ಮೋದಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು; ಮನಮೋಹನ್ ಸಿಂಗ್
news18
Updated:September 7, 2018, 10:37 PM IST
news18
Updated: September 7, 2018, 10:37 PM IST
ನ್ಯೂಸ್ 18 ಕನ್ನಡ
ದೆಹಲಿ(ಸೆ.7): ಉದ್ಯೋಗ ಭರವಸೆ ಸೇರಿದಂತೆ ಅನೇಕ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಯಾವುದೇ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.
ಸಿಬಲ್ ಅವರ ಪುಸ್ತಕ ಬಿಡುಗಡೆ ಸಮಾರಂಭ ವೇದಿಕೆಯನ್ನು ಇಬ್ಬರು ನಾಯಕರು ರಾಜಕೀಯ ವಾಗ್ದಾಳಿಗೆ ಬಳಸಿಕೊಂಡರು.
ಆತುರಾತುರಾವಾಗಿ ಮೋದಿ ಜಿಎಸ್ಟಿ ಜಾರಿಗ ತಂದಿದ್ದರ ಪರಿಣಾಮ ಉದ್ಯಮಗಳ ಮೇಲೆ ಹಾನಿ ಉಂಟಾಯಿತು. ನಿರುದ್ಯೋಗ, ನೋಟು ಅಮಾನ್ಯೀಕರಣಕರಣದಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ.ನಮ್ಮ ಯುವಜನತೆ ಮೋದಿ ಭರವಸೆ ನೀಡಿದ 2 ಕೋಟಿ ಉದ್ಯೋಗಕ್ಕಾಗಿ ಕಾದು ಕುಳಿತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಉದ್ಯೋಗ ಬೆಳವಣಿಗೆ ಕುಸಿತದ ಹಾದಿ ತಲುಪಿದೆ ಎಂದು ಟೀಕಿಸಿದರು.
ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ ಅವರು, ಇಲ್ಲಿಯವರೆಗೂ ಯಾವುದೇ ಕಪ್ಪು ಹಣ ದೇಶಕ್ಕೆ ಹಿಂದಿರುಗಿಲ್ಲ. ವಿದೇಶದಿಂದ ಕಪ್ಪು ಹಣ ಹಿಂತರುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮೋದಿ ಕೃಷಿ ಬಿಕ್ಕಟ್ಟು ಪರಿಹಾರ ಮಾದೇ ಅವರೆಡೆಗೆ ಉದಾಸೀನವನ್ನು ತೋರಿದ್ದಾರೆ, ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯೂ ಸಿಗಲಿಲ್ಲ. ವಿದೇಶಿ ನೀತಿ ವಿಷಯದಲ್ಲಿಯೂ ಮೋದಿ ನೆರೆ ಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ 2014ರಲ್ಲಿದ್ದ ಸ್ಥಿತಿಗಿಂತ ಈಗ ಕೆಟ್ಟದಾಗಿದೆ. ವಿದೇಶಿಗಳೊಂದಿಗಿನ ಸಂಬಂಧ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವದಲ್ಲಿ ಜನರ ಸುರಕ್ಷತೆಯನ್ನು ಕಾಪಾಡಬೇಕಿ ಆದರೆ ಸಾಂಸ್ಥಿಕ ಸ್ವಾತಂತ್ರವನ್ನು ಹರಣ ಮಾಡುತ್ತಿದ್ದಾರೆ. ಇದರ ಬಗ್ಗೆ ನಾವು ರಾಷ್ಟ್ರೀಯ ಚರ್ಚೆ ನಡೆಯಬೇಕಿದೆ. ಪರ್ಯಾಯ ನಿರೂಪಣೆ ಮತ್ತು ಅಧ್ಯಯನದ ಅವಶ್ಯಕತೆ ದೇಶಕ್ಕೆ ಇದೆ ಎಂದರು
ನೋಟ್ ಬ್ಯಾನ್ ಬಗ್ಗೆ ಮಾತನಾಡಿದ ಸಿಬಲ್ ನಾಲ್ಕು ವರ್ಷದ ತಮ್ಮ ಆಡಳಿತ ಅವಧಿಯಲ್ಲಿ ಮೋದಿ ಯಾವ ಆರ್ಥಿಕ ಅಭಿವೃದ್ಧಿ ಮತ್ತು ಉದಾರೀಕರಣ ಮಾಡಿದರು. ಬೇರೆ ರಾಷ್ಟ್ರದಲ್ಲಿಯಾಗಿದ್ದರೆ ಅವರು ರಾಜೀನಾಮೆ ನೀಡಿ ಸ್ಥಾನದಿಂದ ಕೆಳಗಿಳಿಯಬೇಕಿತ್ತು ಎಂದರು.
ದೆಹಲಿ(ಸೆ.7): ಉದ್ಯೋಗ ಭರವಸೆ ಸೇರಿದಂತೆ ಅನೇಕ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಯಾವುದೇ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ವಾಗ್ದಾಳಿ ನಡೆಸಿದ್ದಾರೆ.
ಸಿಬಲ್ ಅವರ ಪುಸ್ತಕ ಬಿಡುಗಡೆ ಸಮಾರಂಭ ವೇದಿಕೆಯನ್ನು ಇಬ್ಬರು ನಾಯಕರು ರಾಜಕೀಯ ವಾಗ್ದಾಳಿಗೆ ಬಳಸಿಕೊಂಡರು.
ಆತುರಾತುರಾವಾಗಿ ಮೋದಿ ಜಿಎಸ್ಟಿ ಜಾರಿಗ ತಂದಿದ್ದರ ಪರಿಣಾಮ ಉದ್ಯಮಗಳ ಮೇಲೆ ಹಾನಿ ಉಂಟಾಯಿತು. ನಿರುದ್ಯೋಗ, ನೋಟು ಅಮಾನ್ಯೀಕರಣಕರಣದಿಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ.ನಮ್ಮ ಯುವಜನತೆ ಮೋದಿ ಭರವಸೆ ನೀಡಿದ 2 ಕೋಟಿ ಉದ್ಯೋಗಕ್ಕಾಗಿ ಕಾದು ಕುಳಿತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಉದ್ಯೋಗ ಬೆಳವಣಿಗೆ ಕುಸಿತದ ಹಾದಿ ತಲುಪಿದೆ ಎಂದು ಟೀಕಿಸಿದರು.
ನೋಟು ಅಮಾನ್ಯೀಕರಣದ ಬಗ್ಗೆ ಮಾತನಾಡಿದ ಅವರು, ಇಲ್ಲಿಯವರೆಗೂ ಯಾವುದೇ ಕಪ್ಪು ಹಣ ದೇಶಕ್ಕೆ ಹಿಂದಿರುಗಿಲ್ಲ. ವಿದೇಶದಿಂದ ಕಪ್ಪು ಹಣ ಹಿಂತರುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮೋದಿ ಕೃಷಿ ಬಿಕ್ಕಟ್ಟು ಪರಿಹಾರ ಮಾದೇ ಅವರೆಡೆಗೆ ಉದಾಸೀನವನ್ನು ತೋರಿದ್ದಾರೆ, ರೈತರ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯೂ ಸಿಗಲಿಲ್ಲ. ವಿದೇಶಿ ನೀತಿ ವಿಷಯದಲ್ಲಿಯೂ ಮೋದಿ ನೆರೆ ಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಲ್ಲ 2014ರಲ್ಲಿದ್ದ ಸ್ಥಿತಿಗಿಂತ ಈಗ ಕೆಟ್ಟದಾಗಿದೆ. ವಿದೇಶಿಗಳೊಂದಿಗಿನ ಸಂಬಂಧ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
Loading...