PM Modi America Tour: ಇಂದು ಅಮೆರಿಕ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ, ನಾಳೆ ಅಧ್ಯಕ್ಷ ಜೋ ಬಿಡೆನ್ ಭೇಟಿ

ಅಮೆರಿಕ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷರಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರನ್ನು ‌ಇದೇ ಮೊದಲ ಬಾರಿಗೆ ಭೇಟಿಯಾಗಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

  • Share this:
ನವದೆಹಲಿ, ಸೆ. 22: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (Prime Minister Narendra Modi) ಅಮೆರಿಕಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ (Covid Pandemic) ಬಳಿಕ ಇದು ಅವರ ಅಮೇರಿಕಾ ಪ್ರವಾಸವಾಗಿದೆ (America‌ Tour). ಇದೇ ವೇಳೆ ಅವರು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (America President Jo Biden) ಅವರನ್ನು ಹಾಗೂ ಅಮೆರಿಕದ ಉಪಾಧ್ಯಕ್ಷರಾಗಿರುವ ಭಾರತ ಮೂಲದ ಕಮಲಾ ಹ್ಯಾರಿಸ್ (American Vice President Kamala Harris) ಅವರನ್ನು ಭೌತಿಕವಾಗಿ ‌ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಅಮೇರಿಕಾದ ಉನ್ನತ ಸಂಸ್ಥೆಗಳ ಸಿಇಓ (CEO)ಗಳ ಜೊತೆ ಸಭೆ ನಡೆಸಲಿದ್ದಾರೆ. ಕ್ವಾಡ್ (Quad) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ‌ ಕೂಡ ಭಾಗಿಯಾಗಲಿದ್ದಾರೆ.

ಇಂದು ದೆಹಲಿಯಿಂದ ವಾಷಿಂಗ್ಟನ್ ಡಿಸಿಗೆ (Washington DC) ಪ್ರಯಾಣ ಬೆಳಸಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನಾಳೆ (ಸೆಪ್ಟೆಂಬರ್ 23ಕ್ಕೆ) ಅಮೆರಿಕದ ಉನ್ನತ ಸಂಸ್ಥೆಗಳ ಸಿಇಓ (CEO)ಗಳ ಜತೆ ಸಭೆ ನಡೆಸಲಿದ್ದಾರೆ. ಇದೇ ವೇಳೆ ಅವರು ಆ್ಯಪಲ್ ಸಂಸ್ಥೆ ಮುಖ್ಯಸ್ಥ ಟಿಮ್ ಕುಕ್ (CEO of Apple, Tim Cook) ಅವರ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದಾದ ಬಳಿಕ‌ ಸೆಪ್ಟೆಂಬರ್ 24ಕ್ಕೆ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗಿಯಾಗಲಿ ದ್ದಾರೆ. ಆಗ ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರನ್ನು ಭೌತಿಕವಾಗಿ ‌ಇದೇ ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ. ಕ್ವಾಡ್ ದೇಶಗಳಾದ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮೋರಿಸನ್ (Australian Prime Minister Scott Morrison), ಜಪಾನ್ ಪ್ರಧಾನ ಮಂತ್ರಿ ಯೊಶಿಹಿಡೆ ಸುಗ (Japan Prime Minister Yoshihide Suga) ಮತ್ತು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ (England Prime Minister Boris Johnson) ಅವರು ಕೂಡ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯ ಬಳಿಕ‌ ಕ್ವಾಡ್ ದೇಶಗಳ ನಾಯಕರ‌ ಭೋಜನಕೂಟ ಇರಲಿದೆ.

ಸೆಪ್ಟೆಂಬರ್ 24ರ ಸಂಜೆ‌ ವಾಷಿಂಗ್ಟನ್ ಡಿಸಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನ್ಯೂಯಾರ್ಕ್‌‌ (New York)ಗೆ ಪ್ರಯಾಣ ಬೆಳಸಲಿದ್ದಾರೆ. ಸೆಪ್ಟೆಂಬರ್ 25ರಂದು ನ್ಯೂಯಾರ್ಕ್ ನಗರದಲ್ಲಿ ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿ ಭಾಷಣ ಮಾಡಲಿದ್ದಾರೆ. ಸೆಪ್ಟೆಂಬರ್‌ 26ಕ್ಕೆ ನ್ಯೂಯಾರ್ಕ್ ನಿಂದ ನವದೆಹಲಿಗೆ ವಾಪಸ್ ಆಗಲಿದ್ದಾರೆ ಎಂದು ಮಂಗಳವಾರ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಕೆಲವು ನರೇಂದ್ರ ಮೋದಿ ಮತ್ತು ಜೋ ಬಿಡೆನ್ ನಿಯಮಿತವಾಗಿ ಸಂಪರ್ಕದ ಲ್ಲಿದ್ದರು.‌ ಕೆಲವು ವರ್ಚ್ಯುಯಲ್ ‌ಮಿಟಿಂಗ್ ಗಳು (Verchual Meeting)ಗಳು ಆಗಿದ್ದವು. ಈಗ ಭೌತಿಕವಾಗಿ ಭೇಟಿ (Physical Meeting) ಆಗುತ್ತಿದ್ದು ಭದ್ರತೆ, ರಕ್ಷಣೆ ಮತ್ತು ವ್ಯಾಪಾರ ವೃದ್ಧಿ ಬಗ್ಗೆ ಉಭಯ ನಾಯಕರು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಅಫ್ಘಾನಿಸ್ತಾನದ ಬಿಕ್ಕಟ್ಟಿನ (Afghanistan Crisis) ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿ ಎರಡು ದೇಶಗಳ ನಡುವಿನ ವ್ಯಾಪಾರ ಮಟ್ಟದ ಸಂವಾದಗಳನ್ನು ನಡೆಸುತ್ತಾರೆ ಎಂದು ಹರ್ಷ ಶೃಂಗ್ಲಾ ತಿಳಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ (Foreign Affairs Minister S. Jaishankar), ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Adviser Ajith Doel) ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ (Foreign Security Harsha Sringla) ಮತ್ತಿತರರು ಇರಲಿದ್ದಾರೆ.

ಇದನ್ನೂ ಓದಿ: Petrol Price| ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ; ನಿಮ್ಮ ನಗರದಲ್ಲಿ ಇಂದಿನ ಬೆಲೆ ಎಷ್ಟು?

ಬಾಂಗ್ಲಾದೇಶ ವಿಮೋಚನೆಯ ಸ್ವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು 2020ರ ಮಾರ್ಚ್​ನಲ್ಲಿ ಢಾಕಾಕ್ಕೆ ಭೇಟಿ ನೀಡಿದ್ದು ಮೋದಿಯವರ ಕೊರೋನಾ ಕಾಲದ ಮೊದಲ ವಿದೇಶ ಪ್ರವಾಸವಾಗಿತ್ತು. 2019ರ ಸೆಪ್ಟೆಂಬರ್​ನಲ್ಲಿ ಹ್ಯೂಸ್ಟನ್ (Huston)ನಲ್ಲಿ ಆಯೋಜಿಸಲಾಗಿದ್ದ ಹೌಡಿ-ಮೋದಿ‌ (Howdy Modi)  ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಅಮೆರಿಕಕ್ಕೆ ಭೇಟಿಕೊಟ್ಟಿದ್ದರು. ಅದು ಮೋದಿಯವರ ಕೊನೆಯ ಭೇಟಿಯಾಗಿತ್ತು.
Published by:MAshok Kumar
First published: