2015ರಿಂದ ಪ್ರಧಾನಿ ಮೋದಿ ಸುತ್ತಿದ ದೇಶ ಎಷ್ಟು? ಖರ್ಚಾದ ಹಣ ಎಷ್ಟು?; ರಾಜ್ಯಸಭೆಗೆ ಸರ್ಕಾರ ನೀಡಿದ ಮಾಹಿತಿ ಇಲ್ಲಿದೆ

ಕೊರೋನಾ ಮಾರಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಆದರೆ, ಈ ಹಿಂದೆ ದೇಶದಲ್ಲಿ ಪ್ರವಾಹ ಹಾಗೂ ಕ್ಷಾಮದ ಪರಿಸ್ಥಿತಿ ಇದ್ದಾಗಲೂ ಸಹ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದ ವಿಚಾರ ಅನೇಕ ಭಾರಿ ಟೀಕೆಗೆ ಗುರಿಯಾಗಿತ್ತು ಎಂಬುದು ಉಲ್ಲೇಖಾರ್ಹ.

ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ.

 • Share this:
  ನವ ದೆಹಲಿ; ನರೇಂದ್ರ ಮೋದಿ ಭಾರತದ ಎರಡನೇ ಅವಧಿಗೆ ಭಾರತದ ಪ್ರಧಾನಿಯಾಗಿ ಒಂದು ವರ್ಷ ಕಳೆದಿದೆ. ಆದರೆ, ಅವರು ಮೊದಲ ಭಾರಿ ಪ್ರಧಾನಿಯಾದಾಗಿನಿಂದ ಈವರೆಗೆ ಅವರ ಬಗ್ಗೆ ಹೆಚ್ಚು ಸದ್ದು ಮಾಡಿದ್ದ ವಿಚಾರ ಎಂದರೆ ವಿದೇಶಿ ಪ್ರವಾಸ. ಅಸಲಿಗೆ ಯಾವುದೇ ದೇಶದ ವಿದೇಶಾಂಗ ಸಚಿವ ವಿದೇಶಗಳ ಸ್ನೇಹ ಸಂಪಾದಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸ ಕೈಗೊಳ್ಳುವುದು ವಾಡಿಕೆ. ಆದರೆ, ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದಾಗಿನಿಂದ ದೇಶಕ್ಕೆ ಕೊರೋನಾ ಎಂಬ ಮಾರಕ ವೈರಸ್​ ದಾಳಿ ಇಡುವವರೆಗೆ ಅನೇಕ ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಭಾರತದ ವಿದೇಶಾಂಗ ಸಚಿವರುಗಳಿಗಿಂತ ಹೆಚ್ಚಿನ ಪ್ರವಾಸ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಹಲವರ ಮೆಚ್ಚುಗೆಗೆ ಕಾರಣವಾಗಿದ್ದರೂ ಸಹ ಕಳೆದ ಆರು ವರ್ಷಗಳಿಂದ ಅಷ್ಟೇ ಟೀಕೆಗೂ ಒಳಗಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಇದೇ ವಿಚಾರ ರಾಜ್ಯ ಸಭೆಯಲ್ಲಿ ಇದೀಗ ಮತ್ತೆ ಸದ್ದು ಮಾಡುತ್ತಿದೆ. 

  ಇದೀಗ ಕೇಂದ್ರದಲ್ಲಿ ಮಾನ್ಸೂನ್ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಕಳೆದ ಆರು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳ ಸಂಖ್ಯೆ ಮತ್ತು ಅದಕ್ಕೆ ಖರ್ಚಾಗಿರುವ ಹಣ ಎಷ್ಟು? ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸರ್ಕಾರ ನೀಡಿರುವ ಉತ್ತರ ಇದೀಗ ಸುದ್ದಿ ಕೇಂದ್ರದಲ್ಲಿ.  ಈ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ವಿದೇಶಾಂಗ ಸಚಿವಾಲಯದ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್​,  "2015 ರಿಂದ ಪ್ರಧಾನಿ ನರೇಂದ್ರ ಮೋದಿ 58 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಪ್ರವಾಸಗಳಿಗಾಗಿ ಸರ್ಕಾರ 517.82 ಕೋಟಿ ರೂ. ಖರ್ಚು ಮಾಡಿದೆ" ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ.

  ಕೊರೋನಾ ಮಾರಕ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ ಬ್ರೇಕ್ ಬಿದ್ದಿದೆ ಎನ್ನಲಾಗುತ್ತಿದೆ. ಆದರೆ, ಈ ಹಿಂದೆ ದೇಶದಲ್ಲಿ ಪ್ರವಾಹ ಹಾಗೂ ಕ್ಷಾಮದ ಪರಿಸ್ಥಿತಿ ಇದ್ದಾಗಲೂ ಸಹ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದ ವಿಚಾರ ಅನೇಕ ಭಾರಿ ಟೀಕೆಗೆ ಗುರಿಯಾಗಿತ್ತು ಎಂಬುದು ಉಲ್ಲೇಖಾರ್ಹ.
  Published by:MAshok Kumar
  First published: