PM Museum: ಏಪ್ರಿಲ್​ 14ಕ್ಕೆ ಪ್ರಧಾನ ಮಂತ್ರಿ ಸಂಗ್ರಹಾಲಯ ಉದ್ಘಾಟನೆ; ಇಲ್ಲಿದೆ ಇದರ ವಿಶೇಷತೆ

ದೇಶದ ಆಡಳಿತಕ್ಕೆ ಕೊಡುಗೆ ನೀಡಿದ 14 ಪ್ರಧಾನಿಗಳ ಕಾರ್ಯ ವೈಖರಿ ಬಗ್ಗೆ ಹೆಮ್ಮೆ ಪಡುವುದು ಈ ಯೋಜನೆಯ ಗುರಿಯಾಗಿದೆ.

Photo Credit - tehelka

Photo Credit - tehelka

  • Share this:
    ದೇಶಕ್ಕೆ ಕೊಡುಗೆ ನೀಡಿದ 14 ಪ್ರಧಾನ ಮಂತ್ರಿಗಳು (Prime Minister) ಕೊಡುಗೆ ಸ್ಮರಿಸಲು ಎನ್​ಡಿಎ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕಾಗಿ ದೆಹಲಿಯ ನೆಹರೂ ಮ್ಯೂಸಿಯಂನಲ್ಲಿ ಪ್ರಧಾನ ಮಂತ್ರಿಗಳ ಸಂಗ್ರಹಾಲಯವನ್ನು (PM Museum) ಆರಂಭಿಸಲಿದೆ. ಈ ಸಂಗ್ರಹಾಯಲದಲ್ಲಿ ದೇಶ ಆಡಳಿತ ನಡೆಸಿದ 14 ಪ್ರಧಾನ ಮಂತ್ರಿಗಳ ಕುರಿತು ಮಾಹಿತಿ ಸಿಗಲಿದೆ. ಇದೇ ಏಪ್ರಿಲ್​ 14ರಂದು (April 14) ಈ ಪ್ರಧಾನ ಮಂತ್ರಿ ಸಂಗ್ರಹಾಲಯ ಉದ್ಘಾಟನೆ ಮಾಡಲಾಗುವುದು ಎಂದು ಬಿಜೆಪಿ (BJP) ಮಾಹಿತಿ ನೀಡಿದೆ.

    ಅಂಬೇಡ್ಕರ್​​ ಮ್ಯೂಸಿಯಂ ಕೂಡ ಉದ್ಘಾಟನೆ
    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್​ 14 ರಂದು ಡಾ ಅಂಬೇಡ್ಕರ್​ ಮ್ಯೂಸಿಯಂಗೆ ತೆರಳುವಂತೆ ಸೂಚಿಸಿದ್ದಾರೆ. ಅಂಬೇಡ್ಕರ್​ ಜಯಂತಿಯಂದು ದೆಹಲಿಯಲ್ಲಿ ಅಂಬೇಡ್ಕರ್​ ಮ್ಯೂಸಿಯಂ ಉದ್ಘಾಟನೆಗೊಳ್ಳಲಿದೆ.

    ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ
    ಬಿಜೆಪಿ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಬಿಜೆಪಿ ಹಲವು ಕಾರ್ಯಕ್ರಮ ರೂಪಿಸಿದೆ.  ಏಪ್ರಿಲ್ 6 ರಿಂದ ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನದ ದಿನವಾದ ಏಪ್ರಿಲ್ 14ರ ವರೆಗೆ ಬಿಜೆಪಿಯಿಂದ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರಕ್ತದಾನ ಶಿಬಿರಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿ ಕಾರ್ಯಕ್ರಮಗಳೂ ನಡೆಯಲಿವೆ.

    ಇಂದು ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಈ ಕಾರ್ಯಕ್ರಮಗಳ ಚರ್ಚೆ ನಡೆಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಹಲವು ಸೂಚನೆ ನೀಡಲಾಗಿದೆ, ಸಭೆಯಲ್ಲಿ ರಕ್ತದಾನ ಶಿಬಿರಗಳು ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕಾದ ಪಕ್ಷದ ಮುಂಬರುವ ಸಂಸ್ಥಾಪನಾ ದಿನದ ಕಾರ್ಯಕ್ರಮಗಳ ಕುರಿತು ಜೆಪಿ ನಡ್ಡಾ ಚರ್ಚಿಸಿದರು.

    BJP ಸಂಸದರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಿದ್ದಕ್ಕಾಗಿ ಪ್ರಧಾನ ಮಂತ್ರಿಯನ್ನು ಅಭಿನಂದಿಸುವ ನಿರ್ಣಯವನ್ನು ಅಂಗೀಕರಿಸಿದರು.

    ಉದ್ಘಾಟನೆಗೆ ಸಿದ್ಧವಾಗಿದೆ ಸಂಗ್ರಹಾಲಯ
    ದೆಹಲಿಯ ತೀನ್ ಮೂರ್ತಿ ಎಸ್ಟೇಟ್‌ನಲ್ಲಿ ವ ಪ್ರಧಾನ ಮಂತ್ರಿ ಸಂಗ್ರಹಾಲಯ ಸಿದ್ಧವಾಗಿದೆ. ಇದು 14 ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಇಲ್ಲಿ ಪ್ರದರ್ಶಿಸಲಾಗುವುದು. ಆದರೆ ಜವಾಹರಲಾಲ್ ನೆಹರು ಅವರ ಸಂಗ್ರಹಗಳು ಮತ್ತು ಕೃತಿಗಳು ಮಾತ್ರ ಈಗಿರುವ ನೆಹರು ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಉಳಿಯಲಿವೆ.

    ಇದನ್ನು ಓದಿ: PM Awas Yojana ಅಡಿ ಇದೆ 2 ಕೋಟಿ ಮಹಿಳೆಯರಿಗೂ ಮಾಲೀಕತ್ವದ ಹಕ್ಕು

    2018 ರಲ್ಲಿ 270 ಕೋಟಿ ರೂನ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತು. 2020ರಲ್ಲಿ ಈ ಯೋಜನೆ ಮುಕ್ತಾಯಗೊಳ್ಳಬೇಕಿತು. ಆದರೆ, ಕೋವಿಡ್​ ಪರಿಣಾಮದಿಂದಾಗಿ ಈ ಯೋಜನೆ ವಿಳಂಬ ಆಯಿತು.

    ಏನಿದರ ವಿಶೇಷತೆ
    ದೇಶದ ಆಡಳಿತಕ್ಕೆ ಕೊಡುಗೆ ನೀಡಿದ ಪ್ರಧಾನಿಗಳ ಕಾರ್ಯ ವೈಖರಿ ಬಗ್ಗೆ ಹೆಮ್ಮೆ ಪಡುವುದು ಈ ಯೋಜನೆಯ ಗುರಿಯಾಗಿದೆ. ಇಲ್ಲಿ ಪ್ರಧಾನಿಗಳ ಫೋಟೋಗಳು, ಭಾಷಣಗಳು, ವೀಡಿಯೊ ತುಣುಕುಗಳು, ಪತ್ರಿಕೆಗಳು, ಸಂದರ್ಶನಗಳು ಮತ್ತು ಮೂಲ ಬರಹಗಳನ್ನು ಕಾಣಬಹುದಾಗಿದೆ.

    ಇದನ್ನು ಓದಿ : ಎರಡನೇ ಮದುವೆಗೆ ಸಜ್ಜಾದ 2015ರ ಬ್ಯಾಚ್​​ ಐಎಎಸ್​​ ಟಾಪರ್​ Tina Dabi

    ಜೊತೆಗೆ ಅವರ ಕುಟುಂಬಗಳಿಂದ ಸಂಗ್ರಹಿಸಲಾದ ಮಾಜಿ ಪ್ರಧಾನಿಗಳ ವೈಯಕ್ತಿಕ ವಸ್ತುಗಳು, ಕೆಲವು ಸ್ಮರಣೀಯ ಚಿತ್ರಗಳು, ಪತ್ರಗಳು, ಪೆನ್ನುಗಳು ಮತ್ತು ಸೇರಿದಂತೆ ಅನೇಕ ವಸ್ತುಗಳು ಒಳಗೊಂಡಿವೆ. ಪ್ರತಿಯೊಬ್ಬರ ಕಾರ್ಯವನ್ನು ವಿಶೇಷ ಪ್ರಾಮುಖ್ಯತೆಯ ವಿಷಯದಲ್ಲಿ ಗೌರವಯುತವಾಗಿ ಪರಿಗಣಿಸಲಾಗಿದೆ.

    ಭವಿಷ್ಯದ ಪ್ರಧಾನಿಗಳಿಗೂ ಅವಕಾಶ 

    ಸಂಗ್ರಹಾಯಲದಲ್ಲಿ ಡಿಜಿಟಲ್ ಡಿಸ್ಪ್ಲೇಗಳು ಮತ್ತು ವರ್ಚುವಲ್ ರಿಯಾಲಿಟಿ ಮೇಲೆ ಹೆಚ್ಚಿನ ಗಮನನೀಡಲಾಗಿದೆ. ಜೊತೆಗೆ ಭವಿಷ್ಯದ ಪ್ರಧಾನಿಗಳಿಗೂ ಅವಕಾಶ ಕಲ್ಪಿಸುವ ರೀತಿಯಲ್ಲಿ ವಸ್ತುಸಂಗ್ರಹಾಲಯವನ್ನು ವಿನ್ಯಾಸಗೊಳಿಸಲಾಗಿದೆ.

    ವಸ್ತುಸಂಗ್ರಹಾಲಯವು ನೆಲಮಾಳಿಗೆ, ನೆಲಮಹಡಿ ಮತ್ತು ಮೊದಲ ಮಹಡಿಯನ್ನು ಹೊಂದಿದೆ, ಎಲ್ಲಾ ಮೂರು ಹಂತಗಳಲ್ಲಿ ಗ್ಯಾಲರಿಗಳನ್ನು ಹೊಂದಿದೆ. ಅಶೋಕ ಚಕ್ರದ ಆಕಾರದಲ್ಲಿ ನಿರ್ಮಿಸಲಾದ ಮೇಲಿನ ಮಹಡಿಯಿಂದ ಪ್ರವೇಶದ್ವಾರವಿರಲಿದೆ.
    Published by:Seema R
    First published: