ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ; ಕಲಂ 370 ರದ್ದು ಪ್ರಸ್ತಾಪ ಸಾಧ್ಯತೆ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ವಿಧಿ 370ಅನ್ನು ರದ್ದು ಮಾಡುವಂತೆ ಮಂಗಳವಾರ ಲೋಕಸಭೆಯಲ್ಲಿ ಸಲ್ಲಿಸಿದ್ದ ಮಸೂದೆಗೆ ಅಂಗೀಕಾರ ಸಿಕ್ಕಿದೆ

Seema.R | news18-kannada
Updated:August 8, 2019, 3:01 PM IST
ಇಂದು ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ; ಕಲಂ 370 ರದ್ದು ಪ್ರಸ್ತಾಪ ಸಾಧ್ಯತೆ
ನರೇಂದ್ರ ಮೋದಿ
  • Share this:
ನವದೆಹಲಿ (ಆ.8): ಪ್ರಧಾನಿ ಮೋದಿ ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಭಾಷಣ ಆಕಾಶವಾಣಿಯಲ್ಲಿ ವಿಶೇಷ ಪ್ರಸಾರವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ವಿಧಿ 370ನ್ನು ರದ್ದು ಮಾಡಿರುವ ಕುರಿತು ಅವರು ಮಾತನಾಡುವ ಸಾಧ್ಯತೆ ಇದೆ.

ಕಳೆದ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾರ್ಚ್​ 27ರಂದು ಮಾತನಾಡಿದ ಅವರು ಎಸ್ಯಾಟ್​ ಯಶಸ್ಸಿನ ಬಗ್ಗೆ ತಿಳಿಸಿದ್ದರು. ಉಪಗ್ರಹವನ್ನು ಹೊಡೆದುಹಾಕಿದ್ದು ಭಾರತ ನಾಲ್ಕನೇ ಸೂಪರ್​ ಪವರ್​ ದೇಶವಾದ ಕುರಿತು ದೇಶಕ್ಕೆ ತಿಳಿಸಿದ್ದರು.ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ವಿಧಿ 370ಅನ್ನು ರದ್ದು ಮಾಡುವಂತೆ ಮಂಗಳವಾರ ಲೋಕಸಭೆಯಲ್ಲಿ ಸಲ್ಲಿಸಿದ್ದ ಮಸೂದೆಗೆ ಅಂಗೀಕಾರ ಸಿಕ್ಕಿದೆ. ಅಲ್ಲದೇ  ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಲು ಸರ್ಕಾರ ಅಸ್ತು ನೀಡಿದೆ.ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತು ಕಣಿವೆಯ 7 ಮಿಲಿಯನ್​ ಜನರಿಗೆ ಯಾವುದೇ ಮಾಹಿತಿ ಇಲ್ಲ. ಇಲ್ಲಿನ ಸರ್ಕಾರಗಳು ಅಂತರ್ಜಾಲ, ದೂರವಾಣಿ ಸೇರಿದಂತೆ ಇನ್ನಿತರ ಸಂಪರ್ಕವನ್ನು ಕಡಿತಗೊಳ್ಳಿಸಿದ್ದು, ಈ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇಲ್ಲ.

ಇದನ್ನು ಓದಿ: ಮಹಾರಾಷ್ಟ್ರ, ಒಡಿಶಾ, ಕೇರಳದಲ್ಲೂ ರೆಡ್​ ಆಲರ್ಟ್​​; ಕೊಯಿಮತ್ತೂರಿನಲ್ಲಿ ಮಳೆಗೆ ಇಬ್ಬರ ಬಲಿ

ಈ ನಿರ್ಧಾರವನ್ನು ಸರ್ಕಾರ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮುನ್ನ ಜಮ್ಮು ಕಾಶ್ಮೀರದಲ್ಲಿ ಸೇನೆ ಭದ್ರತೆಯನ್ನು ಹೆಚ್ಚಿಸಿತು. ಅಲ್ಲದೆ ಅಮರನಾಥ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ತಮ್ಮ ಪ್ರವಾಸ ಮೊಟಕು ಮಾಡುವಂತೆ ಸೂಚನೆ ನೀಡಲಾಗಿತ್ತು.

ಅಲ್ಲದೇ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್​ ಅಬ್ದುಲ್ಲಾ ಹಾಗೂ ಮೆಹಬೂಬ್​ ಮುಫ್ತಿಯವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಗೃಹಬಂಧನದಲ್ಲಿ ಇರಿಸಲಾಗಿತ್ತು.

ಸ್ವಾತಂತ್ರ ದಿನಾಚರಣೆಯಂದು ಕೆಂಪು ಕೋಟೆಯಲ್ಲಿ ಸಂಪ್ರದಾಯಿಕ ಭಾಷಣ ಮಾಡುವ ಮುನ್ನವೇ ದೇಶವನ್ನು ಉದ್ದೇಶಿಸಿ ಅವರು ಮಾತನಾಡಲು ಹೊರಟಿರುವುದು ಕುತೂಹಲ ಮೂಡಿಸಿದೆ.

First published:August 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ