5ನೇ BIMSTEC Summitನಲ್ಲಿ ಮೋದಿ ಭಾಗಿ, ಏನಿದರ ಮುಖ್ಯ ಅಜೆಂಡಾ?

5ನೇ BIMSTEC ಸಮ್ಮೇಳನವು ಇಂದು ನಡೆಯಲಿದ್ದು ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಮೋದಿ ಅವರು ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಈ ಸಮ್ಮೇಳನದಲ್ಲಿ ಮುಖ್ಯವಾಗಿ ಚರ್ಚೆಯಾಗುವ ಅಜೆಂಡಾ ಏನು? ವಿಚಾರಗಳೇನು? ಇಲ್ಲಿದೆ ಡಿಟೇಲ್ಸ್.

ನರೇಂದ್ರ ಮೋದಿ

ನರೇಂದ್ರ ಮೋದಿ

  • Share this:
ಪ್ರಧಾನಿ ನರೇಂದ್ರ ಮೋದಿ ಅವರು 5ನೇ BIMSTEC ಸಮ್ಮೇಳನದಲ್ಲಿ ವರ್ಚುವಲ್ ಆಗಿ ಭಾಗಿಯಾಗಲಿದ್ದಾರೆ. ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮದ ಸಮ್ಮೇಳನವು (Summit) ಮಾರ್ಚ್ 30ರ ಬುಧವಾರದಂದು ನಡೆಯಲಿದ್ದು, ಪ್ರಧಾನು ಮೋದಿ ನೇರವಾಗಿ ಇದರಲ್ಲಿ ಭಾಗಿಯಾಗುತ್ತಿಲ್ಲ. ಬದಲಾಗಿ ಆನ್​ಲೈನ್ ಮೂಲಕ ಅವರು ಇದರಲ್ಲಿ ಭಾಗಿಯಾಗಲಿದ್ದಾರೆ. ಏಳು ರಾಷ್ಟ್ರಗಳ ಗುಂಪಿನಲ್ಲಿ ಸದ್ಯ ಶ್ರೀಲಂಕಾ (Sri Lanka) ಮುಖ್ಯಸ್ಥಾನದಲ್ಲಿದ್ದು, ಸಮ್ಮೇಳನವು ಕಾನ್ಫರೆನ್ಸ್​ ಆನ್​ಲೈನ್ (Online) ಮೋಡ್​ನಲ್ಲಿ ನಡೆಯಲಿದೆ. BIMSTEC ಹಿರಿಯ ಅಧಿಕಾರಿಗಳೂ ಮಾರ್ಚ್ 28ರಂದು ಸಮ್ಮೇಳನಕ್ಕೆ ಪೂರ್ವ ಸಿದ್ಧತಾ (Preparations) ತಯಾರಿಯೊಂದನ್ನು ಮೀಟಿಂಗ್ ಮೂಲಕ ನಡೆಸಿದ್ದರು. BIMSTEC ವಿದೇಶಾಂಗ ಸಚಿವರು ಮಾರ್ಚ್ 29ರಂದು ಸಭೆ ಸೇರಿ ಚರ್ಚಿಸಿದ್ದರು.

ರಷ್ಯಾ ಉಕ್ರೇನ್ ಯುದ್ಧದಿಂದ ದೂರಗಾಮಿ ಜಾಗತಿಕ ಪರಿಣಾಮಗಳ ನಡುವೆ BIMSTEC ಶೃಂಗಸಭೆ ನಡೆಯುತ್ತಿದ್ದು ಉಕ್ರೇನ್‌ನಲ್ಲಿನ ಪ್ರಸ್ತುತ ಬಿಕ್ಕಟ್ಟು ಮತ್ತು ಪ್ರದೇಶದ ಮೇಲೆ ಅದರ ಪರಿಣಾಮವನ್ನು ಇಂದು ಚರ್ಚಿಸುವ ಸಾಧ್ಯತೆಯಿದೆ. ಅದರ ಜೊತೆಗೆ, BIMSTEC ಗುಂಪಿನ ನಾಯಕರು ಗುಂಪಿನ ಪ್ರಮುಖ ಸಾಂಸ್ಥಿಕ ರಚನೆಗಳು ಮತ್ತು ವಿಧಾನಗಳ ಬಗ್ಗೆ ಮಾತನಾಡುವುದನ್ನು ಸಹ ನಿರೀಕ್ಷಿಸಲಾಗಿದೆ.

ವಿದೇಶಾಂಗ ಸಚಿವಾಲಯ ಹೇಳಿದ್ದೇನು?

ಕೊರೋನಾ ಕಾರಣದಿಂದಾಗಿ BIMSTEC ರಾಷ್ಟ್ರಗಳು ಹಲವಾರು ರೀತಿಯ ಸಮಸ್ಯೆಗಳು (Problems) ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರಗಳ ತುರ್ತು ಸ್ಥಿತಿಯನ್ನು ಅನುಭವಿಸುತ್ತಿವೆ.

BIMSTECನ್ನು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಪರಸ್ಪರ ಸಹಾಯ ಮಾಡುವ ನಿಲುವುಗಳನ್ನು ಮತ್ತೊಂದು ಹಂತಕ್ಕೆ ತಲುಪಿಸುವುದರ ಅಗತ್ಯ ಇಂದು ಹೆಚ್ಚಾಗಿದೆ. ಇನ್ನು ಗುಂಪಿನ ಆಂತಕರಿಕ ರಚನೆ ಹಾಗೂ ವಿಧಾನಗಳ ಬಗ್ಗೆಯೂ ಚರ್ಚಿಸಬೇಕಾದ ಅಗತ್ಯವಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.

BIMSTEC ನಲ್ಲಿ ಎಸ್ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಕೊಲಂಬೊದಲ್ಲಿ ನಡೆದ 18 ನೇ BIMSTEC ಸಚಿವರ ಸಭೆಯಲ್ಲಿ ಭಾಗವಹಿಸಿದರು. ಅಲ್ಲಿ ಅವರು ಸಂಪರ್ಕ, ಇಂಧನ ಮತ್ತು ಸಾಗರ ಸಂಪರ್ಕಗಳಂತಹ ವಲಯಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು ಗುಂಪಿನ ಸಂಕಲ್ಪವನ್ನು ಒತ್ತಿ ಹೇಳಿದರು.

ಇದನ್ನೂ ಓದಿ: Narendra Modi: ಮೋದಿ ಫೋಟೋ ಇಟ್ಟುಕೊಂಡ ಮುಸ್ಲಿಂ ವ್ಯಕ್ತಿಗೆ ಹೊಡೆದು ಮನೆ ಖಾಲಿ ಮಾಡುವಂತೆ ಬೆದರಿಸಿದ ಮಾಲೀಕ

ಮಂಗಳವಾರ, ಅವರು "ಉತ್ಪಾದಕ ಮತ್ತು ಸೌಹಾರ್ದಯುತ" BIMSTEC ಸಚಿವರ ಸಭೆಯನ್ನು ಮುಕ್ತಾಯಗೊಳಿಸಿದರು. "ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಎಫ್‌ಎಂ ಪ್ರೊಫೆಸರ್ ಜಿಎಲ್ ಪೀರಿಸ್ ಅವರಿಗೆ ಧನ್ಯವಾದಗಳು" ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಈಗ ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು ಭಾರತ, ಶ್ರೀಲಂಕಾದಂತಹ ರಾಷ್ಟ್ರಗಳ ಈ ಯುದ್ಧಕ್ಕೆ ಸಂಬಂಧಿಸಿ ತಟಸ್ಥವಾಗಿ ನಿಂತಿವೆ, ಅಮೆರಿಕ ಅಧ್ಯಕ್ಷ ಬೈಡನ್ ಪದೇ ಪದೇ ಪುಟಿನ್​ನನ್ನು ಟೀಕಿಸುತ್ತಿದ್ದರೂ ಭಾರತ ಮಾತ್ರ ಇಂಧನ ಪಡೆಯುವುದನ್ನೂ ವ್ಯಾಪರವನ್ನೂ ಮಾಡುತ್ತಿದೆ.  ಈಗಾಗಲೇ ಕಚ್ಚಾ ತೈಲವನ್ನು ಭಾರತ ಖರೀದಿ ಮಾಡಿ ಸ್ಟಾರಕ್ ಮಾಡಿಟ್ಟಿದ್ದು ಅಮೆರಿಕ ಆಮದು ನಿಲ್ಲಿಸಿದೆ.

ಇದನ್ನೂ ಓದಿ: OMG: ಒಂದೇ ವಾರದಲ್ಲಿ 10 ಬಾರಿ ಮಾರಾಟವಾಯ್ತು ಈ ಕಂದಮ್ಮ! 11ನೇ ಬಾರಿ ಅಮ್ಮನ ಮಡಿಲು ಸೇರಿದ್ದು ಹೇಗೆ?
Published by:Divya D
First published: