ಪ್ರಧಾನಿ ಅಭ್ಯರ್ಥಿಯಾಗಿ ಮತ್ತೆ ಮೋದಿಯತ್ತ ಒಲವು; ರಾಹುಲ್​ ಗಾಂಧಿಗೆ 2ನೇ ಸ್ಥಾನ; ಐ-ಪ್ಯಾಕ್​ ಸಮೀಕ್ಷೆ

news18
Updated:September 4, 2018, 4:28 PM IST
ಪ್ರಧಾನಿ ಅಭ್ಯರ್ಥಿಯಾಗಿ ಮತ್ತೆ ಮೋದಿಯತ್ತ ಒಲವು; ರಾಹುಲ್​ ಗಾಂಧಿಗೆ 2ನೇ ಸ್ಥಾನ; ಐ-ಪ್ಯಾಕ್​ ಸಮೀಕ್ಷೆ
news18
Updated: September 4, 2018, 4:28 PM IST
ಉದಯ್​ ಸಿಂಗ್​ ರಾಣಾ, ನ್ಯೂಸ್​18 ಕನ್ನಡ

ನವದೆಹಲಿ (ಸೆ. 4): ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರ ರಾಜಕೀಯದಲ್ಲಿ ಚುರುಕಿನ ಕಾರ್ಯಾಚರಣೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ​ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರಾಗಬೇಕೆಂದು ಐ-ಪ್ಯಾಕ್​ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಅತಿಹೆಚ್ಚು ಮತಗಳನ್ನು ಪಡೆಯುವ ಮೂಲಕ ನರೇಂದ್ರ ಮೋದಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಮುಂದಿನ ಅವಧಿಯಲ್ಲಿ ನಮ್ಮ ದೇಶವನ್ನು ಯಾರು ಮುನ್ನಡೆಸಬೇಕೆಂದು ಐ-ಪ್ಯಾಕ್​ ಸಮೀಕ್ಷೆ ನಡೆಸಿದೆ. ಇದರಲ್ಲಿ ಶೇ. 48ರಷ್ಟು ಮತಗಳನ್ನು ಪಡೆಯುವ ಮೂಲಕ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ. ಶೇ. 11.2 ಮತಗಳನ್ನು ಪಡೆಯುವ ಮೂಲಕ ರಾಹುಲ್​ ಗಾಂಧಿ 2ನೇ ಸ್ಥಾನದಲ್ಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರಿಗೆ ಶೇ.9.3 ಮತಗಳು ಸಿಕ್ಕಿವೆ. ಅಖಿಲೇಶ್​ ಯಾದವ್​ ಶೇ. 7 ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶೇ. 4.2 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಸಮೀಕ್ಷೆಯಲ್ಲಿ ಒಟ್ಟಾರೆ 57 ಲಕ್ಷ ಜನರು ಮತ ಚಲಾಯಿಸಿದ್ದರು.

ಕಳೆದ ಜುಲೈನಲ್ಲಿ ರಾಷ್ಟ್ರೀಯ ಅಜೆಂಡಾ ಅಭಿಯಾನವನ್ನು ಕೈಗೆತ್ತಿಕೊಂಡಿದ್ದ ಐ-ಪ್ಯಾಕ್​ ಜೊತೆಗೆ 500 ಜಿಲ್ಲೆಗಳ 1,500 ಕಾಲೇಜುಗಳ 25 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಜೊತೆಯಾಗಿದ್ದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಪ್ರಧಾನಿ ದೇವೇಗೌಡ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್​ಪಿ ನಾಯಕಿ ಮಾಯಾವತಿ, ಪ್ರಧಾನಿ ನರೇಂದ್ರ ಮೋದಿ, ಒರಿಸ್ಸಾ ಸಿಎಂ ನವೀನ್​ ಪಟ್ನಾಯಕ್​, ಬಿಹಾರ ಸಿಎಂ ನಿತೀಶ್​ ಕುಮಾರ್​, ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ಎನ್​ಸಿಪಿ ನಾಯಕ ಶರದ್​ ಪವಾರ್​ ಮತ್ತು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ ಅವರೊಳಗೆ ಒಬ್ಬರನ್ನು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡುವುದಾದರೆ ಯಾರನ್ನು ಮಾಡುತ್ತೀರಿ? ಎಂಬ ಆಯ್ಕೆ ನೀಡಲಾಗಿತ್ತು. ಇವರ ಜೊತೆಗೆ ಮತದಾರರು ತಮಗೆ ಇಷ್ಟವಾದ ಬೇರೆ ನಾಯಕರ ಹೆಸರನ್ನೂ ಸಮೀಕ್ಷೆಯ ವೇಳೆ ನಮೂದಿಸಿದ್ದರು.

ಸಮೀಕ್ಷೆಯ ವರದಿ ಪ್ರಕಾರ ಟಾಪ್​ 4 ಮುಖ್ಯಮಂತ್ರಿಗಳಿಗೆ ನಡೆದ ಸಮೀಕ್ಷೆಯಲ್ಲಿ ಕೇಜ್ರಿವಾಲ್​, ಮಮತಾ ಬ್ಯಾನರ್ಜಿ, ನವೀನ್​ ಪಟ್ನಾಯಕ್​, ನಿತೀಶ್​ ಕುಮಾರ್​ ಅವರಿಗೆ ಉತ್ತಮ ಮತಗಳು ಲಭಿಸಿವೆ. ನಮ್ಮ ದೇಶವನ್ನು ಅಭಿವೃದ್ಧಿಪಡಿಸಲು ರಾಜಕೀಯ ನಾಯಕರು ಮುಖ್ಯವಾಗಿ ಮಹಿಳಾ ಸಮಸ್ಯೆಗಳು, ರೈತರ ಸಮಸ್ಯೆಗಳು, ಆರ್ಥಿಕ ಅಸಮಾನತೆ, ವಿದ್ಯಾರ್ಥಿಗಳ ಸಮಸ್ಯೆಗಳು, ಆರೋಗ್ಯದ ಕುರಿತು ಶಿಕ್ಷಣ, ಪೌಷ್ಠಿಕತೆ, ಕೋಮುಸೌಹಾರ್ದತೆ, ಪ್ರಾಥಮಿಕ ಶಿಕ್ಷಣ, ಗ್ರಾಮ ನೈರ್ಮಲ್ಯ, ವಯಸ್ಕರ ಶಿಕ್ಷಣದ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...