Independence Day: ಸತತ 9ನೇ ಬಾರಿ ಕೆಂಪು ಕೋಟೆಯಿಂದ ತ್ರಿವರ್ಣ ಧ್ವಜ ಹಾರಿಸಲಿರುವ ಪಿಎಂ ಮೋದಿ!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 15 ರ ಸಂದರ್ಭದಲ್ಲಿ ತಮ್ಮ ಸರ್ಕಾರವು ತೆಗೆದುಕೊಂಡ ಕ್ರಮಗಳ ಪ್ರಮುಖ ಫಲಿತಾಂಶಗಳ ಕುರಿತು ಆಗಾಗ್ಗೆ ಮಾತನಾಡುತ್ತಾರೆ ಮತ್ತು ಅಲ್ಲದೇ ಅನೇಕ ಬಾರಿ ಪ್ರಮುಖ ಘೋಷಣೆಗಳನ್ನೂ ಮಾಡಿದ್ದಾರೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ನವದೆಹಲಿ(ಆ.15): ಭಾರತವು ತನ್ನ ಏಳೂವರೆ ದಶಕಗಳ ಸ್ವಾತಂತ್ರ್ಯವನ್ನು ಗುರುತಿಸಲು ಸಜ್ಜಾಗಿದೆ, ಆಗಸ್ಟ್ 15, 1947 ರಂದು ಲಭಿಸಿತ್ತು. ಹೀಗಿರುವಾಗ ದೇಶವು 'ಆಜಾದಿ ಕಾ ಅಮೃತ್ ಮಹೋತ್ಸವ'ವನ್ನು () ಆಚರಿಸುತ್ತಿದೆ, ಸ್ವಾತಂತ್ರ್ಯದ 76 ನೇ ವರ್ಷವನ್ನು ಗುರುತಿಸಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸೋಮವಾರ ಸತತ ಒಂಬತ್ತನೇ ಬಾರಿಗೆ ಕೆಂಪು ಕೋಟೆಯ (Red Fort) ಆವರಣದಿಂದ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಈ ವರ್ಷದ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದು 75 ನೇ ವರ್ಷಾಚರಣೆ ನಡೆಯುತ್ತಿರುವುದರಿಂದ ವಿಶೇಷವಾಗಿದೆ. ಹೀಗಿರುವಾಗ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ‘ಹರ್ ಘರ್ ತಿರಂಗ’ (Har Ghar tiranga) ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಆರಂಭಿಸಿದೆ.

ಇದನ್ನೂ ಓದಿ:  Independence Day 2022: ಭಾರತದಾದ್ಯಂತ ಪ್ರತಿಧ್ವನಿಸುತ್ತದೆ ಹರ್ ಘರ್ ತಿರಂಗ ಅಭಿಯಾನ, ಎಲ್ಲೆಲ್ಲಿ ಹೇಗಿದೆ ನೋಡಿ

ಇನ್ನು ಸ್ವಾತಂತ್ರ್ಯೋತ್ಸವದ ಭಾಷಣದ ಸಂದರ್ಭದಲ್ಲಿ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಪ್ರಮುಖ ಫಲಿತಾಂಶಗಳ ಕುರಿತು ಪ್ರಧಾನಿ ಮೋದಿ ಆಗಾಗ್ಗೆ ಮಾತನಾಡುತ್ತಾರೆ ಮತ್ತು ಕೆಲವೊಮ್ಮೆ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಕಳೆದ ವರ್ಷ ತಮ್ಮ ಭಾಷಣದಲ್ಲಿ ಅವರು ರಾಷ್ಟ್ರೀಯ ಹೈಡ್ರೋಜನ್ ಮಿಷನ್, ಗತಿ ಶಕ್ತಿ ಮಾಸ್ಟರ್ ಪ್ಲಾನ್ ಮತ್ತು 75 ವಾರಗಳಲ್ಲಿ 75 ವಂದೇ ಭಾರತ್ ರೈಲುಗಳನ್ನು ಓಡಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ: Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್​ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು

2020 ರಲ್ಲಿ, ಪ್ರಧಾನಿ ಮೋದಿ ಅವರು ಆರು ಲಕ್ಷಕ್ಕೂ ಹೆಚ್ಚು ಹಳ್ಳಿಗಳನ್ನು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ನೊಂದಿಗೆ ಸಂಪರ್ಕಿಸುವ ಕೆಲಸವನ್ನು 1,000 ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು. ಪ್ರತಿ ನಾಗರಿಕರಿಗೂ ಡಿಜಿಟಲ್ ಆರೋಗ್ಯ ಗುರುತಿನ ಚೀಟಿ ನೀಡುವ ಸರ್ಕಾರದ ಯೋಜನೆಯನ್ನು ಅವರು ಪ್ರಸ್ತಾಪಿಸಿದರು. 2019 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಅವರು ಮುಖ್ಯ ರಕ್ಷಣಾ ಮುಖ್ಯಸ್ಥ ಹುದ್ದೆಯನ್ನು ಮಾಡುವ ಪ್ರಮುಖ ಘೋಷಣೆಯನ್ನು ಮಾಡಿದ್ದರು.
Published by:Precilla Olivia Dias
First published: