PM Modi: ಆತಂಕ ಬೇಡ; ಕಂಟೈನ್‌ಮೆಂಟ್, ಹೋಮ್ ಐಸೋಲೇಶನ್ ಚಿಕಿತ್ಸೆಗೆ ಹೆಚ್ಚಿನ ಗಮನ ಇರಲಿ

ಗರಿಷ್ಠ ಪರೀಕ್ಷೆ ಮತ್ತು ಟ್ರ್ಯಾಕಿಂಗ್‌ನ ಗುರಿಗಳನ್ನು ಸಾಧಿಸಲು ಕೆಲವು ರಾಜ್ಯಗಳು ಹೊಸತನವನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಿಮಗೆ ಸಾಧ್ಯವಾದಷ್ಟು ಟೆಲಿಮೆಡಿಸಿನ್ ಬಳಸಿ ಎಂದು ಅವರು ಸೂಚಿಸಿದರು

ಪ್ರಧಾನಿ ಮೋದಿ ಸಭೆ

ಪ್ರಧಾನಿ ಮೋದಿ ಸಭೆ

 • Share this:
  ಕಳೆದ ವಾರದಿಂದ ದೇಶಾದ್ಯಂತ ಕೋವಿಡ್ ಪ್ರಕರಣಗಳು (Covid ) ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM modi) ಅವರು ಇಂದು ಅನೇಕ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುಯಲ್​ ಸಭೆ ನಡೆಸಿದ್ದರು. ಈ ವೇಳೆ ಕೋವಿಡ್ ವಿರುದ್ಧ ಹೋರಾಡಲು ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಆರೋಗ್ಯ ಮೂಲಸೌಕರ್ಯವನ್ನು ಖಚಿತಪಡಿಸಿಕೊಳ್ಳುವಂತೆ ಸಲಜೆ ನೀಡಿದರು. ಇದೇ ವೇಳೆ 15-18 ವಯೋಮಾನದ ಮಕ್ಕಳಿಗೆ ಲಸಿಕೆ ಅಭಿಯಾನವನ್ನು ವೇಗಗೊಳಿಸಲು ಪ್ರಧಾನ ಮಂತ್ರಿ ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದ್ದಾರೆ.

  ಈ ವರ್ಚುಯಲ್​ ಸಭೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪಂಜಾಬ್​ ಸಿಎಂ ಚರಂಜಿತ್ ಚನ್ನಿ , ಪುದುಚೇರಿ ಸಿಎಂ ಎನ್ ರಂಗಸ್ವಾಮಿ , ಛತ್ತೀಸ್​ ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ತ್ರಿಪುರ ಸಿಎಂ ಬಿಪ್ಲಬ್ ದೇಬ್, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಮಿಜೋರಾಂ ಸಿಎಂ ಜೋರಮ್ತಂಗ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ಹಾಜರಿದ್ದರು.

  ಕೋವಿಡ್ ಪರೀಕ್ಷೆ ಹೆಚ್ಚಿಸಿ

  ಸಭೆಯಲ್ಲಿ ಕೋವಿಡ್​​ ಪರೀಕ್ಷೆ ಮತ್ತು ಜೀನೋಮ್ ಅನುಕ್ರಮವನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದರು. ದೇಶದಲ್ಲಿ ಪ್ರಮುಖವಾಗಿ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶ, ಪಂಜಾಬ್​, ಗೋವಾ, ಮಣಿಪುರ ಮತ್ತು ಉತ್ತರಾಖಂಡ್ ಮುಂದಿನ ಎರಡು ತಿಂಗಳಲ್ಲಿ ಅಸೆಂಬ್ಲಿ ಚುನಾವಣೆಗಳನ್ನು ನಡೆಸಲು ತಯಾರಿ ನಡೆಸುತ್ತಿರುವಾಗ ಪ್ರಕರಣಗಳ ಹೆಚ್ಚಳವಾಗಿದೆ

  ಇನ್ನು ಇದೇ ವೇಳೆ ಕೋವಿಡ್ -19 ಸೋಂಕು ನಿಯಂತ್ರಣಕ್ಕೆ ವಿಧಿಸುವ ಲಾಕ್​ಡೌನ್​ನಂತಹ ಕ್ರಮಗಳು ಜನರ ಆರ್ಥಿಕ ಚಟುವಟಿಕೆ ಮತ್ತು ಜೀವನೋಪಾಯದ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಗೆ ಸೂಚಿಸಿದರು

  ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಹಳಿ ತಪ್ಪಿದ ರೈಲು; ಮೂವರ ಸಾವು

  ಲಸಿಕೆಗೆ ವೇಗ ನೀಡಿ
  ಓಮೈಕ್ರಾನ್​ ಸೋಂಕು ಇತರ ರೂಪಾಂತರಗಳಿಗಿಂತ ಹೆಚ್ಚಿನ ಸೋಂಕನ್ನು ಉಂಟುಮಾಡುತ್ತಿದೆ. ವಿಜ್ಞಾನಿಗಳು ಓಮೈಕ್ರಾನ್‌ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಈ ಹಿನ್ನಲೆ ಗಾಬರಿಪಡಬೇಕಾಗಿಲ್ಲ. ಹಾಗೆಂದ ಮಾತ್ರಕ್ಕೆ ಎಚ್ಚರ ತಪ್ಪಬಾರದು. ವಿಶ್ವ ತಜ್ಞರು ಹೇಳುವಂತೆ ಅದು ಯಾವುದೇ ರೂಪಾಂತರದ ವಿರುದ್​ಧ ಹೋರಾಡಲು ಲಸಿಕೆ ಉತ್ತಮ ಅಸ್ತ್ರವಾಗಿದೆ. ಈ ಹಿನ್ನಲೆ ಲಸಿಕೆ ಪಡೆಯಲು ಜನರಲ್ಲಿ ಜಾಗ್ರತೆ ಮೂಡಿಸಬೇಕು ಎಂದರು

  ಹೆಚ್ಚಿನ ಪರೀಕ್ಷೆ : ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿನ ಪರೀಕ್ಷೆಯನ್ನು ನಡೆಸಬೇಕು. ಸೋಂಕಿತರಿಗೆ ಮನೆಯಲ್ಲಿಯೇ ಐಸೋಲೇಷನ್​ ಚಿಕಿತ್ಸೆ ನೀಡುವ ಗುರಿಯನ್ನು ಹೊಂದಿರಬೇಕು. ಹೋಮ್ ಐಸೋಲೇಶನ್ ಸಮಯದಲ್ಲಿ ಟ್ರ್ಯಾಕಿಂಗ್ ಮತ್ತು ಚಿಕಿತ್ಸಾ ಸೌಲಭ್ಯಗಳು ಉತ್ತಮವಾಗಿರಬೇಕು, ಆಗ ಮಾತ್ರ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಮೂಲಸೌಕರ್ಯವನ್ನು ನಿರ್ವಹಿಸಬಹುದು ಎಂದು ಅವರು ಹೇಳಿದರು

  ಇದನ್ನು ಓದಿ: ಸಿಎಂ ಆಯ್ಕೆಗೆ SMS ಮೂಲಕ ವೋಟಿಂಗ್​; ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ AAP

  ಗರಿಷ್ಠ ಪರೀಕ್ಷೆ ಮತ್ತು ಟ್ರ್ಯಾಕಿಂಗ್‌ನ ಗುರಿಗಳನ್ನು ಸಾಧಿಸಲು ಕೆಲವು ರಾಜ್ಯಗಳು ಹೊಸತನವನ್ನು ಮಾಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಿಮಗೆ ಸಾಧ್ಯವಾದಷ್ಟು ಟೆಲಿಮೆಡಿಸಿನ್ ಬಳಸಿ ಎಂದು ಅವರು ಸೂಚಿಸಿದರು

  ರಾಜ್ಯಗಳು ತಮ್ಮ ಆರೋಗ್ಯ ಮೂಲಸೌಕರ್ಯ ಬಲಪಡಿಸಲು 23,000 ಕೋಟಿ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಮಕ್ಕಳ ಆರೈಕೆ ಘಟಕಗಳು, 1.5 ಲಕ್ಷ ಐಸಿಯುಗಳು, 5,000 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಮತ್ತು ದೃಢವಾದ ತುರ್ತು ಸಾಮರ್ಥ್ಯ ಬಲಪಡಿಸಲು ಇದು ಸಹಾಯ ಮಾಡಿದೆ. ಕೊರೊನಾವೈರಸ್ ಅನ್ನು ಸೋಲಿಸಲು, ನಮ್ಮ ಸನ್ನದ್ಧತೆಯು ಅದರ ಎಲ್ಲಾ ರೂಪಾಂತರಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು. ಓಮೈಕ್ರಾನ್ ಮಾತ್ರವಲ್ಲ, ನಾವು ಇತರ ರೂಪಾಂತರಗಳಿಗೆ ಸಿದ್ಧರಾಗಿರಬೇಕು ಎಂದರು
  Published by:Seema R
  First published: