HOME » NEWS » National-international » PM MODI TO ADDRESS FARMERS IN MADHYA PRADESH TOMORROW AMID PROTESTS AGAINST AGRI LAWS RHHSN

ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡುವೆ ನಾಳೆ ಮಧ್ಯಪ್ರದೇಶ ರೈತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ಪ್ರತಿಭಟನೆ ಮಾಡುವುದು ರೈತರ ಹಕ್ಕು. ಆದರೆ, ಅದು ಅಶಾಂತಿಗೆ ತಿರುಗಬಾರದು ಎಂದು ಪೀಠದಲ್ಲಿದ್ದ ನ್ಯಾ.ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಹೇಳಿದರು.  ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ, ರೈತರು ಮತ್ತು ಸರ್ಕಾರ ಮಾತುಕತೆ ನಡೆಸಿದರೆ ಉತ್ತಮ ನಿರ್ಧಾರಕ್ಕೆ ಬರಬಹುದು. ಆ ಪ್ರಯತ್ನ ಸುಗಮಗೊಳಿಸಲು ನಾವು ಬಯಸುತ್ತೇವೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದರು.

news18-kannada
Updated:December 17, 2020, 3:29 PM IST
ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡುವೆ ನಾಳೆ ಮಧ್ಯಪ್ರದೇಶ ರೈತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ
ನರೇಂದ್ರ ಮೋದಿ
  • Share this:
ನವದೆಹಲಿ; ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಏತನ್ಮಧ್ಯೆ ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದಲ್ಲಿ ರೈತರನ್ನುಉದ್ದೇಶಿಸಿ ಮಾತನಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಅವರು ನಾಳೆ ಮಧ್ಯಾಹ್ನ 2 ಗಂಟೆಗೆ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ಮಧ್ಯಪ್ರದೇಶ ರಾಜ್ಯದ 23 ಸಾವಿರ ಹಳ್ಳಿಗಳಲ್ಲಿ ಪ್ರಸಾರವಾಗಲಿದೆ.

ದೆಹಲಿ ಗಡಿಯ ಸುತ್ತ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಕುರಿತು ಅನೇಕ ಅರ್ಜಿಗಳ  ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಟೀಕೆಗಳ ನಡುವೆ ಕೇಂದ್ರ ಸರ್ಕಾರ ರೈತರನ್ನು ತಲುಪಲು ಹೊಸ ಪ್ರಯತ್ನ ಇದಾಗಿದೆ.

ಶಾಂತಿಯುತ ಪ್ರತಿಭಟನೆ ರೈತರ ಹಕ್ಕು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿತ್ತು. ಮತ್ತು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ಬಿಕ್ಕಟ್ಟನ್ನು ಪರಿಹರಿಸಲು ಕೃಷಿ ತಜ್ಞರು ಮತ್ತು ರೈತ ಸಂಘಗಳ ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಸಮಿತಿಯನ್ನು ಸ್ಥಾಪಿಸುವ ಬಗ್ಗೆಯೂ ಕೋರ್ಟ್ ಸಲಹೆ ನೀಡಿತ್ತು.

ಇದನ್ನು ಓದಿ: Farmers Protest: ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ರೈತರ ಹೋರಾಟ ಮುಂದುವರೆಯಬೇಕು; ಸುಪ್ರೀಂ ಕೋರ್ಟ್​

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ನ್ಯಾಯಪೀಠವೂ, ಕೃಷಿ ಸುಧಾರಣೆ ಕಾಯ್ದೆ ವಿರುದ್ಧ ಎದ್ದಿರುವ ಸಮಸ್ಯೆ ಪರಿಹಾರಕ್ಕೆ ಸಮಿತಿಯೊಂದನ್ನು ರಚಿಸಬೇಕಿದೆ. ಪಿ.ಸಾಯಿನಾಥ್ ಅಂತಹ ಕೃಷಿ ತಜ್ಞರು ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ಹಾಗೂ ರೈತ ಸಂಘಗಳ ಸದಸ್ಯರ ಸಮಿತಿ ರಚಿಸಿ ಸಮಸ್ಯೆಗೆ ಪರಿಹರಿಸಿಕೊಳ್ಳುವಂತೆ ಹೇಳಿತ್ತು.

ಪ್ರತಿಭಟನೆ ಮಾಡುವುದು ರೈತರ ಹಕ್ಕು. ಆದರೆ, ಅದು ಅಶಾಂತಿಗೆ ತಿರುಗಬಾರದು ಎಂದು ಪೀಠದಲ್ಲಿದ್ದ ನ್ಯಾ.ಎ.ಎಸ್.ಬೋಪಣ್ಣ ಹಾಗೂ ವಿ.ರಾಮಸುಬ್ರಮಣಿಯನ್ ಹೇಳಿದರು.  ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ, ರೈತರು ಮತ್ತು ಸರ್ಕಾರ ಮಾತುಕತೆ ನಡೆಸಿದರೆ ಉತ್ತಮ ನಿರ್ಧಾರಕ್ಕೆ ಬರಬಹುದು. ಆ ಪ್ರಯತ್ನ ಸುಗಮಗೊಳಿಸಲು ನಾವು ಬಯಸುತ್ತೇವೆ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದರು.
Published by: HR Ramesh
First published: December 17, 2020, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories