• Home
  • »
  • News
  • »
  • national-international
  • »
  • ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಅಟಲ್ ಸುರಂಗ ಮಾರ್ಗ

ಅಟಲ್ ಸುರಂಗ ಮಾರ್ಗ

ಸುರಂಗವು ಮನಾಲಿಯನ್ನು ಲಾಹೌಲ್ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ. ಮನಾಲಿ-ರೋಹ್ಟಾಂಗ್ ಪಾಸ್ ಸರ್ಚು-ಲೇಹ್ ರಸ್ತೆಯನ್ನು ಕ್ರಮಿಸುವುದನ್ನು 46 ಕಿಲೋಮೀಟರ್ ಕಡಿಮೆ ಮಾಡುತ್ತದೆ

  • Share this:

ನವದೆಹಲಿ(ಅಕ್ಟೋಬರ್​. 01): ಜಗತ್ತಿನಲ್ಲೇ ಅತಿ ಉದ್ದವಾದ ಸುರಂಗ ಎಂಬ ಖ್ಯಾತಿಗೆ ಪಾತ್ರವಾಗಿರುವ ಅಟಲ್ ಸುರಂಗ ಮಾರ್ಗಕ್ಕೆ ನಾಳೆ ಚಾಲನೆ ನೀಡಲಾಗುತ್ತದೆ. ಮನಾಲಿಯಿಂದ ಲೇಹ್ ವರೆಗೆ ಇರುವ ಅಟಲ್ ಸುರಂಗ ಮಾರ್ಗವು 46 ಕಿಲೋ ಮೀಟರ್ ದೂರವನ್ನು 9.2 ಕಿಲೋ ಮೀಟರ್ ದೂರಕ್ಕೆ ತಗ್ಗಿಸಲಿದೆ. ಸುಮಾರು 4 ರಿಂದ 5 ಗಂಟೆಯ ಪ್ರಯಾಣದ ಸಮಯಾವಕಾಶವು ಉಳಿತಾಯವಾಗಲಿದೆ. ಅಕ್ಟೋಬರ್ 3 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಟಲ್ ಸುರಂಗ ಮಾರ್ಗವನ್ನು ಉದ್ಧಾಟಿಸಲಿದ್ದಾರೆ. ಅದಕ್ಕಾಗಿ ಅವರು ಮನಾಲಿಗೆ ಬರಲಿದ್ದಾರೆ. ಉದ್ಘಾಟನೆ ಬಳಿಕ ಇದೇ ಸುರಂಗ ಮಾರ್ಗದ ಮೂಲಕ ಮೋದಿ ಲಾಹೌಲ್ ಗೆ ಕೂಡ ತೆರಳಲಿದ್ದಾರೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹೈ ರಾಮ್ ಠಾಕೂರ್ ತಿಳಿಸಿದ್ದಾರೆ. ಚಳಿಗಾಲದಲ್ಲಿ ಮನಾಲಿ ಮತ್ತು ಲೇಹ್ ನಡುವಿನ ಪ್ರಯಾಣ ದುಸ್ಸರವಾದ ಕೆಲಸವಾಗಿದೆ.


ರಸ್ತೆಗಳು ಹಿಮಾವೃತಗೊಂಡಿರುವುದರಿಂದ ರೋಹ್ಟಾಂಗ್ ಪಾಸ್ ಅನ್ನು 6 ತಿಂಗಳುಗಳ ಕಾಲ ಮುಚ್ಚಿರಲಾಗುತ್ತದೆ. ಅಲ್ಲದೆ ಮನಾಲಿ-ಸರ್ಚು-ಲೇಹ್ ರಸ್ತೆಯೂ ಮುಚ್ಚಲ್ಪಟ್ಟಿರುತ್ತದೆ. ಈ ಹಿನ್ನಲೆಯಲ್ಲಿ ‌ಲೇಹ್ ಮತ್ತು ಮನಾಲಿಗಳನ್ನು ಸಂಪರ್ಕಿಸಲು ಅಟಲ್ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ.


ಸುರಂಗದ ವಿಶೇಷತೆಗಳು


ಅಟಲ್ ಸುರಂಗ 9.2 ಕಿಲೋ ಮೀಟರ್ ದೂರ ಇದೆ. ಸುರಂಗ 10.5 ಮೀಟರ್ ಅಗಲವನ್ನು ಒಳಗೊಂಡಿದೆ. ಎರಡು ಕಡೆ 1 ಮೀಟರ್‌ನಷ್ಟು ಫುಟ್‌ಪಾತ್ ನಿರ್ಮಿಸಲಾಹಗಿದೆ. ಪ್ರತಿ 60 ಮೀಟರ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗಿದೆ. ಪ್ರತಿ 500 ಮೀಟರ್‌ಗೆ ಒಂದು ತುರ್ತು ನಿರ್ಗಮನದ ಬಾಗಿಲು ಇದೆ. ಅಗ್ನಿ ಅನಾಹುತದಿಂದ ಪಾರಾಗಲು ಫೈರ್ ಹೈಡ್ರಾಂಟ್ಸ್ ಅಳವಡಿಸಲಾಗಿದೆ.


ಇದು 1983ರಲ್ಲಿ ಇಂದಿರಾ ಗಾಂಧಿ ಸರ್ಕಾರ ರೂಪಿಸಿದ ಯೋಜನೆ. 2000ರಲ್ಲಿ ಅಂದಿನ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಶಂಕು ಸ್ಥಾಪನೆ ನೆರವೇರಿಸಿದರು. ಸುರಂಗದ ಕೆಲಸ ಪದೇ ಪದೇ ನಿಂತು ಹೋಗಿ 2010ರಲ್ಲಿ ಪುನರಾರಂಭವಾಯಿತು. ಅಟಲ್ ಬಿಹಾರಿ ವಾಜಪೇಯಿ 95ನೇ ಜಯಂತಿ ನೆನಪಿಗಾಗಿ 2019ರಲ್ಲಿ ರೋಹ್ಟಾಂಗ್ ಮಾರ್ಗವನ್ನು ಅಟಲ್ ಸುರಂಗ ಎಂದು ಮರುನಾಮಕರಣ ಮಾಡಲಾಯಿತು.


ಇದನ್ನೂ ಓದಿ : ಮಹಿಳೆಯರ ರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧ ; ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​


ಸುರಂಗವು ಮನಾಲಿಯನ್ನು ಲಾಹೌಲ್ ಕಣಿವೆಯೊಂದಿಗೆ ಸಂಪರ್ಕಿಸುತ್ತದೆ. ಮನಾಲಿ-ರೋಹ್ಟಾಂಗ್ ಪಾಸ್ ಸರ್ಚು-ಲೇಹ್ ರಸ್ತೆಯನ್ನು ಕ್ರಮಿಸುವುದನ್ನು 46 ಕಿಲೋಮೀಟರ್ ಕಡಿಮೆ ಮಾಡುತ್ತದೆ. ಸುರಂಗವು ಸಮುದ್ರ ಮಟ್ಟದಿಂದ 3 ಸಾವಿರ ಮೀಟರ್ ಎತ್ತರದಲ್ಲಿದೆ.


ಯಾವುದೇ ಹವಾಮಾನದಲ್ಲಿಯೂ ಪ್ರತಿದಿನ 3,000 ವಾಹನಗಳು ಈ ಮೂಲಕ ಸಂಚರಿಸಬಹುದಾಗಿದೆ. ವಾಹನಗಳ ವೇಗ ಗಂಟೆಗೆ 80ಕಿ.ಮೀ ಎಂದು ನಿಗದಿಪಡಿಸಲಾಗಿದೆ.

Published by:G Hareeshkumar
First published: