news18-kannada Updated:January 5, 2021, 12:01 PM IST
ನರೇಂದ್ರ ಮೋದಿ.
ನವ ದೆಹಲಿ (ಜನವರಿ 05); ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೊಚ್ಚಿ - ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಅನ್ನು ಉದ್ಘಾಟಿಸಲಿದ್ದಾರೆ ಎಂದು ಪ್ರಧಾನಿ ಕಚೇರಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಇಂದು ಬೆಳಿಗ್ಗೆ 11 ಗಂಟೆಗೆ ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಉದ್ಘಾಟಿಸಲಿದ್ದಾರೆ. "ಈ ಯೋಜನೆ ಭವಿಷ್ಯದಲ್ಲಿ ಅನೇಕ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಅಲ್ಲದೆ, "ಜನವರಿ 05 ಆತ್ಮನಿರ್ಭರ ಭಾರತದ ಅನ್ವೇಷಣೆಯಲ್ಲಿ ಒಂದು ಹೆಗ್ಗುರುತಿನ ದಿನವಾಗಲಿದೆ. ಈ ದಿನ ಕೊಚ್ಚಿ - ಮಂಗಳೂರು ನೈಸರ್ಗಿಕ ಅನಿಲ ಪೈಪ್ಲೈನ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು. ಇದು ಭವಿಷ್ಯದ ಯೋಜನೆಯಾಗಿದ್ದು, ಇದು ಅನೇಕ ಜನರ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ" ಎಂದು ಸ್ವತಃ ಮೋದಿ ಟ್ವೀಟ್ ಮೂಲಕ ಅಭಿಪ್ರಾಯಪಟ್ಟಿದ್ದಾರೆ.
450 ಕಿ.ಮೀ ಉದ್ದದ ಪೈಪ್ಲೈನ್ ಅನ್ನು ಗೇಲ್ (ಇಂಡಿಯಾ) ಲಿಮಿಟೆಡ್ ನಿರ್ಮಿಸಿದೆ. ಇದು ದೃವೀಕೃತ ನೈಸರ್ಗಿಕ ಅನಿಲವನ್ನು ಕೊಚ್ಚಿಯಿಂದ (ಕೇರಳ) ರೆಗಾಸಿಫಿಕೇಶನ್ ಟರ್ಮಿನಲ್ ಮೂಲಕ ಮಂಗಳೂರು (ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ) ತಲುಪಿಸಲಿದೆ. ಅಲ್ಲದೆ, ಈ ಪೈಪ್ಲೈನ್ ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಯಿಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲಕ ಹಾದುಹೋಗಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Mutant Corona: ರೂಪಾಂತರಿ ಕೊರೋನಾ ಭೀತಿ; ಮತ್ತೆ 6 ವಾರಗಳ ಲಾಕ್ಡೌನ್ ಘೋಷಿಸಿದ ಬ್ರಿಟನ್ ಸರ್ಕಾರ!ಇಂದು ಉದ್ಘಾಟನೆಗೊಳ್ಳಲಿರುವ ಪೈಪ್ಲೈನ್ ಮನೆಗಳಿಗೆ ಪರಿಸರ ಸ್ನೇಹಿ ಮತ್ತು ಕೈಗೆಟುಕುವ ಇಂಧನವನ್ನು ಪೂರೈಸಲಿದೆ. ಈ ನ್ಯಾಚುರಲ್ ಗ್ಯಾಸ್ (ಪಿಎನ್ಜಿ) ಸಾರಿಗೆ ವಲಯಕ್ಕೆ ಸಂಕುಚಿತ ರೂಪದ ನೈಸರ್ಗಿಕ ಅನಿಲವನ್ನು ಪೂರೈಕೆ ಮಾಡಲಿದೆ ಎನ್ನಲಾಗುತ್ತಿದೆ.
Published by:
MAshok Kumar
First published:
January 5, 2021, 9:43 AM IST