ಪ್ರಧಾನಿ ಮೋದಿ ಅವರಿಂದ ಕರ್ತಾರ್​ಪುರ್ ಕಾರಿಡಾರ್ ಯೋಜನೆ ಉದ್ಘಾಟನೆ; ಕೇಂದ್ರ ಸಚಿವೆ ಹರ್​ಸಿಮ್ರತ್ ಕೌರ್ ಟ್ವೀಟ್

ಈ ಐತಿಹಾಸಿಕ ಸಂಭ್ರಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ನೀಡಲಾಗಿರುವ ಆಹ್ವಾನವನ್ನು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಅಮರಿಂದರ್ ಸಿಂಗ್ ಇದಕ್ಕೂ ಮುನ್ನ ಹೇಳಿದ್ದರು.

HR Ramesh | news18-kannada
Updated:October 12, 2019, 9:30 PM IST
ಪ್ರಧಾನಿ ಮೋದಿ ಅವರಿಂದ ಕರ್ತಾರ್​ಪುರ್ ಕಾರಿಡಾರ್ ಯೋಜನೆ ಉದ್ಘಾಟನೆ; ಕೇಂದ್ರ ಸಚಿವೆ ಹರ್​ಸಿಮ್ರತ್ ಕೌರ್ ಟ್ವೀಟ್
ಕರ್ತಾರ್​ಪುರ್ ಗುರುದ್ವಾರದಲ್ಲಿರುವ ಸಿಖ್​ರ ಪವಿತ್ರ ಸ್ಥಳ
  • Share this:
ನವದೆಹಲಿ: ಕರ್ತಾರ್​ಪುರ್ ಕಾರಿಡಾರ್ ಯೋಜನೆಯನ್ನು ನವೆಂಬರ್ 8ರಂದು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಹರ್​ಸಿಮ್ರತ್ ಕೌರ್ ಬಾದಲ್​ ಶನಿವಾರ ಟ್ವಿಟ್ ಮಾಡಿದ್ದಾರೆ. ಈ ಕಾರಿಡಾರ್ ಪಂಜಾಬ್​ನ ಗುರುದಾಸ್​ಪುರದಿಂದ ಪಾಕಿಸ್ತಾನದಲ್ಲಿರುವ ಸಿಖ್​ ತೀರ್ಥಕ್ಷೇತ್ರ ಕರ್ತಾರ್​ಪುರ್​ ಸಾಹಿಬ್​ಗೆ ಸಂಪರ್ಕ ಕಲ್ಪಿಸಲಿದೆ.

ಗುರು ನಾನಕ್​ ದೇವ್​ ಜೀ ಅವರ ಆಶೀರ್ವಾದದೊಂದಿಗೆ ಕರ್ತಾರ್​ಪುರ್ ಸಾಹಿಬ್​ ದರ್ಶನದ ಕನಸು ನವೆಂಬರ್ 8ರಂದು ನನಸಾಗಲಿದೆ. ನವೆಂಬರ್ ರಂದು ಪ್ರಧಾನಿ ಮೋದಿ ಅವರು ಕರ್ತಾರ್​ಪುರ್ ಕಾರಿಡಾರ್ ಐತಿಹಾಸಿಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಹರ್​ಸಿಮ್ರತ್ ಕೌರ್ ಟ್ವೀಟ್ ಮಾಡಿದ್ದಾರೆ.​


ಕರ್ತಾರ್​ಪುರ್​ ಗುರುದ್ವಾರ ಸಿಖ್​ ಸಮುದಾಯದ ಪವಿತ್ರ ಸ್ಥಳವಾಗಿದೆ. ಸಿಖ್​ರ ಪ್ರಥಮ ದೇವ ಗುರು ನಾನಕ್​ ಅವರು ಇದೇ ಸ್ಥಳದಲ್ಲಿ ಲಿಂಗೈಕ್ಯರಾಗಿದ್ದು ಎಂದು ನಂಬಲಾಗಿದೆ.

ಭಾರತದ ಯಾತ್ರಾರ್ಥಿಗಳಿಗೆ ಕರ್ತಾರ್​ಪುರ ಕಾರಿಡಾರ್ ನವೆಂಬರ್ 9ರಂದು ತೆರೆಯಲಿದೆ ಎಂದು ಕಳೆದ ತಿಂಗಳು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದರು. ಆದಾಗ್ಯೂ, ಶುಕ್ರವಾರ ಮಾತನಾಡಿದ್ದ ಪಾಕಿಸ್ತಾನದ ವಿದೇಶಾಂಗ ಇಲಾಖೆ ವಕ್ತಾರ, ಕರ್ತಾರ್​ಪುರ್ ಕಾರಿಡಾರ್ ಉದ್ಘಾಟನೆಯ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸಿದ್ದರು.

ಪ್ರಧಾನಿ ಇಮ್ರಾನ್​ ಖಾನ್​ ಅವರು ಹೇಳಿದಂತೆ ಕರ್ತಾರ್​ಪುರ್​ ಕಾರಿಡಾರ್ ಕೆಲಸ ಸಮಯಕ್ಕೆ ಸರಿಯಾಗಿ ಮುಗಿದಿದೆ. ಈಗ ಉದ್ಘಾಟನೆಗೆ ಸಮಯವೂ ಬಂದಿದೆ. ಆದರೆ, ಯಾವ ಉದ್ಘಾಟನೆಗೆ ದಿನಾಂಕ ನಿಗದಿಯಾಗಿಲ್ಲ ಎಂದು ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಪೈಸಲ್​ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನು ಓದಿ: ಕರ್ತಾರ್​ಪುರ್ ಕಾರಿಡಾರ್ ಉದ್ಘಾಟನೆಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್ ಅವರಿಗೆ ಆಹ್ವಾನ ನೀಡಿದ ಪಾಕಿಸ್ತಾನ

ಕರ್ತಾರ್​ಪುರ್​ ಕಾರಿಡಾರ್ ಯೋಜನೆ ಉದ್ಘಾಟನೆ ನಂತರ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಎಲ್ಲಾ ಪಕ್ಷಗಳ ಯಾತ್ರಾರ್ಥಿಗಳ ಗುಂಪು ಗುರು ನಾನಕ್​ ಅವರ ಐಕ್ಯ ಸ್ಥಳಕ್ಕೆ ತೆರಳಲಿದೆ. ನವೆಂಬರ್ 12ರಂದು ಗುರು ನಾನಕ್ ಅವರ 550ನೇ ಜನ್ಮ ಶತಮಾನೋತ್ಸವದಂದು ಗುಂಪು ಕರ್ತಾರ್​ಪುರ್​ ಸಾಹಿಬ್ ತಲುಪಲಿದೆ. ಈ ಗುಂಪಿನೊಂದಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ಭಾಗಿಯಾಗಲಿದ್ದಾರೆ. ಈ ಐತಿಹಾಸಿಕ ಸಂಭ್ರಮೋತ್ಸವದಲ್ಲಿ ಪಾಲ್ಗೊಳ್ಳುವಂತೆ ನೀಡಲಾಗಿರುವ ಆಹ್ವಾನವನ್ನು ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಅಮರಿಂದರ್ ಸಿಂಗ್ ಇದಕ್ಕೂ ಮುನ್ನ ಹೇಳಿದ್ದರು.

 

First published: October 12, 2019, 9:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading