UNGA ನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣವೇ ವಿಶ್ವಕ್ಕೆ ಸಂದೇಶವಾಗಿದೆ; ಯುಎನ್ ರಾಯಭಾರಿ ತಿರುಮೂರ್ತಿ

ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಹಂತಗಳ ಕುರಿತು ಮೋದಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಇಂಧನ ಕೊಡುಗೆ ಹಾಗೂ ಗ್ರೀನ್ ಹೈಡ್ರೋಜನ್ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.

ಯುಎನ್ ಭಾರತೀಯ ರಾಯಭಾರಿ ತಿರುಮೂರ್ತಿ.

ಯುಎನ್ ಭಾರತೀಯ ರಾಯಭಾರಿ ತಿರುಮೂರ್ತಿ.

  • Share this:
ವಿಶ್ವಸಂಸ್ಥೆಯ (United Nation) ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ವೈಯಕ್ತಿಕವಾಗಿ ಮಾಡಿದ ಭಾಷಣವು ಒಂದು ಸಂದೇಶವನ್ನು ಸಾರುತ್ತಿದೆ ಎಂದು ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿ ಟಿಎಸ್ ತಿರುಮೂರ್ತಿ (TS Tirumurti) ತಿಳಿಸಿದ್ದಾರೆ. 70 ದೇಶಗಳ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದು ಮೋದಿಯವರು ಮಾಡಿದ ಭಾಷಣದಿಂದ ತಿಳಿದು ಬಂದ ಅಂಶವೇನೆಂದರೆ ಅತಿದೊಡ್ಡ ಪ್ರಜಾಪ್ರಭುತ್ವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಹೊರಹೊಮ್ಮಿರುವ ಪ್ರಧಾನಿಯವರು, ವಿಶ್ವಸಂಸ್ಥೆಗೆ ಭಾರತದ ಬೆಂಬಲವಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ. 

ಮೋದಿಯವರು 2014 ರಿಂದ ನಾಲ್ಕನೇ ಬಾರಿಗೆ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡುತ್ತಿದ್ದು, ಭಾಷಣದ ಸಮಯದಲ್ಲಿ ಅವರು ಪ್ರಸ್ತಾವಿಸಿದ ಅಂಶಗಳು ಕೋವಿಡ್-19 ಬಿಕ್ಕಟ್ಟು, ಹವಾಮಾನ ಬದಲಾವಣೆ, ಭಯೋತ್ಪಾದನೆ, ಅಪ್ಘಾನಿಸ್ತಾನದ ಕುರಿತಾಗಿತ್ತು. ಅಮೆರಿಕಾಕ್ಕೆ ಮೂರು ದಿನಗಳ ಪ್ರಧಾನಿಯವರ ಪ್ರವಾಸದ ಕೊನೆಯ ಅಂಶವು ಕ್ವಾಡ್ ಸಭೆ ಹಾಗೂ ಅಧ್ಯಕ್ಷರಾದ ಜೊ ಬೈಡನ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನು ನಡೆಸುವುದಾಗಿದೆ.

ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ಮೇಲೆ ನಡೆಸಿದ ದಬ್ಬಾಳಿಕೆಯ ಅತಿರೇಕ ವರ್ತನೆಗೆ ಪ್ರತಿಕ್ರಿಯಿಸಿದ ಭಾರತದ ರಾಯಭಾರಿ ಸ್ನೇಹಾ ದುಬೆಯವರ ಬಗ್ಗೆ ತಿರುಮೂರ್ತಿಯನ್ನು ಕೇಳಿದಾಗ, ಯುವ ಅಧಿಕಾರಿಗಳಿಗೆ ಉತ್ತರಿಸುವ ಹಕ್ಕನ್ನು ನೀಡುವ ಸಂಪ್ರದಾಯವನ್ನು ನಾವು ಹೊಂದಿದ್ದೇವೆ…ಹಾಗೂ ಅವರಿಗೆ ಉತ್ತರಿಸುವ ನಮ್ಮ ವಿಧಾನ ಸರಿಯಾಗಿಯೇ ಇದೆ ಹೀಗೆಯೇ ದಿಟ್ಟತನದಿಂದ ಮುಂದುವರಿಯಿರಿ ಎಂದು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭಾರತೀಯ ಪ್ರತಿನಿಧಿ ಟಿಎಸ್ ತಿರುಮೂರ್ತಿಯವರನ್ನು ಸಿದ್ಧಾಂತ್ ಸಿಬಲ್ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು ಅವರ ಉತ್ತರ ಇಲ್ಲಿದೆ.

UNGA ಉದ್ದೇಶಿಸಿ 2014 ರಿಂದ ಮೋದಿಯವರು ನೀಡಿರುವ ಅತಿದೊಡ್ಡ ಸಂದೇಶವೇನು ಎಂದು ತಿರುಮೂರ್ತಿಯವರನ್ನು ಕೇಳಿದಾಗ, ನ್ಯೂಯಾರ್ಕ್‌ನಲ್ಲಿ UNGA ನಲ್ಲಿನ ಮೋದಿಯವರ ಉಪಸ್ಥಿತಿಯೇ ಅತಿದೊಡ್ಡ ಸಂದೇಶವಾಗಿದೆ. 70 ಕ್ಕೂ ಹೆಚ್ಚಿನ ವಿಶ್ವ ನಾಯಕರು ವಿಡಿಯೋ ಮೂಲಕ ಮೋದಿಯವರನ್ನು ಭೇಟಿಯಾಗಲು ಒಟ್ಟುಗೂಡುತ್ತಿರುವಾಗ ಮೋದಿಗಿರುವ ವರ್ಚಸ್ಸು ಹಾಗೂ ಶಕ್ತಿಯೇ ಅತಿದೊಡ್ಡ ಸಂದೇಶವಾಗಿದೆ. ಪ್ರಜಾಪ್ರಭುತ್ವವನ್ನು ತಾಯಿಗೆ ಹೋಲಿಸಿ ಅವರು ಕೆಲವೊಂದು ವಿಷಯಗಳನ್ನು ಭಾಷಣದಲ್ಲಿ ಪ್ರಸ್ತುತಪಡಿಸಿದ್ದಾರೆ.

ಆಡಳಿತದ ಕುರಿತು ತಮ್ಮ ದೂರದೃಷ್ಟಿಯನ್ನು ಅವರು ಚರ್ಚಿಸಿದ್ದಾರೆ. ಭಾರತದ ಅಭಿವೃದ್ಧಿಯ ಪ್ರಯಾಣವು ಇತರ ದೇಶಗಳ ಅಭಿವೃದ್ಧಿಯ ಪ್ರಯಾಣ ಎಂಬುದನ್ನು ಸಾರಿ ಹೇಳಿದ್ದಾರೆ. ಅವರು ನೀಡಿದ ಮಹತ್ವದ ಸಂದೇಶವೆಂದರೆ ಭಾರತ ಬೆಳೆದರೆ ಜಗತ್ತು ಬೆಳೆದಂತೆಯೇ ಎಂಬುದು. ಭಾರತವು ಲಸಿಕೆಗಳ ಪೂರೈಕೆಯ ಪುನರಾರಂಭವನ್ನು ಮಾಡಿದ್ದು ಪ್ರಪಂಚದ ಇತರ ಭಾಗಗಳಿಗೆ ತಲುಪಿಸುತ್ತಿದೆ ಎಂಬ ಅಂಶವನ್ನು ಪ್ರಸ್ತಾವಿಸಿದ್ದಾರೆ. ಬೇರೆ ದೇಶಗಳು ಕೂಡ ಲಸಿಕೆಯ ಪೂರೈಕೆಯ ವಿಷಯದಲ್ಲಿ ಭಾರತದ ನೆರವನ್ನು ಸ್ಮರಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ತಿರುಮೂರ್ತಿ ಉಲ್ಲೇಖಿಸಿದರು.

ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಹಂತಗಳ ಕುರಿತು ಮೋದಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಇಂಧನ ಕೊಡುಗೆ ಹಾಗೂ ಗ್ರೀನ್ ಹೈಡ್ರೋಜನ್ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ. ಅಪ್ಘಾನಿಸ್ತಾನದ ಕುರಿತಾಗಿಯೂ ಕೆಲವೊಂದು ಅಂಶಗಳನ್ನು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು ಅಪ್ಘನ್ ನೆಲದ ಮಣ್ಣು ಭಯೋತ್ಪಾದಕರಿಗೆ ಸೇರಬಾರದು ಎಂಬುದಾಗಿ ಸಂದೇಶ ನೀಡಿದರು. ಮಹಿಳಾ ಮಕ್ಕಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಕರೆ ನೀಡಿದರು.

ಪ್ರ: UNSC ಸುಧಾರಣೆಗಳು, ಮುಂದಿರುವ ಯೋಜನೆಗಳು ಹಾಗೂ ಎದುರಿಸಲಿರುವ ಸವಾಲುಗಳೇನು?

ಉ: ಈ ಅಂಶದ ಕುರಿತು ಕೂಡ ತಿರುಮೂರ್ತಿಯವರು ಕೆಲವೊಂದು ಅಂಶಗಳನ್ನು ತಿಳಿಸಿದ್ದು ಭದ್ರತಾ ಮಂಡಳಿಯು ವಿಶ್ವಸಂಸ್ಥೆಯ ಅತ್ಯಂತ ಪ್ರಮುಖ ಅಂಗವಾಗಿದೆ ಆದರೆ ಕಳೆದ 75 ವರ್ಷಗಳಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ. ವಿಶ್ವದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇದು ಕಡಿಮೆ ವಿಶ್ವಾಸಾರ್ಹತೆಯನ್ನು ಗಳಿಸುತ್ತಿದೆ. ಐಜಿಎನ್ ಹೆಸರಿನ ಅಂತರ್ ಸರಕಾರಿ ಸಂಧಾನ ಪ್ರಕ್ರಿಯೆಯಲ್ಲಿ ಚರ್ಚಿಸುವ ಅಂಶಗಳು ವಿಚಾರಗಳು ಬೇರೆ ಯಾವುದನ್ನೂ ತಲುಪುವುದಿಲ್ಲ. ಭದ್ರತಾ ಮಂಡಳಿಯ ಪ್ರಗತಿಗೆ ಹತ್ತು ಹಲವು ಅಡ್ಡಿ ಆತಂಕಗಳು ಉಂಟಾಗುತ್ತಲೇ ಇರುತ್ತದೆ. 75 ನೇ ಅಧಿವೇಶನದಲ್ಲಿ ಭದ್ರತಾ ಮಂಡಳಿಯ ಸುಧಾರಣೆಗೆ ದೃಢ ಸಂಕಲ್ಪವನ್ನು ಹೊಂದಿದ್ದೇವೆ. ನಮ್ಮ ನಿರ್ಣಯಕ್ಕೆ ಪ್ರತಿಯೊಬ್ಬರೂ ಬದ್ಧರಾಗಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ತಿರುಮೂರ್ತಿ ತಿಳಿಸಿದ್ದಾರೆ.

ಪ್ರ: ಶಾಂತಿ ಪಾಲನೆಯಲ್ಲಿ ಭಾರತದ ಪಾತ್ರವೇನು? ಈ ಕುರಿತು ವಿವರಗಳನ್ನು ನೀಡಬಹುದೇ?

ಉ: ಶಾಂತಿ ಪಾಲನೆಯಲ್ಲಿ ಭಾರತದ ಪಾತ್ರ ಅತ್ಯಂತ ಹಿರಿದಾದುದು. ನಾವೇ ಪ್ರಮುಖ ಕೊಡುಗೆದಾರರಾಗಿರುವೆವು. ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ನಾವು 250,000 ಸೈನಿಕರ ಕೊಡುಗೆಯನ್ನು ನೀಡಿದ್ದೇವೆ. 174 ಹುತಾತ್ಮರನ್ನು ಶಾಂತಿ ಪಾಲನೆಯಲ್ಲಿ ಕಳೆದುಕೊಂಡಿರುವೆವು. ಹೀಗಾಗಿ ಭಾರತ ಅತ್ಯಂತ ಮಹತ್ವದ ಪಾತ್ರವನ್ನು ಪಡೆದುಕೊಂಡಿದೆ. ನಾವು ಶಾಂತಿ ಪಾಲನೆಗಾಗಿ ನಮ್ಮ ರಕ್ತವನ್ನು ನೀಡಿದ್ದೇವೆ ಮತ್ತು ಅದಕ್ಕಾಗಿಯೇ ನಾವು ನಮ್ಮ ಅಧ್ಯಕ್ಷತೆಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಕಾರ್ಯಕ್ರಮವನ್ನು ಹೊಂದಿರಬೇಕು ಎಂದು ಭಾವಿಸಿದೆವು.

ಶಾಂತಿ ಕಾಪಾಡುವವರ ವಿರುದ್ಧ ಅನ್ಯಾಯ ಹಾಗೂ ಅಕ್ರಮಗಳು ನಡೆಯುತ್ತಿವೆ ಇದನ್ನು ತಡೆಯುವ ಉದ್ದೇಶದಿಂದ 40 ವರ್ಷಗಳ ನಂತರ ಭಾರತ ಇದೇ ಮೊದಲ ಬಾರಿಗೆ ಭದ್ರತಾ ಮಂಡಳಿಯಲ್ಲಿ ತನ್ನ ನಿರ್ಣಯ ಮಂಡಿಸಿದೆ. ಈ ನಿರ್ಣಯವನ್ನು ಭದ್ರತಾ ಮಂಡಳಿಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಪ್ರಪಂಚದಾದ್ಯಂತ ನಾವು 200,000 ಲಸಿಕೆಗಳನ್ನು ಶಾಂತಿ ಪಾಲಕರಿಗೆ ದಾನವಾಗಿ ಒದಗಿಸಿದ್ದೇವೆ.2 ಆಸ್ಪತ್ರೆಗಳನ್ನು ಉನ್ನತೀಕರಿಸಿದ್ದು ಒಂದು ದಕ್ಷಿಣ ಸುಡಾನ್‌ನಲ್ಲಿ ಹಾಗೂ ಇನ್ನೊಂದು ಡಿಆರ್‌ಸಿ ಕಾಂಗೋದಲ್ಲಿ. ಶಾಂತಿಪಾಲನೆಯ ಸಂದರ್ಭದಲ್ಲಿ ನಮ್ಮಿಂದ ಆಗುವಷ್ಟು ಉನ್ನತ ಕಾರ್ಯಗಳನ್ನು ನಡೆಸಲು ಬದ್ಧರಾಗಿದ್ದೇವೆ.

ಇದನ್ನೂ ಓದಿ: UNGC: ಭಯೋತ್ಪಾದನೆಯನ್ನು ರಾಜಕೀಯ ದಾಳವಾಗಿ ಬಳಕೆ; ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್​ಗೆ ಮೋದಿ ತಿರುಗೇಟು

ಪ್ರ :ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸಾಮಾನ್ಯ ಸಭೆಯಲ್ಲಿ ಉತ್ತರಿಸಿದ ಸ್ನೇಹಾ ದುಬೆ ಎಂಬ ಯುವ ರಾಜತಾಂತ್ರಿಕರನ್ನು ನೀವು ಆಯ್ಕೆ ಮಾಡಿದ್ದೀರಿ. ಇದು ಸಂಪ್ರದಾಯದ ಮುಂದುವರಿಕೆಯಾಗಿದೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ಉ: ಯುವ ಅಧಿಕಾರಿಗಳಿಗೆ ಉತ್ತರಿಸುವ ಹಾಗೂ ಪ್ರಶ್ನಿಸುವ ಹಕ್ಕಿರುವ ಸಂಪ್ರದಾಯವನ್ನು ನಾವು ಹೊಂದಿದ್ದೇವೆ. ಯುವ ಅಧಿಕಾರಿಗಳೇ ಇಂದು ಮುಂದೆ ಬಂದು ಪ್ರಬಲ ಸಂದೇಶವನ್ನು ನೀಡಬೇಕು ಹಾಗೂ ಆತ್ಮವಿಶ್ವಾಸದಿಂದ ಸಂವಹನ ನಡೆಸಬೇಕು ಎಂದು ನಾವು ಬಯಸುತ್ತೇವೆ. ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು ಆದ್ದರಿಂದಲೇ ನಾವು ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಹಾಗೂ ಪ್ರೋತ್ಸಾಹಿಸುತ್ತೇವೆ.
Published by:MAshok Kumar
First published: