ಪ್ರಧಾನಿಯಾಗಿ ನಾಳೆ ಕೆಂಪುಕೋಟೆಯಲ್ಲಿ ಮೋದಿ ಕೊನೆಯ ಭಾಷಣ

news18
Updated:August 14, 2018, 11:59 AM IST
ಪ್ರಧಾನಿಯಾಗಿ ನಾಳೆ ಕೆಂಪುಕೋಟೆಯಲ್ಲಿ ಮೋದಿ ಕೊನೆಯ ಭಾಷಣ
news18
Updated: August 14, 2018, 11:59 AM IST
ನ್ಯೂಸ್​18 ಕನ್ನಡ

ನವದೆಹಲಿ (ಆ. 14): ನಾಳೆ ಮುಂಜಾನೆ ಕೆಂಪುಕೋಟೆಯಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಕೊನೆಯ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಲಿದ್ದಾರೆ.ಈ ಬಾರಿಯ ಭಾಷಣದಲ್ಲಿ ಕಳೆದ ವರ್ಷಗಳಂತೆ ಯೋಜನೆಗಳ ಘೋಷಣೆಗಿಂತ ಹೆಚ್ಚಾಗಿ ರಾಜಕೀಯಕ್ಕೆ ಆದ್ಯತೆ ನೀಡುವ ಸಾಧ್ಯತೆಯಿದೆ.

ಈ ನಾಲ್ಕು ವರ್ಷಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನ, ಮೇಕ್​ ಇನ್​ ಇಂಡಿಯಾ, ಸ್ಟಾರ್ಟ್​ ಅಪ್​ ಮತ್ತು ಸ್ಟಾಂಡ್​ ಅಪ್​ ಇಂಡಿಯಾ, ಗ್ರಾಮಗಳಿಗೆ ವಿದ್ಯುತ್​ನಂತಹ ಹಲವು ಪ್ರಮುಖ ಮತ್ತು ವಿಶೇಷವಾದ ಯೋಜನೆಗಳನ್ನು ಘೋಷಿಸಿದ್ದರು. ಈ ಬಾರಿಯ ಭಾಷಣ ಅವರ ಅಧಿಕಾರಾವಧಿಯ ಕೊನೆಯ ಭಾಷಣವಾಗಿರುವುದರಿಂದ ನಿರೀಕ್ಷೆಗಳೂ ಸಾಕಷ್ಟಿವೆ. ಅಲ್ಲದೆ, ಮುಂದಿನ ವರ್ಷ ಲೋಕಸಭೆ ಚುನಾವಣೆ ಇರುವುದರಿಂದ ನಾಳಿನ ಭಾಷಣ ರಾಜಕಾರಣದ ಕಾರಣದಿಂದಲೂ ಪ್ರಾಮುಖ್ಯತೆ ಪಡೆದುಕೊಂಡಿದೆ.

ನಾಳೆ ಮುಂಜಾನೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪ್ರಧಾನಿ ಮಾಡಲಿರುವ ಭಾಷಣದಲ್ಲಿ ಮೋದಿ ಅವರು ಯಾವೆಲ್ಲ ವಿಷಯಗಳನ್ನು ಮಾತನಾಡಲಿದ್ದಾರೆ ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಕಳೆದ ನಾಲ್ಕು ಭಾಷಣಗಳನ್ನು ಅವಲೋಕಿಸಿದರೆ ಈ ಬಾರಿಯೂ ಕೃಷಿ, ರೈತರು, ಜಾತೀಯತೆ, ಕಪ್ಪುಹಣ ಮತ್ತು ನೂತನ ಆರ್ಥಿಕ ನೀತಿಯಂತಹ ವಿಷಯಗಳನ್ನು ಮಾತನಾಡುವ ಸಾಧ್ಯತೆಯಿದೆ.

ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ:
2014ರ ಸ್ವಾತಂತ್ರ್ಯೋತ್ಸವದಂದು ಮೋದಿ ಮಾಡಿದ ಮೊದಲ ಭಾಷಣದಲ್ಲಿ 'ಪ್ರಧಾನ ಸೇವಕ'ನಾಗಿ ಮಾತನಾಡಿದ್ದರು. ಕೆಂಪುಕೋಟೆಯಲ್ಲಿ ಶೌಚಾಲಯ, ಕಸದ ಬಗ್ಗೆ ಮಾತನಾಡಿದ್ದ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆ ಯೋಜನೆ ದೇಶಾದ್ಯಂತ ಬಹಳ ಯಶಸ್ವಿಯಾಗಿದ್ದು ಮಾತ್ರವಲ್ಲದೆ ಸರ್ಕಾರಕ್ಕೆ ಉತ್ತಮ ಹೆಸರನ್ನೂ ತಂದುಕೊಟ್ಟಿತು. ಸಂಸದರ ಆದರ್ಶ ಗ್ರಾಮ ಯೋಜನೆ ಘೋಷಣೆ ಮಾಡುವ ಮೂಲಕ ಸಂಸದರು ತಮ್ಮ ಅಧಿಕಾರಾವಧಿ ಮುಗಿಸುವಷ್ಟರಲ್ಲಿ ಕನಿಷ್ಠ 5 ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಪರಿವರ್ತಿಸಬೇಕೆಂಬ ಗುರಿಯನ್ನು ಹೊಂದಿರುವುದಾಗಿ ಹೇಳಿದ್ದರು. ಜನಧನ ಯೋಜನೆ, ಮೇಕ್​ ಇನ್​ ಇಂಡಿಯಾ, ಡಿಜಿಟಲ್​ ಇಂಡಿಯಾ ಈ ವೇಳೆ ಘೋಷಣೆಯಾದ ಯೋಜನೆಗಳು.

2015ರ ಆಗಸ್ಟ್​ 15ರಂದು 18,500 ಹಳ್ಳಿಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸುವ ಯೋಜನೆ ಘೋಷಿಸಿದ್ದರು. ಕಿಸಾನ್​ ಕಲ್ಯಾಣ ಮಂತ್ರಾಲಯ, ಸ್ಟಾರ್ಟ್​ ಅಪ್​ ಇಂಡಿಯಾ, ಸ್ಟಾಂಡ್​ ಅಪ್​ ಇಂಡಿಯಾ, ಒನ್​ ರ್ಯಾಂಕ್​ ಒನ್​ ಪೆನ್ಷನ್​ ಯೋಜನೆಗಳು ಘೋಷಣೆಯಾಯಿತು.
Loading...

2016ರಲ್ಲಿ ಗ್ರಾಮಗಳಿಗೆ ರಸ್ತೆ ಕಾಮಗಾರಿ, ಚಬಾಹರ್​ ಕೋಟೆಯ ಅಭಿವೃದ್ಧಿ, ಹಣದುಬ್ಬರ ಮತ್ತು ಬಡಜನರ ಊಟದ ಬಗ್ಗೆ ಮಾತನಾಡಿದ್ದರು. ದೇಶದಲ್ಲಿ ಆರ್ಥಿಕ ಸಮಾನತೆ ಮಾತ್ರವಲ್ಲದೆ ಸಾಮಾಜಿಕ ಸಮಾನತೆಯೂ ಮುಖ್ಯ. ಹಾಗಾಗಿ, ಜಾತೀಯತೆಯನ್ನು ಹೋಗಲಾಡಿಸಬೇಕು ಎಂದಿದ್ದರು.

2017ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮೋದಿ ಉತ್ತರ ಪ್ರದೇಶದ ಗೋರಖ್​ಪುರ ಆಸ್ಪತ್ರೆ ದುರಂತದ ಬಗ್ಗೆ ಪ್ರಸ್ತಾಪಿಸಿದ್ದರು. 2022ರ ನೂತನ ಭಾರತ ನಿರ್ಮಾಣಕ್ಕೆ ಪಣತೊಡಬೇಕು ಎಂದಿದ್ದರು. ಭಯೋತ್ಪಾದನೆ, ಭ್ರಷ್ಟಾಚಾರ, ಗೋಹತ್ಯೆ ವಿರುದ್ಧ ಧ್ವನಿಯೆತ್ತಿದ್ದರು.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...