ಜುಲೈ​ 6 ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ವಾರಣಾಸಿಗೆ ಭೇಟಿ ನೀಡುವ ಪ್ರಧಾನಿ ಮೋದಿ, ಸಸಿ ನೆಡುವ ಆಂದೋಲನಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

Latha CG | news18
Updated:July 6, 2019, 11:57 AM IST
ಜುಲೈ​ 6 ರಂದು ವಾರಣಾಸಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಪ್ರಧಾನಿ ಮೋದಿ
  • News18
  • Last Updated: July 6, 2019, 11:57 AM IST
  • Share this:
ವಾರಣಾಸಿ,(ಜೂ.30): ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಜುಲೈ​ 6 ರಂದು ಭೇಟಿ ನೀಡಲಿದ್ದಾರೆ ಎಂದು ಬಿಜೆಪಿ ಸ್ಥಳೀಯ ಮಾಧ್ಯಮ ಉಸ್ತುವಾರಿ ನವರತನ್​ ರಾತಿ ತಿಳಿಸಿದ್ದಾರೆ.

ವಾರಣಾಸಿಗೆ ಭೇಟಿ ನೀಡುವ ಪ್ರಧಾನಿ ಮೋದಿ, ಸಸಿ ನೆಡುವ ಆಂದೋಲನಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಇದರ ಜೊತೆಗೆ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಅವರು, ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೂ ಚಾಲನೆ ನೀಡಲಿದ್ದಾರೆ.

ಸಸಿ ನೆಡುವ ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ಧಾರೆ. ಪಂಚಕೋಶಿ ಮಾರ್ಗದಲ್ಲಿ ಸಸಿ ನೆಡುವ ಆಂದೋಲನವನ್ನು ಪ್ರಾರಂಭಿಸಲಾಗುತ್ತದೆ. ಬಳಿಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ರಾಮೇಶ್ವರಂನಲ್ಲಿ ಮೋದಿ ಭಾಷಣ ಮಾಡಲಿದ್ದಾರೆ.

ಟೀಂ ಇಂಡಿಯಾ ಆಟಗಾರರೋ ಅಥವಾ ಇಂಡಿಯನ್ ಆಯಿಲ್ ಕೆಲಸಗಾರರೋ?; ಟ್ರೋಲ್ ಆಯ್ತು ಹೊಸ ಜರ್ಸಿ

ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಎರಡನೇ ಬಾರಿಗೆ ಮೋದಿ ವಾರಣಾಸಿಗೆ ಭೇಟಿ ನೀಡುತ್ತಿದ್ಧಾರೆ. ಇದರ ಜೊತೆಗೆ ಕಾಕತಾಳೀಯ ಎಂಬಂತೆ ಜುಲೈ​ 6 ಬಿಜೆಪಿ ಪಕ್ಷದ ಸ್ಥಾಪಕ ಶ್ಯಾಮ ಪ್ರಸಾದ್​ ಮುಖರ್ಜಿ ಅವರ ಜನ್ಮದಿನಾಚರಣೆಯೂ ಸಹ ಇದೆ.

ಪಕ್ಷದ ಬಲವರ್ಧನೆಗಾಗಿ ಪ್ರತಿ ಮಂಡಲದಿಂದ ಕನಿಷ್ಠ 150 ಸದಸ್ಯರನ್ನು ನೋಂದಣಿ ಮಾಡಿಸಲು ಬಿಜೆಪಿ ನಿರ್ಧರಿಸಿದೆ. ಪ್ರಧಾನಿ ಮೋದಿ ಲೋಕಸಭಾ ಫಲಿತಾಂಶ ಬಂದ ಬಳಿಕ ತನ್ನ ಕ್ಷೇತ್ರದ ಜನತೆಗೆ ಧನ್ಯವಾದ ತಿಳಿಸಲು ಮೇ 27 ರಂದು ವಾರಣಾಸಿಗೆ ಭೇಟಿ ನೀಡಿದ್ದರು.

First published:June 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ