Narendra Modi: ಇಂದಿನಿಂದ 3 ದಿನಗಳ ಕಾಲ ಪ್ರಧಾನಿ ಗುಜರಾತ್ ಪ್ರವಾಸ; ಹಲವು ಕಾರ್ಯಕ್ರಮಗಳಲ್ಲಿ ಮೋದಿ ಭಾಗಿ

ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಕೂಡ ಮೂರು ದಿನ ಗುಜರಾತ್‌ನಲ್ಲೇ ಇರಲಿದ್ದಾರೆ. ಅವರು ಪ್ರಧಾನಿ ಮೋದಿಯವರೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ನವದೆಹಲಿ, ಏ. 18: ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದಿನಿಂದ ಮೂರು ದಿನ ಗುಜರಾತ್ (Gujarat) ಪ್ರವಾಸ ಹಮ್ಮಿಕೊಂಡಿದ್ದಾರೆ. ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ (Director-General of the World Health Organization) ಡಾ. ಟೆಡ್ರೊಸ್ ಘೆಬ್ರೆಯೆಸಸ್, (Dr. Tedros Ghebreyesus) ಮತ್ತು ಮಾರಿಷಸ್ ಪ್ರಧಾನಿ (Mauritian Prime Minister) ಪ್ರವಿಂದ್ ಕುಮಾರ್ ಜುಗ್ನಾಥ್ (Pravind Kumar Jugnauth) ಕೂಡ ಗುಜರಾತ್ ಪ್ರವಾಸ ಹಮ್ಮಿಕೊಂಡಿದ್ದು ಮೋದಿ ಇವರಿಬ್ಬರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಮಾರಿಷಸ್ ಪ್ರಧಾನಿ ಜತೆ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ

ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಸೋಮವಾರ ರಾಜ್‌ಕೋಟ್‌ಗೆ ಆಗಮಿಸಲಿದ್ದಾರೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ. ನಂತರ ವಿದ್ಯಾ ಸಮೀಕ್ಷಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ಈ ಆಧುನಿಕ ಕೇಂದ್ರವು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಡೇಟಾ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ನಾನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರೊಂದಿಗೆ ಸಹ ಸಂವಹನ ನಡೆಸುತ್ತೇನೆ' ಎಂದಿದ್ದಾರೆ.

ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಗೆ ಶಂಕುಸ್ಥಾಪನೆ

ಗಾಂಧಿನಗರ, ಬನಸ್ಕಾಂತ, ಜಾಮ್‌ನಗರ ಮತ್ತು ದಾಹೋದ್‌ ಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಘೆಬ್ರೆಯೆಸಸ್ ಕೂಡ ಮೂರು ದಿನ ಗುಜರಾತ್‌ನಲ್ಲೇ ಇರಲಿದ್ದಾರೆ. ಅವರು ಪ್ರಧಾನಿ ಮೋದಿಯವರೊಂದಿಗೆ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: Corona Virus: ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಕೊರೋನಾಗೆ 40 ಲಕ್ಷ ಭಾರತೀಯರ ಸಾವು: ರಾಹುಲ್ ಗಾಂಧಿ ಗಂಭೀರ ಆರೋಪ

ಜಾಮ್‌ನಗರದಲ್ಲಿ ಸ್ಥಾಪಿಸಿರುವ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಗೆ ಮಂಗಳವಾರ ಇಬ್ಬರೂ ಸೇರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 'ಈ ಕೇಂದ್ರವು ಮತ್ತಷ್ಟು ಜಾಗತಿಕ ಕ್ಷೇಮಕ್ಕಾಗಿ ಸಾಂಪ್ರದಾಯಿಕ ಔಷಧಿಗಳ ಬಳಕೆಯ ಪ್ರಯತ್ನಗಳಿಗೆ ಬಲವನ್ನು ಸೇರಿಸುತ್ತದೆ' ಎಂದು ಮೋದಿ ಹೇಳಿದ್ದಾರೆ.

ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕ ಉದ್ಘಾಟನೆ

ಇದಲ್ಲದೆ ಬನಸ್ಕಾಂತದಲ್ಲಿ ಮಂಗಳವಾರ 600 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. "ಈ ಎರಡೂ ಯೋಜನೆಗಳು ಸ್ಥಳೀಯ ರೈತರನ್ನು ಸಬಲಗೊಳಿಸುತ್ತವೆ ಮತ್ತು ಕೃಷಿ-ಡೈರಿ ಜಾಗದಲ್ಲಿ ಮೌಲ್ಯವರ್ಧನೆಗೆ ಕೊಡುಗೆ ನೀಡುತ್ತವೆ" ಎಂದು ಪ್ರಧಾನಿ ಹೇಳಿದ್ದಾರೆ.

ಇದೇ ವೇಳೆ ಕೃಷಿ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ಪ್ರಮುಖ ವೈಜ್ಞಾನಿಕ ಮಾಹಿತಿಯನ್ನು ರೈತರಿಗೆ ಒದಗಿಸಲು ಸ್ಥಾಪಿಸಲಾದ ಬನಾಸ್ ಸಮುದಾಯ ರೇಡಿಯೋ ಕೇಂದ್ರವನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ. “ರೇಡಿಯೋ ಕೇಂದ್ರವು ಸುಮಾರು 1,700 ಹಳ್ಳಿಗಳ 5 ಲಕ್ಷಕ್ಕೂ ಹೆಚ್ಚು ರೈತರೊಂದಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ  ತಿಳಿಸಿದೆ.

ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಭಾಗಿ

ಬುಧವಾರ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಯುವ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಅಲ್ಲದೆ ಇಲ್ಲಿನ ಕಮಾಂಡೋ ಶಾಲೆಗಳು ಮತ್ತು ಕಂಟ್ರೋಲ್ ಸೆಂಟರ್‌ಗೆ ಭೇಟಿ ನೀಡಲಿದ್ದಾರೆ. "ಕೇಂದ್ರವು ವಾರ್ಷಿಕವಾಗಿ 500 ಕೋಟಿ ಡೇಟಾ ಸೆಟ್‌ಗಳನ್ನು ಸಂಗ್ರಹಿಸುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಒಟ್ಟಾರೆ ಕಲಿಕಾ ಫಲಿತಾಂಶಗಳನ್ನು ಹೆಚ್ಚಿಸಲು ದೊಡ್ಡ ಡೇಟಾ ಅನಾಲಿಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಂಡು ಅವುಗಳನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸುತ್ತದೆ" ಎಂದು ಪಿಎಂಒ ಹೇಳಿದೆ.

ಇದನ್ನೂ ಓದಿ: PM ನರೇಂದ್ರ ಮೋದಿ ಅವರಿಗೆ ಪ್ರಥಮ ವರ್ಷದ 'ಲತಾ ದೀನನಾಥ ಮಂಗೇಶ್ಕರ್' ಪ್ರಶಸ್ತಿ; ಇನ್ನೂ ಹಲವು ಸಾಧಕರಿಗೆ ಗೌರವ

ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗಿ


ಇದಾದ ಮೇಲೆ ದಾಹೋದ್‌ನಲ್ಲಿ ಪ್ರಧಾನಮಂತ್ರಿಯವರು ಆದಿಜಾತಿ ಮಹಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಮತ್ತು ಸುಮಾರು 22,000 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ಪಾದನಾ ಘಟಕದಲ್ಲಿ 9,000 ಎಚ್‌ಪಿ ಎಲೆಕ್ಟ್ರಿಕ್ ಲೋಕೋಮೋಟಿವ್‌ಗಳ ತಯಾರಿಕೆಗೆ ಅವರು ಅಡಿಪಾಯ ಹಾಕಲಿದ್ದಾರೆ.
Published by:Annappa Achari
First published: