• Home
  • »
  • News
  • »
  • national-international
  • »
  • Deepavali 2022: ಕಾರ್ಗಿಲ್ ತಲುಪಿದ ಪ್ರಧಾನಿ ಮೋದಿ, 8 ವರ್ಷಗಳಿಂದ ಸೈನಿಕರೊಂದಿಗೆ ದೀಪಾವಳಿ ಆಚರಣೆ

Deepavali 2022: ಕಾರ್ಗಿಲ್ ತಲುಪಿದ ಪ್ರಧಾನಿ ಮೋದಿ, 8 ವರ್ಷಗಳಿಂದ ಸೈನಿಕರೊಂದಿಗೆ ದೀಪಾವಳಿ ಆಚರಣೆ

ಕಾರ್ಗಿಲ್ ತಲುಪಿದ ಮೋದಿ

ಕಾರ್ಗಿಲ್ ತಲುಪಿದ ಮೋದಿ

Modi In Kargil: ಪ್ರಧಾನಿ ನರೇಂದ್ರ ಮೋದಿ ಸೈನಿಕರೊಂದಿಗೆ ದೀಪಾವಳಿ ಆಚರಿಸುವ ಸಂಪ್ರದಾಯ ಮುಂದ್ಉವರೆಸಿದ್ದು, ಇಂದು, ಅಕ್ಟೋಬರ್ 24 ರಂದು ಕಾರ್ಗಿಲ್ ತಲುಪಿದ್ದಾರೆ. ಕಳೆದ ಎಂಟು ವರ್ಷಗಳಿಂದ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಶ್ರೀನಗರ(ಅ.24): ಸೈನಿಕರೊಂದಿಗೆ ದೀಪಾವಳಿ ಆಚರಿಸುವ (Diwali 2022 Celebration) ಸಂಪ್ರದಾಯವನ್ನು ಮುಂದುವರೆಸಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಇಂದು ಅಂದರೆ ಅಕ್ಟೋಬರ್ 24 ರಂದು ಕಾರ್ಗಿಲ್ (Kargil) ತಲುಪಿದ್ದಾರೆ. ಕಳೆದ ಎಂಟು ವರ್ಷಗಳಿಂದ ಗಡಿಯಲ್ಲಿ ನಿಯೋಜನೆಗೊಂಡಿರುವ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಆಚರಿಸುತ್ತಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಸೈನಿಕರನ್ನು ಭೇಟಿ ಮಾಡಿ ಅವರೊಂದಿಗೆ ಚಹಾ ಸೇವಿಸಿ ದೀಪಾವಳಿ ಆಚರಿಸಲಿದ್ದಾರೆ. ಇದಕ್ಕೂ ಮುನ್ನವೇ ದೀಪಾವಳಿ ಸಂದರ್ಭದಲ್ಲಿ ಗಡಿಯ ವಿವಿಧೆಡೆ ಸೈನಿಕರೊಂದಿಗೆ ಪ್ರಧಾನಿ ದೀಪಾವಳಿ ಆಚರಿಸಿದ್ದರು.


ಇದನ್ನೂ ಓದಿ: President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ


ಪ್ರಧಾನಿಯಾದ ನಂತರ ಮೋದಿ ಅವರು ಸೈನಿಕರೊಂದಿಗೆ ನಿರಂತರವಾಗಿ ದೀಪಾವಳಿ ಆಚರಿಸುತ್ತಿದ್ದಾರೆ. ಪ್ರಧಾನಿಯಾದ ನಂತರ, ಅವರು ಮೊದಲ ಬಾರಿಗೆ ಸಿಯಾಚಿನ್‌ನಲ್ಲಿ ಸೈನಿಕರೊಂದಿಗೆ ಮೊದಲ ದೀಪಾವಳಿಯನ್ನು ಆಚರಿಸಿದ್ದರು. ಅದೇ ಸಮಯದಲ್ಲಿ, ಕಳೆದ ವರ್ಷ, ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಸೈನಿಕರೊಂದಿಗೆ ಪ್ರಧಾನಿ ದೀಪಾವಳಿಯನ್ನು ಆಚರಿಸಿದ್ದರು. ದೀಪಾವಳಿ ಹಬ್ಬದಂದು ಪ್ರಧಾನಿ ಮೋದಿ ನಿರಂತರವಾಗಿ ವಿವಿಧೆಡೆ ಹೋಗುತ್ತಿದ್ದಾರೆ.


diwali festival prime minister narendra modi has launched deepavali festival in ayodhya
ಅಯೋಧ್ಯೆಯಲ್ಲಿ ದೀಪಾವಳಿ


ಅಯೋಧ್ಯೆಯ ದೀಪೋತ್ಸವದಲ್ಲಿ ಭಾಗಿ


ಅಕ್ಟೋಬರ್ 23 ರಂದು ಅಯೋಧ್ಯೆಯ ದೀಪೋತ್ಸವದಲ್ಲಿ ಮೋದಿ ಭಾಗವಹಿಸಿದ್ದರು. ಇದರೊಂದಿಗೆ ಅವರು ಅಯೋಧ್ಯೆಗೆ ತಲುಪಿದ ನಂತರ ರಾಮಲಾಲಾನ ದರ್ಶನ ಪಡೆದಿದ್ದರು. ಅಕ್ಟೋಬರ್ 21 ರಂದು ಅವರು ಬಾಬಾ ಕೇದಾರನಾಥ ಮತ್ತು ಬದರಿನಾಥನ ದರ್ಶನ ಭೇಟಿ ಮಾಡಲು ಬಂದಿದ್ದರು.
ಸೈನಿಕರೊಂದಿಗೆ ನಿರಂತರ ದೀಪಾವಳಿ ಆಚರಿಸುತ್ತಿರುವ ಪ್ರಧಾನಿ


2015 ರಲ್ಲಿ, ತಮ್ಮ ಎರಡನೇ ದೀಪಾವಳಿಯಂದು, ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಇಲ್ಲಿ ಅವರು 1965 ರ ಯುದ್ಧದ ಯುದ್ಧ ಸ್ಮಾರಕವಕ್ಕೆ ಭೇಟಿ ನೀಡಿದ್ದರು. 2016ರಲ್ಲಿ ದೀಪಾವಳಿ ಆಚರಿಸಲು ಮೋದಿ ಹಿಮಾಚಲದ ಕಿನ್ನೌರ್‌ಗೆ ತೆರಳಿದ್ದರು. ಇಲ್ಲಿ ಅವರು ಭಾರತ-ಚೀನಾ ಗಡಿಯ ಬಳಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. 2017ರಲ್ಲಿಯೂ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದ ಮೋದಿ, ಈ ವೇಳೆ ಅವರು ಜಮ್ಮು ಮತ್ತು ಕಾಶ್ಮೀರದ ಗುರೇಜ್ ತಲುಪಿದ್ದರು.

ಇದನ್ನೂ ಓದಿ: Solar Eclipse 2022: 27 ವರ್ಷದ ಬಳಿಕ ಮುರಿಯಲಿದೆ ಕಾಶಿ ವಿಶ್ವನಾಥ ಧಾಮದ ಈ ಪ್ರಮುಖ ಪರಂಪರೆ!


2018 ರಲ್ಲಿ, ಉತ್ತರಾಖಂಡದ ಹರ್ಷಿಲ್‌ನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸರೊಂದಿಗೆ ಪ್ರಧಾನ ಮಂತ್ರಿ ದೀಪಾವಳಿಯನ್ನು ಆಚರಿಸಿದ್ದರು. ಇನ್ನು, 2019 ರಲ್ಲಿ, ಅವರು ಎಲ್ಒಸಿಯಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು. ಈ ವೇಳೆ, ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಸೈನಿಕರನ್ನು ಭೇಟಿ ಮಾಡಲು ಮೋದಿ ರಜೌರಿಗೆ ತೆರಳಿದ್ದರು. ಕೋವಿಡ್ ಸಾಂಕ್ರಾಮಿಕದ ಮಧ್ಯೆಯೂ, 2020 ರಲ್ಲಿ, ಪ್ರಧಾನಿಯವರು ಜೈಸಲ್ಮೇರ್‌ನ ಲೋಂಗೆವಾಲಾ ಪೋಸ್ಟ್‌ನಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ್ದರು.

Published by:Precilla Olivia Dias
First published: