ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಕ್ಷಯ ಪಾತ್ರೆ ಮಿಡ್ಡೇ ಮಿಲ್ಸ್ ಕಿಚನ್ ಅನ್ನು ಉದ್ಘಾಟಿಸಿದ್ದಾರೆ . ಇಲ್ಲಿದೆ ನೋಡಿ ಉತ್ತರ ಭಾರತದ ಅತಿ ದೊಡ್ಡ ಕಿಚನ್ ಬಗೆಗಿನ ಸಂಪೂರ್ಣ ಮಾಹಿತಿ. ಅಕ್ಷಯ ಪಾತ್ರೆ ಮಿಡ್ಡೇ ಮಿಲ್ಸ್ ಕಿಚನ್ ಉತ್ತರ ಭಾರತದಲ್ಲೇ (India) ಅತಿ ದೊಡ್ಡದು ಎಂದು ಹೇಳಲಾಗುತ್ತದೆ. ಇದರ ಮೂಲಕ ದೇಶಾದ್ಯಂತ ಹಲವಾರು ಶಾಲೆಗಳಿಗೆ (School) ಹಾಗೂ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಆಹಾರವನ್ನು (Lunch) ನೀಡಲಾಗುತ್ತದೆ. ಇದೊಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು ಸೇವಾಕಾರ್ಯದಲ್ಲಿ ನಿರತವಾಗಿದೆ. ಈ ಸಂಸ್ಥೆಯ ಕೆಳಗೆ ಹಲವಾರು ಜನರು ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ಮಕ್ಕಳಿಗೆ ಸೂಕ್ತ ಹಾಗೂ ಒಳ್ಳೆಯ ಗುಣಮಟ್ಟದ ಮಧ್ಯಾಹ್ನದ ಆಹಾರವನ್ನು ನೀಡುತ್ತದೆ. ಪ್ರಸ್ತುತ ವರಾಣಾಸಿಯಲ್ಲಿರುವ (Varanasi) ಸುಮಾರು 148 ಶಾಲೆಗಳ ವಿದ್ಯಾರ್ಥಿಗಳಿಗೆ ಆಹಾರವನ್ನು ನೀಡುತ್ತಿದೆ.
ಉತ್ತರ ಭಾರತದಲ್ಲೇ ಅತಿ ದೊಡ್ಡ ಅಕ್ಷಯ ಪಾತ್ರೆ ಮಿಡ್ಡೇ ಮಿಲ್ಸ್ ಕಿಚನ್
ಮೊನ್ನೆ ವರಾಣಾಸಿಗೆ ಭೇಟಿಕೊಡುವ ಸಂದರ್ಭದಲ್ಲಿ ಪ್ರಾಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್.ಟಿ ಕಾಲೇಜಿನಲ್ಲಿರುವ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಹಾರ ತಯಾರಿಸಬಲ್ಲ ಅಕ್ಷಯ ಪಾತ್ರೆ ಮಿಡ್ಡೇ ಮಿಲ್ಸ್ ಕಿಚನ್ ಅನ್ನು ಉದ್ಘಾಟಿಸಿದ್ದಾರೆ.
ಮಿಡ್ಡೇ ಮಿಲ್ಸ್ ಕಿಚನ್ ಉತ್ತರ ಭಾರತದಲ್ಲೇ ಅತಿ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಹಲವಾರು ಶಾಲೆಗಳಿಗೆ ಮಧ್ಯಾಹ್ನದ ಆಹಾರವನ್ನು ಒದಗಿಸಲಾಗುತ್ತದೆ ಹಾಗೂ ಇದು ಪ್ರಸ್ತುತ ಪ್ರಧಾನ ಮಂತ್ರಿ ಪೋಷಣ ಶಕ್ತಿ ಯೋಜನೆಯ ಅಡಿಯಲ್ಲಿ ಪಿಎಂ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರದ 148 ಶಾಲೆಯ ಲಕ್ಷಾಂತರ ಮಕ್ಕಳಿಗೆ ಆಹಾರವನ್ನು ನೀಡುತ್ತಿದೆ.
ಊಟ ತಯಾರಿಸಲು ಉತ್ತಮ ಗುಣಮಟ್ಟದ ಆಟೋಮಿಟಿಕ್ ಮಿಷಿನ್ ಅಳವಡಿಕೆ
ಈ ಅಡುಗೆ ಮನೆಯ ವಿಸ್ತಾರ ಮೂರು ಎಕರೆಗಳಷ್ಟು ದೊಡ್ಡದಿದೆ. ಇಲ್ಲಿ ಪ್ರತಿ ಗಂಟೆಗೆ ಒಂದು ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನು ತಯಾರಿಸಲಾಗುತ್ತದೆ. ಅದಲ್ಲದೆ ಎರಡು ಗಂಟೆಗಳಲ್ಲಿ 1100 ಲೀಟರ್ ದಾಲ್ ಅನ್ನು ತಯಾರಿಸಬಹುದು, 40 ನಿಮಿಷಗಳಲ್ಲಿ 135 ಕೆ.ಜಿ ಅನ್ನ ಮತ್ತು 1100 ಲೀಟರ್ ಅಷ್ಟು ಸಾಂಬಾರು ತಯಾರಿಸಲಾಗುತ್ತದೆ. ಇಲ್ಲಿ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟ ತಯಾರಿಸಲು ಉತ್ತಮ ಗುಣಮಟ್ಟದ ಕೆಲವು ಆಟೋಮಿಟಿಕ್ ಮಿಷಿನ್ ಗಳನ್ನು ಅಳವಡಿಸಲಾಗಿದೆ.
ಇದನ್ನೂ ಓದಿ: Cloudburst: ಅಮರನಾಥ ಗುಹೆ ಬಳಿ ಮರಣಮೃದಂಗ! ಭಾರೀ ಮೇಘಸ್ಫೋಟಕ್ಕೆ 15 ಮಂದಿ ಸಾವು
ಈ ಅಡುಗೆ ಮನೆಯಲ್ಲಿ ರೊಟ್ಟಿಗಳನ್ನು ತಯಾರಿಸಲು ಅಟೋಮೆಟಿಕ್ ಮಿಷಿನ್ ಅನ್ನು ಬಳಸುತ್ತಾರೆ. ಈ ಮಿಷಿನ್ ಅನ್ನು ಬಳಸುವ ಮೂಲಕ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ರೊಟ್ಟಿಗಳನ್ನು ತಯಾರಿಸಬಹುದು. ಅದಲ್ಲದೆ ಇಲ್ಲಿ ಕನಿಷ್ಠ 300 ಜನ ಕೆಲಸಗಾರರು ಮಕ್ಕಳಿಗೆ ಸೂಕ್ತ ಸಮಯದಲ್ಲಿ ಆಹಾರ ನೀಡಲು ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ.
ಅಖಿಲ ಭಾರತೀಯ ಶಿಕ್ಷಾ ಸಮಾಗಮ್ ಉದ್ಘಾಟನೆ
ಅಕ್ಷಯ ಪಾತ್ರೆ ಮಿಡ್ಡೇ ಮಿಲ್ಸ್ ಕಿಚನ್ ಉದ್ಘಾಟನೆಯ ನಂತರ ಪ್ರಾಧಾನ ಮಂತ್ರಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಸಹಕಾರ ಮತ್ತು ಕನ್ವೆನ್ಷನ್ ಸೆಂಟರ್ ರುದ್ರಾಕ್ಷಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕುರಿತು 'ಅಖಿಲ ಭಾರತೀಯ ಶಿಕ್ಷಾ ಸಮಾಗಮ್' ಅನ್ನು ಉದ್ಘಾಟಿಸಿದ್ದಾರೆ.
ಅದಾದ ನಂತರ ಸಂಜೆ ಸುಮಾರು ನಾಲ್ಕು ಗಂಟೆ ಸಮಯಕ್ಕೆ ಸಿಗ್ರಾದ ಡಾ.ಸಂಪೂರ್ಣಾನಂದ ಸ್ಪೋರ್ಟ್ಸ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು, ಅಲ್ಲಿ 1800 ಕೋಟಿ ರೂಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ರೀತಿಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದರು.
ಇದನ್ನೂ ಓದಿ: Cooking Oil Prices: ಅಡುಗೆ ಎಣ್ಣೆ ಬೆಲೆ ಇಳಿಸುವಂತೆ ಕಂಪನಿಗಳಿಗೆ ಸರ್ಕಾರದ ತಾಕೀತು
ಅಕ್ಷಯ ಪಾತ್ರೆ ಸಂಸ್ಥೆಯು ಜಾತ್ಯಾತೀತ ಆಗಿದ್ದು ಅದಕ್ಕೆ ಯಾವುದೇ ಲಾಭ ಪಡೆಯುವ ಉದ್ದೇಶ ಇರುವುದಿಲ್ಲ. ಇದರ ಉದ್ದೇಶ ಭಾರತದಲ್ಲಿ ಮಕ್ಕಳಿಗೆ ಸೂಕ್ತ ಹಾಗೂ ಒಳ್ಳೆಯ ಗುಣಮಟ್ಟದ ಮಧ್ಯಾಹ್ನದ ಆಹಾರವನ್ನು ನೀಡುವುದು. ಭಾರತದಲ್ಲಿ ಒಟ್ಟು 1.8 ಮಿಲಿಯನ್ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ತಯಾರಿಸಿ, ಸಾಗಿಸಿ ಬಡಿಸುತ್ತದೆ ಈ ಸಂಸ್ಥೆ. ಅಕ್ಷಯ ಪಾತ್ರೆ ಸಂಸ್ಥೆ ಭಾರತದ 14 ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಪಸ್ಥಿತವಿದ್ದು 19,257 ಶಾಲೆಗಳಿಗೆ ಸೇವೆ ಸಲ್ಲಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ