ದೆಹಲಿಯಲ್ಲಿ ಪ್ರಧಾನಿ ಮೋದಿ ಅಣ್ಣನ ಮಗಳ ಪರ್ಸ್​ ಕದ್ದು ಪರಾರಿಯಾದ ಖದೀಮರು

ಇಂದು ಬೆಳಗ್ಗೆ ನಾನು ದೆಹಲಿಯ ಗುಜರಾತ್ ಸಮಾಜ ಭವನ್​ಗೆ ಬಂದಿದ್ದೆ. ಇಂದು ಸಂಜೆಯೇ ಗುಜರಾತ್​ಗೆ ತೆರಳಲು ವಿಮಾನದ ಟಿಕೆಟ್​ ಕೂಡ ಬುಕ್​ ಆಗಿತ್ತು. ವಿಮಾನ ನಿಲ್ದಾಣಕ್ಕೆ ತೆರಳಲು ಆಟೋ ರಿಕ್ಷಾಗಾಗಿ ಕಾಯುತ್ತಿದ್ದಾಗ ನನ್ನನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ನನ್ನ ಪರ್ಸ್ ಕದ್ದು ಪರಾರಿಯಾಗಿದ್ದಾರೆ ಎಂದು ದಮಯಂತಿ ಬೆನ್ ಮೋದಿ ಹೇಳಿದ್ದಾರೆ.

HR Ramesh | news18-kannada
Updated:October 12, 2019, 10:43 PM IST
ದೆಹಲಿಯಲ್ಲಿ ಪ್ರಧಾನಿ ಮೋದಿ ಅಣ್ಣನ ಮಗಳ ಪರ್ಸ್​ ಕದ್ದು ಪರಾರಿಯಾದ ಖದೀಮರು
ಪ್ರಧಾನಿ ಮೋದಿ ಅವರ ಅಣ್ಣನ ಮಗಳಾದ ದಮಯಂತಿ ಬೆನ್ ಮೋದಿ
  • Share this:
ನವದೆಹಲಿ: ರಾಜಧಾನಿ ದೆಹಲಿಯ ಸಿವಿಲ್ ಲೈನ್ಸ್​ ಸಮೀಪ ಖದೀಮರು ಯುವತಿಯೊಬ್ಬರ ಪರ್ಸ್​ ಕಸಿದು ಪರಾರಿಯಾಗಿರುವ ಘಟನೆ ಇಂದು ನಡೆದಿದೆ. ಅಷ್ಟಕ್ಕೂ ಈ ಪರ್ಸ್ ಕಳೆದುಕೊಂಡವರು ಬೇರೆ ಯಾರು ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಸೋದರ ಸೊಸೆ (ಸಹೋದರನ ಮಗಳು).  

ದೆಹಲಿಯ ಸಿವಿಲ್​ ಲೈನ್​ ಸಮೀಪದ ಗುಜರಾತಿ ಸಮಾಜ ಭವನ್​ದ ಗೇಟ್​ ಬಳಿ ಸಂಜೆ 7ರ ಸಮಯದಲ್ಲಿ ನಿಂತಿದ್ದ ಪ್ರಧಾನಿ ಮೋದಿ ಅವರ ಅಣ್ಣನ ಮಗಳಾದ ದಮಯಂತಿ ಬೆನ್​ ಮೋದಿ ಅವರ ಪರ್ಸ್ಅನ್ನು ಎರಡು ಬೈಕ್​ಗಳಲ್ಲಿ ಬಂದ ದುಷ್ಕರ್ಮಿಗಳು​ ಕಸಿದು ಪರಾರಿಯಾಗಿದ್ದಾರೆ.

ವರದಿಗಳ ಪ್ರಕಾರ, ಮಹಿಳೆ ಆಟೋರಿಕ್ಷಾಗಾಗಿ ಗೇಟ್​ ಬಳಿ ಕಾಯುತ್ತಿದ್ದಾಗ ಬೈಕ್​ಗಳಲ್ಲಿ ಬಂದ ದುಷ್ಕರ್ಮಿಗಳು ಆಕೆಯ ಬ್ಯಾಗ್​ ಕಸಿದು ಪರಾರಿಯಾಗಿದ್ದಾರೆ. ಪರ್ಸ್​ನಲ್ಲಿ 50 ಸಾವಿರ ನಗದು ಹಾಗೂ ಎರಡು ಮೊಬೈಲ್​ ಫೋನ್​ಗಳು ಹಾಗೂ ಮುಖ್ಯವಾದ ದಾಖಲೆಗಳು ಇದ್ದವು ಎನ್ನಲಾಗಿದೆ.

ಕಳ್ಳತನದ ಬಗ್ಗೆ ದಮಯಂತಿ ಬೆನ್ ಮೋದಿ ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ, ಇಬ್ಬರು ಖದೀಮರ ಗುರುತು ಪತ್ತೆಯಾಗಿದೆ. ದೆಹಲಿ ಪೊಲೀಸ್ ಕಮಿಷನರ್​ ಪಿಆರ್​ಒ ಮನದೀಪ್​ ಸಿಂಗ್ ರಾಂಧವಾ ಮಾತನಾಡಿ, ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಕಳ್ಳತನ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನು ಓದಿ: ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

ಇಂದು ಬೆಳಗ್ಗೆ ನಾನು ದೆಹಲಿಯ ಗುಜರಾತ್ ಸಮಾಜ ಭವನ್​ಗೆ ಬಂದಿದ್ದೆ. ಇಂದು ಸಂಜೆಯೇ ಗುಜರಾತ್​ಗೆ ತೆರಳಲು ವಿಮಾನದ ಟಿಕೆಟ್​ ಕೂಡ ಬುಕ್​ ಆಗಿತ್ತು. ವಿಮಾನ ನಿಲ್ದಾಣಕ್ಕೆ ತೆರಳಲು ಆಟೋ ರಿಕ್ಷಾಗಾಗಿ ಕಾಯುತ್ತಿದ್ದಾಗ ನನ್ನನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು ನನ್ನ ಪರ್ಸ್ ಕದ್ದು ಪರಾರಿಯಾಗಿದ್ದಾರೆ ಎಂದು ದಮಯಂತಿ ಬೆನ್ ಮೋದಿ ಹೇಳಿದ್ದಾರೆ.

First published: October 12, 2019, 10:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading