HOME » NEWS » National-international » PM MODI THANKS TO RIL CHAIRMAN MUKESH AMBANI FOR WHO GAVE 500 CRORE TO PM CARES FUND RH

ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ, 500 ಕೋಟಿ ರೂ. ನೀಡಿದ ರಿಲಯನ್ಸ್​ ಪರಿವಾರಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ಪರಿಹಾರ ನಿಧಿಗೆ 500 ಕೋಟಿ ಧನಸಹಾಯ ಘೋಷಿಸಿದ್ದ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ತಿಳಿಸಿದ್ದಾರೆ.

news18-kannada
Updated:March 31, 2020, 7:24 PM IST
ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ, 500 ಕೋಟಿ ರೂ. ನೀಡಿದ ರಿಲಯನ್ಸ್​ ಪರಿವಾರಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ.
  • Share this:
ನವದೆಹಲಿ: ಮಾರಕ ಮಹಾಮಾರಿ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸುವುದರ ಜೊತೆಗೆ ಭಾರತದಲ್ಲೂ ಭೀತಿ ಹುಟ್ಟುಹಾಕಿದೆ. ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಇಡೀ ದೇಶವನ್ನು 21 ದಿನಗಳ ಕಾಲ ಲಾಕ್​ಡೌನ್ ಮಾಡಲಾಗಿದೆ. ಮಾರಕ ಸೋಂಕು ಮಾನವನ ಆರೋಗ್ಯದ ಜೊತೆಗೆ ದೇಶದ ಅರ್ಥ ವ್ಯವಸ್ಥೆ ಮೇಲೂ ಗಂಭೀರ ಪರಿಣಾಮ ಬೀರಿದೆ. ಈ ನಿಟ್ಟಿನಲ್ಲಿ ಹಲವು ಉದ್ಯಮಿಗಳು, ಸಿನಿಮಾ ನಟರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ನೆನ್ನೆ ಪ್ರಧಾನಮಂತ್ರಿ ಕೊರೋನಾ ಪರಿಹಾರ ನಿಧಿಗೆ 500 ಕೋಟಿ ಧನಸಹಾಯ ಘೋಷಿಸಿದ್ದ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕೃತಜ್ಞತೆ ತಿಳಿಸಿದ್ದಾರೆ.

ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, "ಕೋವಿಡ್-19 ವಿರುದ್ಧ ಹೋರಾಟದಲ್ಲಿ ಇಡೀ ರಿಲಾಯನ್ಸ್​ ಪರಿವಾರ ಪರಿಣಾಮಕಾರಿಯಾಗಿ ಕೊಡುಗೆ ಸಲ್ಲಿಸುತ್ತಿದೆ. ಅದು ಆರೋಗ್ಯ ಸೇವೆಯಲ್ಲಾಗಿರಬಹುದು ಅಥವಾ ಜನರಿಗೆ ಸಹಾಯ ಮಾಡುವುದರಲ್ಲಿ ಸಕ್ರಿಯವಾಗಿದೆ. ಪ್ರಧಾನಮಂತ್ರಿ ಕೊರೋನಾ ನಿಧಿಗೆ ಕೊಡುಗೆ ನೀಡಿದ ಮತ್ತು ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ಕೈ ಜೋಡಿಸಿರುವ ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ ಮುಖ್ಯಸ್ಥರಾದ ಮುಖೇಶ್ ಮತ್ತು ನೀತಾ ಅಂಬಾನಿ ಅವರಿಗೆ ಧನ್ಯವಾದಗಳು," ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನು ಓದಿ: ರಿಲಯನ್ಸ್​ನಿಂದ ಪ್ರಧಾನಮಂತ್ರಿ ಕೊರೋನಾ ನಿಧಿಗೆ 500 ಕೋಟಿ ರೂಪಾಯಿ ದೇಣಿಗೆ

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಪ್ರಧಾನಮಂತ್ರಿ ಕೊರೋನಾ ನಿಧಿಗೆ 500 ಕೋಟಿ ಜೊತೆಗೆ ಇತರೆ ರಾಜ್ಯಗಳಿಗೂ ಪ್ರತ್ಯೇಕವಾಗಿ ದೇಣಿಗೆ ನೀಡಿದೆ. ಈ ಸಂಬಂಧ ಮಾತನಾಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟಡ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಕೊರೋನಾ ವೈರಸ್​ ಬಿಕ್ಕಟ್ಟಿನಿಂದ ದೇಶದ ಶೀಘ್ರದಲ್ಲಿ ಹೊರಬರಲಿದೆ ಎಂಬ ವಿಶ್ವಾಸವಿದೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ ಇಡೀ ಕುಟುಂಬ ರಾಷ್ಟ್ರದ ಜೊತೆಗೆ ಇದೆ ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಗೆಲವಿಗಾಗಿ ಮಾಡಬೇಕಾದ ಎಲ್ಲ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.
First published: March 31, 2020, 7:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories