HOME » NEWS » National-international » PM MODI WISHES TO PAKISTAN PM IMRAN KHAN FOR SPEEDY RECOVERY SESR

PM Modi: ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗುಂತೆ ಪಾಕ್​ ಪ್ರಧಾನಿಗೆ ಹಾರೈಸಿದ ಮೋದಿ

ಇಮ್ರಾನ್​ ಖಾನ್​ ಅವರು ಮಾಸ್ಕ್​ ಧರಿಸದೇ ಪದೇ ಪದೇ ಸಭೆ ನಡೆಸುತ್ತಿದ್ದರು ಎಂದು ಕೂಡ ರಾಯಿಟರ್ಸ್​ ವರದಿ ಮಾಡಿದೆ

news18-kannada
Updated:March 20, 2021, 8:57 PM IST
PM Modi: ಕೊರೋನಾ ಸೋಂಕಿನಿಂದ ಶೀಘ್ರ ಗುಣಮುಖರಾಗುಂತೆ ಪಾಕ್​ ಪ್ರಧಾನಿಗೆ ಹಾರೈಸಿದ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
  • Share this:
ನವದೆಹಲಿ (ಮಾ. 20): ಕೊರೋನಾ ಸೋಂಕಿಗೆ ತುತ್ತಾಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ ಶೀಘ್ರ ಚೇತರಿಕೆ ಕಾಣಲಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾರೈಸಿದ್ದಾರೆ. ಟ್ವೀಟ್​ ಮೂಲಕ ಅವರು ಆದಷ್ಟು ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಇಮ್ರಾನ್​ ಖಾನ್​ ಅವರಿಗೆ ಕೊರೋನಾ ಸೋಂಕು ದೃಢಗೊಂಡಿದ್ದು, ಅವರು ಹೋಮ್​ ಐಸೋಲೇಷನ್​ನಲ್ಲಿದ್ದಾರೆ ಎಂದು ಪಾಕಿಸ್ತಾನದ ಉನ್ನತ ಆರೋಗ್ಯ ಅಧಿಕಾರಿ ಫೈಸಲ್​ ಸುಲ್ತಾನ್​ ತಿಳಿಸಿದ್ದರು. 68 ವರ್ಷ ಇಮ್ರಾನ್​ ಖಾನ್​ ಗುರುವಾರವಷ್ಟೇ ಕೊರೋನಾ ಲಸಿಕೆ ಪಡೆದಿದ್ದರು. ಇದಾದ ಮರುದಿನವೇ ಅವರು ಸೋಂಕಿಗೆ ಒಳಗಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯರು, ಲಸಿಕೆಗಳು ವೈರಸ್​ ವಿರುದ್ಧ ರೋಗ ನಿರೋಧಕ ಶಕ್ತಿ ಉಂಟುಮಾಡಲು ವಾರಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.ಇಮ್ರಾನ್​ ಖಾನ್​ ಅವರು ಮಾಸ್ಕ್​ ಧರಿಸದೇ ಪದೇ ಪದೇ ಸಭೆ ನಡೆಸುತ್ತಿದ್ದರು ಎಂದು ಕೂಡ ರಾಯಿಟರ್ಸ್​ ವರದಿ ಮಾಡಿದೆ.ಲಸಿಕೆ ಪಡೆದ ಬಳಿಕ ಮಾತನಾಡಿದ್ದ ಇಮ್ರಾನ್​ ಖಾನ್​ ಮೊದಲ ಡೋಸ್​ ಲಸಿಕೆ ಪಡೆದಿದ್ದು, ದೇಶದ ಜನರು ಲಸಿಕೆ ಪಡೆಯುವಂತೆ ಮನವಿ ಮಾಡಿದ್ದರು
2018ರಲ್ಲಿ ಪಾಕ್​ ಪ್ರಧಾನಿಯಾದ ಇಮ್ರಾನ್​ ಖಾನ್​ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಬಗ್ಗೆ ಮಾತನಾಡಿದ್ದರು. ಆದರೂ ಗಡಿಯಲ್ಲಿನ ಭಯೋತ್ಪಾದನೆಯನ್ನು ನಿಯಂತ್ರಿಸುವಲ್ಲಿ ಅವರು ಮುಂದಾಗಲಿಲ್ಲ
Published by: Seema R
First published: March 20, 2021, 8:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories