ಮಹಿಳಾ ಮತದಾರರ ಓಲೈಕೆ: ಸ್ವ ಸಹಾಯ ಗುಂಪುಗಳಿಗೆ 1000 ಕೋಟಿ ರೂ ಹಣ ವರ್ಗಾವಣೆ ಮಾಡಿದ ಪ್ರಧಾನಿ

ಪ್ರಧಾನಿಗಳು ಹೆಣ್ಣು ಮಗುವಿಗೆ ನೆರವು ನೀಡುವ ಮುಖ್ಯ ಮಂತ್ರಿ ಕನ್ಯಾ ಸುಮಂಗಲಾ ಯೋಜನೆಯ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 20 ಸಾವಿರ ಕೋಟಿ ರೂ ಹಣ ವರ್ಗಾವಣೆ ಮಾಡಿದರು

ಪ್ರಧಾನಿ ಮೋದಿ

ಪ್ರಧಾನಿ ಮೋದಿ

 • Share this:
  ಪ್ರಯಾಗ್​ ರಾಜ್​ (ಡಿ. 21):  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಹಿನ್ನಲೆ ಪದೇ ಪದೇ ವಿವಿಧ ಕಾರ್ಯಕ್ರಮಗಳ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನು ಪ್ರಯಾಗ್​ ರಾಜ್​ಗೆ ಇಂದು ಭೇಟಿ ನೀಡಿರುವ ಪ್ರಧಾನಿ, ಮುಂಬರುವ ಚುನಾವಣೆಗೆ ಮಹಿಳಾ ಮತದಾರರ ಓಲೈಕೆಗೆ ಪ್ರಯತ್ನ ನಡೆಸಿದರು. ಇದೇ ವೇಳೆ ತಮ್ಮ ಸರ್ಕಾರ ಮಹಿಳಾ ಕಲ್ಯಾಣಕ್ಕಾಗಿ ನೀಡಿದ ಕೊಡುಗೆಗಳ ಕುರಿತು ತಿಳಿಸುವ ಮೂಲಕ ವಿರೋಧ ಪಕ್ಷಗಳಿಗೆ ಚಾಟಿ ಬೀಸಿದರು. ಕಳೆದ ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮಾಫಿಯಾ ರಾಜ್ ಮತ್ತು ಗೂಂಡಾರಾಜ್ ಇತ್ತು. ಇದರಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಮಹಿಳೆಯರು. ಆದರೆ ಯೋಗಿ ಸರ್ಕಾರ (Yogi Government) ಅಪರಾಧಿಗಳನ್ನು ಅವರ ಸ್ಥಾನದಲ್ಲಿ ಇರಿಸಿ. ಮಹಿಳೆಯರಿಗೆ ಧೈರ್ಯ ತುಂಬಿದ್ದಾರೆ ಎಂದರು.

  ಮಹಿಳಾ ಮತದಾರರ ಓಲೈಕೆ ನಡೆಸಿದ ಪ್ರಧಾನಿ

  2 ಲಕ್ಷಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದ 202 ಪೂರಕ ಪೌಷ್ಟಿಕಾಂಶ ತಯಾರಿಕಾ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಮಹಿಳಾ ಮತದಾರರಿಗೆ ಭರ್ಜರಿ ಘೋಷಣೆ ಹೊರಡಿಸಿ ಗಮನಸೆಳೆದರು. ಮಹಿಳೆಯರಿಗೆ, ವಿಶೇಷವಾಗಿ ತಳಮಟ್ಟದಲ್ಲಿ, ಅವರಿಗೆ ಅಗತ್ಯವಾದ ಕೌಶಲ್ಯ, ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಬಲೀಕರಣಗೊಳಿಸುವ ಸರ್ಕಾರದ ದೃಷ್ಟಿಕೋನವನ್ನು ಬಿಂಬಿಸುವ ಯತ್ನ ನಡೆಸಲಾಯಿತು

  ಸ್ವಸಹಾಯ ಗುಂಪುಗಳಿಗೆ 1,000 ಕೋಟಿ ಹಣ ವರ್ಗಾವಣೆ

  ಮಹಿಳೆ ಶಕ್ತಿಯನನ್ನು ಪ್ರಧಾನ ಮಂತ್ರಿಗಳು ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿಗಳ) ಬ್ಯಾಂಕ್ ಖಾತೆಗೆ 1,000 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಇದರಿಂದ ಸುಮಾರು 16 ಲಕ್ಷ ಮಹಿಳಾ ಸದಸ್ಯರಿಗೆ ಪ್ರಯೋಜನವಾಗಿದೆ. ಈ ವರ್ಗಾವಣೆಯನ್ನು ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಅಡಿಯಲ್ಲಿ ಮಾಡಲಾಗುತ್ತಿದೆ, 80,000 ಸ್ವಸಹಾಯ ಗುಂಪುಗಳು ಸಮುದಾಯ ಹೂಡಿಕೆ ಮಾಡಲಾಗಿದೆ. ಪ್ರತಿ ಸ್ವ ಸಹಾಯ ಗುಂಪಿಗೆ ತಾ 1.10 ಲಕ್ಷ ರೂ. ಮತ್ತು 60,000 ಸ್ವ ಸಹಾಯ ಗುಂಪು ಇದರ ಲಾಭ ಪಡೆಯಲಿದೆ.

  ಇದನ್ನು ಓದಿ: ದೇಶದಲ್ಲಿ 200 ದಾಟಿದ ಓಮೈಕ್ರಾನ್​ ಪ್ರಕರಣ; ಮಹಾರಾಷ್ಟ್ರ-ದೆಹಲಿಯಲ್ಲಿ ಅಧಿಕ ಸೋಂಕು​

  ಮದುವೆ ವಯಸ್ಸಿನ ಏರಿಕೆ ಸಮಸ್ಯೆ ಯಾರಿಗೆ ಎಂದು ಗೊತ್ತು ಎಂದ ಮೋದಿ

  ಇದೇ ವೇಳೆ ಮಹಿಳೆಯರ ಮದುವೆ ವಯಸ್ಸು ಏರಿಕೆ ಮಾಡಿರುವ ತಮ್ಮ ಸರ್ಕಾರದ ನಿರ್ಣಯ ಸಮರ್ಥನೆ ಮಾಡಿಕೊಂಡ ಅವರು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಈ ಹಿಂದೆ ಹುಡುಗಿಯರ ಮದುವೆ ವಯಸ್ಸು 18 ಇತ್ತು. ಹುಡುಗಿಯರು ಕೂಡ ಓದಲು ಸಮಯ ಬೇಕಾಗುತ್ತದೆ. ಇದೇ ಕಾರಣಕ್ಕೆ ಪುರಷರಿಗೆ ಸಮವಾಗಿ ಅವರ ವಯಸ್ಸನ್ನು ಏರಿಕೆ ಮಾಡಲಾಗಿದೆ. ಇದರಲ್ಲಿ ಯಾರಿಗಾದರೂ ಸಮಸ್ಯೆ ಇದ್ದರೆ, ಅವರು (ಮಹಿಳೆಯರು) ಅದನ್ನು ಸಹ ನೋಡುತ್ತಾರೆ ಎಂದು ಹೆಸರು ಹೇಳದೇ ವಿಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

  ಇದನ್ನು ಓದಿ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಪ್ರಶ್ನಿಸಿದ ಅರ್ಜಿ ವಜಾಗೊಳಿಸಿದ ಕೇರಳ ಹೈ ಕೋರ್ಟ್​​

  ಮಹಿಳೆಯರ ಮದುವೆ ವಯಸ್ಸಿನ ಏರಿಕೆಯ ಕೇಂದ್ರ ಸರ್ಕಾರದ ಮಸೂದೆಗೆ ಕಾಂಗ್ರೆಸ್, ಸಿಪಿಎಂ ಮತ್ತು ಇತರ ಹಲವು ಪಕ್ಷಗಳೊಂದಿಗೆ ಸಮಾಜವಾದಿ ಪಕ್ಷ ವಿರೋಧಿಸಿದ್ದವು

  ಹಳೆ ಸರ್ಕಾರಕ್ಕೆ ಅವಕಾಶ ಇಲ್ಲ

  ಇನ್ನು ಇದೇ ವೇಳೆ ಪ್ರಧಾನಿಗಳು ಹೆಣ್ಣು ಮಗುವಿಗೆ ನೆರವು ನೀಡುವ ಮುಖ್ಯ ಮಂತ್ರಿ ಕನ್ಯಾ ಸುಮಂಗಲಾ ಯೋಜನೆಯ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ 20 ಸಾವಿರ ಕೋಟಿ ರೂ ಹಣ ವರ್ಗಾವಣೆ ಮಾಡಿದರು. ಇದೇ ವೇಳೆ ನ್ಯಾ ಸುಮಂಗಲಾ ಯೋಜನೆ ಕುರಿತು ಮಾತನಾಡಿದ ಅವರು, ಈ ಹಿಂದೆ ಅನೇಕ ಹೆಣ್ಣು ಮಕ್ಕಳು ಖಾತೆಯನ್ನು ಹೊಂದಿರಲಿಲ್ಲ. ಆದರೆ, ಡಿಜಿಟಲೀಕರಣದಿಂದ ಪ್ರತಿಯೊಬ್ಬರು ಖಾತೆ ಹೊಂದುವಂತೆ ಆಗಿದೆ. ಉತ್ತರ ಪ್ರದೇಶದ ಹೆಣ್ಣು ಮಕ್ಕಳು ಇದೀಗೆ ಹಿಂದಿನ ಸರ್ಕಾರವನ್ನು ಅಧಿಕಾರಕ್ಕೆ ತರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
  Published by:Seema R
  First published: