• Home
  • »
  • News
  • »
  • national-international
  • »
  • Farewell Dinner: ನಿರ್ಗಮಿತ ರಾಷ್ಟ್ರಪತಿ ಕೋವಿಂದ್​ಗೆ ಪ್ರಧಾನಿ ಮೋದಿಯಿಂದ ವಿಶೇಷ ಬೀಳ್ಕೊಡುಗೆ ಭೋಜನ

Farewell Dinner: ನಿರ್ಗಮಿತ ರಾಷ್ಟ್ರಪತಿ ಕೋವಿಂದ್​ಗೆ ಪ್ರಧಾನಿ ಮೋದಿಯಿಂದ ವಿಶೇಷ ಬೀಳ್ಕೊಡುಗೆ ಭೋಜನ

ರಮನಾಥ್ ಕೋವಿಂದ್ ಹಾಗೂ ನರೇಂದ್ರ ಮೋದಿ

ರಮನಾಥ್ ಕೋವಿಂದ್ ಹಾಗೂ ನರೇಂದ್ರ ಮೋದಿ

Farewell Dinner: ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಗಮಿತಗ ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರಿಗೆ ವಿಶೇಷ ಬೀಳ್ಕೊಡುಗೆ ಭೋಜನ ಆಯೋಜಿಸಿದ್ದಾರೆ. ಈ ಭೋಜನ ಕೂಟದಲ್ಲಿ ಬಹಳಷ್ಟು ವಿಶೇಷ ಅತಿಥಿಗಳು ಭಾಗವಹಿಸಲಿದ್ದಾರೆ.

  • Share this:

ದೆಹಲಿ(ಜು.22): ದ್ರೌಪದಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಇದೀಗ ನಿರ್ಗಮಿತ ರಾಷ್ಟ್ರಪತಿ ರಮನಾಥ್ ಕೋವಿಂದ್ (Ramanath Kovind) ಅವರ ಅಧಿಕಾರಾವಧಿ ಮುಗಿದಿದ್ದು ಅವರನ್ನು ಪ್ರೀತಿಯಿಂದ ಬೀಳ್ಕೊಡಲಾಗುತ್ತಿದೆ. ರಮನಾಥ್ ಕೋವಿಂದ್ ಅವರಿಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫೇರ್​ವೆಲ್ ಡಿನ್ನರ್ (Farewell Dinner) ಅನ್ನು ಆಯೋಜಿಸಿದ್ದಾರೆ. ವಿಶೇಷವಾದ ಈ ಭೋಜನ ಕೂಟದಲ್ಲಿ ಬಹಳಷ್ಟು ವಿಶೇಷ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 22 ರಂದು ಸಂಜೆ 5:30 ಕ್ಕೆ ನವದೆಹಲಿಯ ಹೋಟೆಲ್ ಅಶೋಕಾದಲ್ಲಿ (Hotel Ashoka) ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಬೀಳ್ಕೊಡುಗೆ ಔತಣಕೂಟವನ್ನು ಆಯೋಜಿಸಲಿದ್ದಾರೆ. ಜುಲೈ 13 ರಂದು ಗೌರವಾನ್ವಿತ ಭೇಟಿಗಾಗಿ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಕೋವಿಂದ್ ಅವರನ್ನು ಕೊನೆಯ ಬಾರಿ ಭೇಟಿಯಾದರು.


ಭಾರತದ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಹಾಲಿ ಅಧ್ಯಕ್ಷರು ಜುಲೈ 24 ರಂದು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಅವರ ಉತ್ತರಾಧಿಕಾರಿ ಜುಲೈ 25 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ರಾಮ್ ನಾಥ್ ಕೋವಿಂದ್ ಅವರು ಭಾರತದ 14 ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಜುಲೈ 25, 2017 ರಂದು ಪ್ರಮಾಣ ವಚನ ಸ್ವೀಕರಿಸಿದರು. ದಲಿತ ನಾಯಕರಾದ ಅವರು ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ನಂತರ 1994 ರಲ್ಲಿ ಮೊದಲು ರಾಜಕೀಯಕ್ಕೆ ಕಾಲಿಟ್ಟರು.


ಎರಡು ಅವಧಿಗೆ ಸೇವೆ


ಅವರು ಮಾರ್ಚ್ 2006 ರವರೆಗೆ 12 ವರ್ಷಗಳ ಕಾಲ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದರು. ನಂತರ ಅವರು 2015-2017 ರ ನಡುವೆ ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಕೋವಿಂದ್ ಅವರು ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಸುಮಾರು 16 ವರ್ಷಗಳ ಕಾಲ ಅಭ್ಯಾಸ ಮಾಡಿದ ಅನುಭವವನ್ನು ಹೊಂದಿದ್ದಾರೆ.


ಮುರ್ಮು ಮನೆಗೆ ಮೋದಿ ಭೇಟಿ


ದ್ರೌಪದಿ ಮುರ್ಮು ಸಂಸದರಿಂದ ಭಾರೀ ಬೆಂಬಲವನ್ನು ಪಡೆಯುವುದರೊಂದಿಗೆ ಶೀಘ್ರದಲ್ಲೇ ಭಾರತದ ಮುಂದಿನ ರಾಷ್ಟ್ರಪತಿಯಾಗಿ ನೇಮಕಗೊಳ್ಳಲಿದ್ದಾರೆ. ಪ್ರಧಾನಿ ಮೋದಿ ಅವರ ಮನೆಗೆ ಭೇಟಿ ನೀಡುವ ನಿರೀಕ್ಷೆಯಿದೆ. ದ್ರೌಪದಿ ಮುರ್ಮು ನಿವಾಸಕ್ಕೆ ಪ್ರಧಾನಿ ಆಗಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.


ಇದನ್ನೂ ಓದಿ: Draupadi Murmu: ಭಾರತದ ರಾಷ್ಟ್ರಪತಿಗಳ ವೇತನ ಎಷ್ಟು ಗೊತ್ತೇ? ದ್ರೌಪದಿ ಮುರ್ಮು ಪಡೆಯುವ ಸಂಬಳವಿದು


ಫೇರ್​ವೆಲ್ ಡಿನ್ನರ್ ಎಂದರೇನು?


ಸಂಸ್ಥೆ, ಕಚೇರಿ, ಸಂಘಟನೆ ಅಥವಾ ಉದ್ಯೋಗವನ್ನು, ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ಪೂರೈಸಿ ವ್ಯಕ್ತಿಯೊಬ್ಬರು ಅಲ್ಲಿಂದ ನಿರ್ಗಮಿಸುವಾಗ ಅವರನ್ನು ಪ್ರೀತಿಯಿಂದ ಬೀಳ್ಕೊಡಲು ಆಯೋಜಿಸುವ ವಿಶೇಷವಾದ ಭೋಜನಕೂಟವನ್ನು ಫೇರ್​ವೆಲ್ ಡಿನ್ನರ್ ಎಂದು ಹೇಳಲಾಗುತ್ತದೆ.
ಅಮಿತ್ ಶಾ ಅವರಿಂದ ಶುಭಾಶಯ


ರಾಷ್ಟ್ರಪತಿಯಾಗಿ (President) ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರ ಗೆಲುವಿಗಾಗಿ ಗೃಹ ಸಚಿವ ಅಮಿತ್ ಶಾ (Amit Shah) ಅಭಿನಂದನೆ ಸಲ್ಲಿಸಿದ್ದಾರೆ. ಎನ್‌ಡಿಎ (NDA) ಅಭ್ಯರ್ಥಿ ಮುರ್ಮು ಪರವಾಗಿ ದೊಡ್ಡ ಪ್ರಮಾಣದ ಅಡ್ಡ ಮತದಾನ ನಡೆದಿದ್ದರಿಂದ ಪಕ್ಷಗಳಾದ್ಯಂತ ಅವರು ಬೆಂಬಲ ಗಳಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು. ವಿರೋಧ ಪಕ್ಷಗಳ 126 ಶಾಸಕರು ಮತ್ತು 17 ಸಂಸದರು ಎನ್‌ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸಿದ್ದಾರೆ.


ಇದನ್ನೂ ಓದಿ: Amit Shah: ಮುರ್ಮು ಗೆಲುವು ಪ್ರಜಾಪ್ರಭುತ್ವದ ಶಕ್ತಿ ತೋರಿಸುತ್ತೆ ಎಂದ ಅಮಿತ್ ಶಾ


ಮೋದಿ ಜಿಯವರ ನಾಯಕತ್ವದಲ್ಲಿ, ಬುಡಕಟ್ಟು ಮಹಿಳೆ ಹೆಮ್ಮೆಯ ಶ್ರೀಮತಿ ದ್ರೌಪದಿ ಮುರ್ಮು ಜಿ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ನಾನು ಎನ್‌ಡಿಎ ಮಿತ್ರಪಕ್ಷಗಳು, ಇತರ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಜನಪ್ರತಿನಿಧಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭಾರತದ 15 ನೇ ರಾಷ್ಟ್ರಪತಿಯಾಗಿ ಮುರ್ಮು ಜಿ ಅವರ ಅಧಿಕಾರಾವಧಿಯು ದೇಶಕ್ಕೆ ಹೆಚ್ಚು ಹೆಮ್ಮೆ ತರುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

Published by:Divya D
First published: