡ್​ನಗರದಲ್ಲಿ ಜನಿಸಿದರು. ದಾಮೋದರದಾಸ್ ಮೋದಿ ಮತ್ತು ಹೀರಾಬಾ ಮೋದಿಯವರ ಆರು ಮಕ್ಕಳಲ್ಲಿ ನರೇಂದ್ರ ಮೋದಿ ಮೂರನೆಯವರು.

ಇದನ್ನೂ ಓದಿ: PM Modi Birthday Gift: ಪಿಎಂ ಮೋದಿ ಹುಟ್ಟಿದ ದಿನವೇ ಹುಟ್ಟಿದರೆ ಚಿನ್ನದ ಉಂಗುರ ಗಿಫ್ಟ್!

ಚಾಯ್ವಾಲಾ
ಬಡ ಕುಟುಂಬದಲ್ಲಿಯೇ ಬೆಳೆದ ಇವರು ಜೀವನೋಪಾಯಕ್ಕಾಗಿ ಹಲವಾರು ರೀತಿ ಕಷ್ಟ ಪಟ್ಟಿದ್ದಾರೆ. ಆರು ಮಕ್ಕಳಿರುವ ತುಂಬು ಕುಟುಂಬ ಸುಮಾರು 40 ಅಡಿ 12 ಅಡಿಗಳಷ್ಟು ಸಣ್ಣ ಮನೆಯಲ್ಲಿ ವಾಸಿಸುತ್ತಿತ್ತು. ಜೀವನ ನಿರ್ವಹಣೆಗಾಗಿ ಮೋದಿಯವರ ತಂದೆ ದಾಮೋದರದಾಸ್ ಮೋದಿ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದರು. ನಂತರ ಪ್ರಧಾನಿ ಮೋದಿ ಅವರು ಸಹ ಅಪ್ಪನ ಕೆಲಸದಲ್ಲಿ ಜೊತೆಯಾಗುತ್ತಿದ್ದು. ಮೋದಿ ಬಾಲ್ಯದಲ್ಲಿ ವಡ್​ನಗರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ, ತಮ್ಮ ತಂದೆಯ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಚಹಾ ಮಾರುತ್ತಿದ್ದರು.

ಸೇನೆಗೆ ಸೇರಲು ಬಯಸಿದ್ದ ಮೋದಿ
ನರೇಂದ್ರ ಮೋದಿ ಡಾಟ್‌ಇನ್ ವೆಬ್‌ಸೈಟ್‌ನ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಸೇನೆಗೆ ಸೇರಲು ಬಯಸಿದ್ದರಂತೆ. ಅಲ್ಲದೇ ತಮ್ಮ ವಿದ್ಯಾಭ್ಯಾಸವನ್ನು ಸಮೀಪದ ಜಾಮ್‌ನಗರದಲ್ಲಿರುವ ಸೈನಿಕ ಶಾಲೆಯಲ್ಲಿ ಓದಲು ಬಯಸಿದ್ದರು ಆದರೆ ಹಣದ ಕೊರತೆಯಿಂದ ಮೋದಿಗೆ ಇದು ಸಾಧ್ಯವಾಗಲಿಲ್ಲ. ಮೋದಿ 1967ರಲ್ಲಿ ವಡನಗರದಲ್ಲಿ ಪಿಯುಸಿ ವ್ಯಾಸಂಗ ಮುಗಿಸಿಕೊಂಡರು. 1978 ರಲ್ಲಿ ಮೋದಿ ಸ್ಕೂಲ್ ಆಫ್ ಓಪನ್ ಲರ್ನಿಂಗ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು.

ಕಡಿಮೆ ನಿದ್ರೆ.. ಉತ್ತಮ ಜೀವನ ಶೈಲಿ
ಪ್ರಧಾನಿ ಮೋದಿ ಕಾಯಕವೇ ಕೈಲಾಸ ಎಂದು ತಿಳಿದವರು. ಅದರಂತೆಯೇ ನಡೆದುಕೊಳ್ಳುವ ಮೋದಿ ಕಡಿಮೆ ನಿದ್ದೆ, ಹೆಚ್ಚು ಕೆಲಸ ಮಾಡುವ ವ್ಯಕ್ತಿ. 2012 ರಲ್ಲಿ ನಡೆದ ಒಂದು ಸಂದರ್ಶನದಲ್ಲಿ ಮೋದಿಯವರಿಗೆ ದಿನದಲ್ಲಿ ನೀವು ಎಷ್ಟು ಗಂಟೆ ಮಲಗುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಮೋದಿ "ನಾನು ತುಂಬಾ ಕಡಿಮೆ ನಿದ್ರೆ ಮಾಡುತ್ತೇನೆ. ಯೋಗ, ಪ್ರಾಣಾಯಾಮ ಮತ್ತು ಆಳವಾದ ಉಸಿರಾಟವು ದಿನವಿಡೀ ನನ್ನನ್ನು ಶಕ್ತಿಯುತವಾಗಿರಿಸುತ್ತದೆ" ಎಂದು ಹೇಳಿದ್ದರು.

ಇದನ್ನೂ ಓದಿ: PM Narendra Modi Birthday: ಮೋದಿ ಹುಟ್ಟುಹಬ್ಬಕ್ಕೆ ದೇಶಕ್ಕೆ ಚಿರತೆಗಳ ಉಡುಗೊರೆ!

ಹೋಟೆಲ್​ನಲ್ಲಿ ತಂಗುವ ಅಭ್ಯಾಸ ಕಡಿಮೆ
ವರದಿಯ ಪ್ರಕಾರ ಪ್ರಧಾನಿ ಪ್ರಯಾಣ ಮಾಡುವಾಗ ಹೋಟೆಲ್ ಕೊಠಡಿಗಳಲ್ಲಿ ಮಲಗುವುದಕ್ಕಿಂತ ಹೆಚ್ಚಾಗಿ ತಮ್ಮ ವಿಮಾನದಲ್ಲಿ ಮಲಗಲು ಇಷ್ಟಪಡುತ್ತಾರಂತೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಪ್ರಧಾನಿಯವರು ಹೋಟೆಲ್‌ನಲ್ಲಿ ತಂಗುತ್ತಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.
Published by:Ashwini Prabhu
First published: