ಮೋದಿ ‘ಮ್ಯಾನ್​ ವರ್ಸಸ್ ವೈಲ್ಡ್‘ ಕಾರ್ಯಕ್ರಮವನ್ನು​​​ ಕನ್ನಡದಲ್ಲೂ ನೋಡುವ ಅವಕಾಶ!

ಉತ್ತರಾಖಂಡದ ಜಿಮ್​ ಕಾರ್ಬೆಟ್​ ಹಾಗೂ ರಾಜಸ್ಥಾನ ರಣಥಂಭೋರ್​ ರಾಷ್ಟ್ರೀಯ ಉದ್ಯಾನಗಳಲ್ಲಿ ನಡೆದ ಈ ಕಾರ್ಯಕ್ರಮದ ಚಿತ್ರೀಕರಣದ ದೃಶ್ಯಗಳು 180 ದೇಶಗಳಲ್ಲಿ ಬಿತ್ತರವಾಗಲಿದೆ. ವಿಶೇಷವಾಗಿ ಈ ಕಾರ್ಯಕ್ರಮವು ಕನ್ನಡ ಭಾಷೆಯಲ್ಲೂ ಪ್ರಸಾರವಾಗುತ್ತಿರುವುದು  ಕನ್ನಡಿಗರಿಗೆ ಸಂತಸ ತಂದಿದೆ.

news18
Updated:August 13, 2019, 9:59 AM IST
ಮೋದಿ ‘ಮ್ಯಾನ್​ ವರ್ಸಸ್ ವೈಲ್ಡ್‘ ಕಾರ್ಯಕ್ರಮವನ್ನು​​​ ಕನ್ನಡದಲ್ಲೂ ನೋಡುವ ಅವಕಾಶ!
ಮೋದಿ ‘ಮ್ಯಾನ್​ ವರ್ಸಸ್ ವೈಲ್ಡ್‘
  • News18
  • Last Updated: August 13, 2019, 9:59 AM IST
  • Share this:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒಳಗೊಂಡ ‘ಮ್ಯಾನ್​​ ವರ್ಸಸ್​ ವೈಲ್‘​ ಕಾರ್ಯಕ್ರಮವು ಇಂದು ರಾತ್ರಿ 9.ಕ್ಕೆ ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ವೀಕ್ಷಿಸಲು ಜನರು ಕುತೂಹಲದಿಂದ ಎದುರು ನೋಡುತ್ತಿರುವ ನಡುವೆಯೇ ಮತ್ತೊಂದು ಸಂತಸದ ಸುದ್ದಿ ಹೊರಬಿದ್ದಿದೆ. ಅದೇನೆಂದರೆ ಪ್ರಧಾನಿ ಮೋದಿ ಅವರ ಈ ಕಾರ್ಯಕ್ರಮ ಕನ್ನಡ ಭಾಷೆಯಲ್ಲೂ ವೀಕ್ಷಿಸಬಹುದಾಗಿದೆ.

ಉತ್ತರಾಖಂಡದ ಜಿಮ್​ ಕಾರ್ಬೆಟ್​ ಹಾಗೂ ರಾಜಸ್ಥಾನ ರಣಥಂಭೋರ್​ ರಾಷ್ಟ್ರೀಯ ಉದ್ಯಾನಗಳಲ್ಲಿ ನಡೆದ ಈ ಕಾರ್ಯಕ್ರಮದ ಚಿತ್ರೀಕರಣದ ದೃಶ್ಯಗಳು 180 ದೇಶಗಳಲ್ಲಿ ಬಿತ್ತರವಾಗಲಿದೆ. ವಿಶೇಷವಾಗಿ ಈ ಕಾರ್ಯಕ್ರಮವು ಕನ್ನಡ ಭಾಷೆಯಲ್ಲೂ ಪ್ರಸಾರವಾಗುತ್ತಿರುವುದು  ಕನ್ನಡಿಗರಿಗೆ ಸಂತಸ ತಂದಿದೆ.

ಕುಂದಾಪುರದ ಮೂಲದ ಕಿರಣ್​ ಎಂಬವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಮೋದಿ ಅವರನ್ನು ಒಳಗೊಂಡ ‘ಮ್ಯಾನ್​ ವರ್ಸಸ್​ ವೈಲ್ಡ್​ ‘ ಕಾರ್ಯಕ್ರಮ ಕನ್ನಡದಲ್ಲೂ ಸಿಗಬಹುದೇ ಏಂದು ಟ್ಟೀಟ್​ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಡಿಸ್ಕವರಿ ನೆಟ್​ವರ್ಕ್​ನ ದಕ್ಷಿಣ ಏಷ್ಯಾದ ಎಂಡಿ ಮೇಘಾ ಟಾಟಾ ಹೌದು ಎಂದು ಪ್ರತಿಕ್ರಿಯಿಸಿದ್ದಾರೆ.

 


ಬೇರ್​ ಗ್ರಿಲ್ಸ್ ಹಾಗೂ ಪ್ರಧಾನಿ ಮೋದಿಯನ್ನು ಒಳಗೊಂಡ ಈ ಕಾರ್ಯಕ್ರಮವು ಜು.26ರಂದು ಚಿತ್ರೀಕರಣ ನಡೆಸಲಾಗಿತ್ತು. ಈ ಕುರಿತಂತೆ ಬೇರ್​​ಗಿಲ್ಸ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಟ್ವೀಟ್​​ ಮಾಡಿದ್ದರು. 180 ದೇಶಗಳ ಜನರು ಪ್ರಧಾನಿ ಮೋದಿಯ ಗೊತ್ತಿಲ್ಲದ ಮುಖವನ್ನು ಈ ಬಾರಿಯ ಮಾನ್​ ವರ್ಸಸ್​ ವೈಲ್ಡ್​ ಸಂಚಿಕೆಯಲ್ಲಿ ಕಾಣಬಹುದಾಗಿದೆ ಎಂದಿದ್ದರು. ಈ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಪ್ರಾಣಿಗಳ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಆಗಸ್ಟ್​​ 12ರಂದು ರಾತ್ರಿ 9 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ತಿಳಿಸಿದ್ದರು. ಇದೀಗ ಈ ಕಾರ್ಯಕ್ರವು ಕನ್ನಡದಲ್ಲೂ ಪ್ರಸಾರವಾಗುತ್ತಿರುವುದು ಕನ್ನಡಿಗರಿಗೆ ಸಂತಸ ತಂದಿದೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಇಂದು ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಬಗ್ಗೆ ಟ್ವೀಟ್​ ಮಾಡಿದ್ದಾರೆ.

First published:August 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ